ನೆರೆಯಿಂದಾಗಿ ಹಾನಿಗೊಳಗಾಗಿರುವ ಮನೆಗಳ ರಿಪೇರಿಗೆ ರೂ.5 ಲಕ್ಷ ಪರಿಹಾರ

ಪ್ರವಾಹದಿಂದ ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡುವ ಮಾನದಂಡವನ್ನು ರಾಜ್ಯ ಸರ್ಕಾರ ಬದಲಿಸಿದ್ದು, ಶೇ.25ರಿಂದ ಶೇ.75ರಷ್ಟು ಹಾನಿಯಾಗಿರುವ ಮನೆಗಳಿಗೆ ರೂ.5 ಲಕ್ಷ ಪರಿಹಾರ ಘೋಷಿಸಿದೆ. 
ಆರ್.ಅಶೋಕ್ (ಸಂಗ್ರಹ ಚಿತ್ರ)
ಆರ್.ಅಶೋಕ್ (ಸಂಗ್ರಹ ಚಿತ್ರ)

ವಿಧಾನಪರಿಷತ್: ಪ್ರವಾಹದಿಂದ ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡುವ ಮಾನದಂಡವನ್ನು ರಾಜ್ಯ ಸರ್ಕಾರ ಬದಲಿಸಿದ್ದು, ಶೇ.25ರಿಂದ ಶೇ.75ರಷ್ಟು ಹಾನಿಯಾಗಿರುವ ಮನೆಗಳಿಗೆ ರೂ.5 ಲಕ್ಷ ಪರಿಹಾರ ಘೋಷಿಸಿದೆ. 

ವಿಧಾನಪರಿಷತ್ ನಲ್ಲಿ ನೆರೆ ಪರಿಸ್ಥಿತಿ ಹಾಗೂ ಪರಿಹಾರ ಕುರಿತು ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್ ಚರ್ಚಿಸುವ ವೇಳೆ ಮಧ್ಯೆ ಪ್ರವೇಶಿಸಿ ಈ ವಿಚಾರ ಪ್ರಕಟಿಸಿದ ಕಂದಾಯ ಸಚಿವ ಅಶೋಕ್ ಅವರು, ಹಾಲಿ ಶೇ.25ರಿಂದ 75ರಷ್ಟು ಹಾನಿಗೆ ಒಳಗಾದ ಮನೆಗಳ ದುರಸ್ಥಿಗೆ ರೂ.1 ಲಕ್ಷ ನಿಗದಿಯಾಗಿತ್ತು ಎಂದು ಹೇಳಿದರು. ಇದೇ ವೇಳೆ ಶೇ.15ರಿಂದ 25ರಷ್ಟು ಹಾನಿಯಾಗಿರುವ ಮನೆಗಳ ದುರಸ್ತಿಗೆ ನೀಡುತ್ತಿದ್ದ ಮೊತ್ತವನ್ನು ರೂ.25 ಸಾವಿರದಿಂದ 50 ಸಾವಿರಕ್ಕೆ ಹೆಚ್ಚಿಸಲಾಗುವುದು. ಅನಧಿಕೃತ ಜಾಗದಲ್ಲಿ ಕಟ್ಟಿದ ಮನೆಗಳಿಗೆ ಹಾನಿಯಾಗಿದ್ದರೂ ಸಹ ರೂ.10 ಸಾವಿರ ಪರಿಹಾರ ನೀಡಲಾಗುವುದು ಎಂದು ಹೇಳಿದ್ದಾರೆ. 

ಪ್ರವಾಹದಿಂದ ಒಟ್ಟು 1,20,406 ಮನೆಗಳಿಗೆ ಹಾನಿಯಾಗಿದೆ. ಈ ಮೊದಲು ಮನೆ ಹಾನಿಯ ಪ್ರಮಾಣ ಆಧರಿಸಿ ಪರಿಹಾರ ನೀಡಲು ಎ,ಬಿ ಮತ್ತು ಸಿ ಎಂದು ವರ್ಗೀಕರಣ ಮಾಡಲಾಗಿತ್ತು. ಆದರೆ, ಈಗ ಎರಡು ವರ್ಗೀಕರಣ ಮಾಡಲಾಗಿದೆ. ಅದರಂತೆ ಶೇ.25ರಿಂದ 75ರಷ್ಟು ಮನೆ ಹಾನಿಯಾಗಿದ್ದರೆ. ರೂ.1 ಲಕ್ಷ ಪರಿಹಾರ ನೀಡಲು ಉದ್ದೇಶಿಸಲಾಗಿದ್ದು. ಅದರಂತೆ ಅನೇಕರಿಗೆ ರೂ.1 ಲಕ್ಷ ಪರಿಹಾರ ಕೂಡ ನೀಡಲಾಗಿದೆ. ಆದರೆ, ಅನೇಕ ಕಡೆ ಮನೆ ಬಿರುಕು ಬಿಟ್ಟು ಅಪಾಯದ ಸ್ಥಿತಿಯಲ್ಲಿದೆ. ಹಾಗಾಗಿ ರೂ.5 ಲಕ್ಷ ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com