ಆರ್ ಎಫ್ ಒ ಗೆ ಬೆದರಿಕೆ: ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ, ಸಂಸದ ರಾಘವೇಂದ್ರ ’ಆಪ್ತ’ನ ವಿರುದ್ಧ ಪ್ರಕರಣ ದಾಖಲು

ರೇಂಜ್ ಅರಣ್ಯಾಧಿಕಾರಿಗೆ ಬೆದರಿಕೆ ಹಾಕಿದ್ದ ಜಿಲ್ಲಾ ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ ಹಾಗೂ ಲೋಕಸಭಾ ಸದಸ್ಯ ಬಿವೈ ರಾಘವೇಂದ್ರ ಬೆಂಬಲಿಗನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 

Published: 12th October 2019 03:53 PM  |   Last Updated: 12th October 2019 03:53 PM   |  A+A-


Police book BJP MP Raghavendra's 'aide' for threatening RFO

ಆರ್ ಎಫ್ ಒ ಗೆ ಬೆದರಿಕೆ: ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ, ಸಂಸದ ರಾಘವೇಂದ್ರ ’ಆಪ್ತ’ನ ವಿರುದ್ಧ ಪ್ರಕರಣ ದಾಖಲು

Posted By : Srinivas Rao BV
Source : Online Desk

ರೇಂಜ್ ಅರಣ್ಯಾಧಿಕಾರಿಗೆ ಬೆದರಿಕೆ ಹಾಕಿದ್ದ ಜಿಲ್ಲಾ ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ ಹಾಗೂ ಲೋಕಸಭಾ ಸದಸ್ಯ ಬಿವೈ ರಾಘವೇಂದ್ರ ಬೆಂಬಲಿಗನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 
 
ಬಿಜೆಪಿಯ ಯುವಮೋರ್ಚಾ ಕಾರ್ಯದರ್ಶಿ ಗಿರಿರಾಜ್ ಗಾಜನೂರು ಗ್ರಾಮದ ನಿವಾಸಿಯಾಗಿದ್ದು ಮತ್ತೋರ್ವ ಸರ್ಕಾರಿ ಅಧಿಕಾರಿಯ ಪರವಾಗಿದ್ದರು. 

ಅ.09 ರಂದು ಸಂಜೆ ನನಗೆ ಕರೆ ಮಾಡಿದ್ದ ಗಿರಿರಾಜ್, ಗಾಜನೂರಿನ ಗಣಪತಿ ದೇವಾಲಯದ ಬಳಿ ಇರುವ ಮಾವಿನ ಮರ ಕತ್ತರರಿಸಿದ್ದಕ್ಕಾಗಿ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಯೊಬ್ಬರಿಗೆ ನೊಟೀಸ್ ನೀಡಿರುವುದನ್ನು ಪ್ರಶ್ನಿಸಿದ್ದರು. ತಾನು ರಾಘವೇಂದ್ರ ಅವರ ಆಪ್ತನಾಗಿದ್ದು, ಇನ್ನೂ ಹಲವು ರಾಜಕಾರಣಿಗಳೊಂದಿಗೆ ನಿಕಟ ಸಂಪರ್ಕ ಹೊಂದಿರುವುದಾಗಿ ಹೇಳಿದ್ದ ಗಿರಿರಾಜ್ ನೀನು ಗಾಜನೂರಿಗೆ ಪ್ರವೇಶಿಸಿದಲ್ಲಿ ಥಳಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ಆರ್ ಎಫ್ಒ ಜಯೇಶ್ ಪೊಲೀಸರಿಗೆ ದೂರು ನೀಡಿದ್ದರು. ಆರ್ ಎಫ್ಒ ನ್ನು ಅಮಾನತುಗೊಳಿಸುವುದಾಗಿಯೂ ಬಿಜೆಪಿ ನಾಯಕ ಗಿರಿರಾಜ್ ಬೆದರಿಕೆ ಹಾಕಿದ್ದಾನೆ ಎಂದು ದೂರು ನೀಡಲಾಗಿದೆ. 

ವನ್ಯಜೀವಿಗಳಿಗೆ ಸಂಬಂಧ್ಸಿಇದಂತೆ ಸಕ್ರೆಬೈಲು ಆನೆ ಕ್ಯಾಂಪ್ ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿಯೂ ಗಿರಿರಾಜ್ ಅರಣ್ಯಾಧಿಕಾರಿ ಜಯೇಶ್ ನ್ನು ನಿಂದಿಸಿದ್ದು, ತಾವು ನೊಟೀಸ್ ಜಾರಿಮಾಡಿರುವುದಕ್ಕೂ ಗ್ರಾಮದ ನಿವಾಸಿಯಾಗಿರುವ ಬಿಜೆಪಿ ನಾಯಕ ಗಿರೀಶ್ ಗೂ ಸಂಬಂಧವೇ ಇಲ್ಲ ಆದರೂ ತಮ್ಮ ಕರ್ತವ್ಯಕ್ಕೆ ಅಡ್ಡಿ ಉಂಟುಮಾಡುತ್ತಿದ್ದಾರೆ ಎಂದು ಜಯೇಶ್ ಗಿರಿರಾಜ್ ವಿರುದ್ಧ ಆರೋಪ ಮಾಡಿದ್ದರು. ತನಗೆ ಬೆದರಿಕೆ ಹಾಕಿರುವ ಆಡಿಯೋ ಕ್ಲಿಪಿಂಗ್ ನ್ನು ಆರ್ ಎಫ್ಒ ಪೊಲೀಸರಿಗೆ ಸಲ್ಲಿಸಿದ್ದಾರೆ. 

Stay up to date on all the latest ರಾಜ್ಯ news
Poll
Defence minister Rajanath Singh

101 ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳಲು ನಿರ್ಬಂಧ ಹೇರುವ ಭಾರತದ ಕ್ರಮವು, ದೇಶೀಯ ಶಸ್ತ್ರಾಸ್ತ್ರ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆಯೆ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp