ನರಹಂತಕ ಹುಲಿ ಸೆರೆಯಲ್ಲಿ ಮಹತ್ತರ ಪಾತ್ರ: ಗುರ್ತಿಕೆಗಾಗಿ ಪರಿತಪಿಸುತ್ತಿದ್ದಾರೆ ಸೋಲಿಗರು

ಇಬ್ಬರು ರೈತರನ್ನು ಬಲಿಪಡೆದುಕೊಂಡು ಬಲೆಗೆ ಸಿಗದೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದ್ದ ನರಹಂತಕ ಹುಲಿ ಸೆರೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದ ಸೋಲಿಗರು, ಗುರ್ತಿಕೆಗಾಗಿ ಕಾಯುವಂತಹ ಪರಿಸ್ಥಿತಿ ಎದುರಾಗಿದೆ. 
ಸೋಲಿಗರು
ಸೋಲಿಗರು

ಮೈಸೂರು: ಇಬ್ಬರು ರೈತರನ್ನು ಬಲಿಪಡೆದುಕೊಂಡು ಬಲೆಗೆ ಸಿಗದೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದ್ದ ನರಹಂತಕ ಹುಲಿ ಸೆರೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದ ಸೋಲಿಗರು, ಗುರ್ತಿಕೆಗಾಗಿ ಕಾಯುವಂತಹ ಪರಿಸ್ಥಿತಿ ಎದುರಾಗಿದೆ. 

ಅರಣ್ಯ ಸಿಬ್ಬಂದಿಗಳು, ಆನೆಗಳು, ಡ್ರೋಣ್, ಕ್ಯಾಮೆರಾಗಳಲ್ಲದೆ ಹುಲಿ ಹಿಡಿಯಲು ಸೋಲಿಗರು ಮಹತ್ತರ ಪಾತ್ರವಹಿಸಿದ್ದರು. ಹುಲಿ ಹಿಡಿಯುವ ಕಾರ್ಯಾಚರಣೆ ವೇಳೆ ಸೋಲಿಗರು ಅಧಿಕಾರಿಗಳಿಗೆ ಸಾಕಷ್ಟು ಸಹಾಯ ಮಾಡಿದ್ದರು. ಬಂಡೀಪುರದಲ್ಲಿ ನರಹಂತಕ ಹುಲಿಯನ್ನು ಸೆರೆ ಹಿಡಿದ ಬಳಿಕ ಇಲ್ಲಿನ ಬಹುಸಂಖ್ಯೆ ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೊಡ್ಡ ನಿರಾಳ ಎದುರಾಗಿದೆ. ಆದರೆ, ಹುಲಿ ಹಿಡಿಯಲು ನೆರವಾಗಿದ್ದ ಸೋಲಿಗರು ಸಂಕಷ್ಟದಲ್ಲಿ ಜೀವನ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. 

ಬುಡಕಟ್ಟು ಸಮುದಾಯಕ್ಕೆ ಸೇರಿದ ಹಳಲೇಗೌಡ (48), ಹಲಮಲೆ ಗೌಡ, ಬಾಡೇಗೌಡ, ಶಿವಣ್ಣ ಗೌಡ ಅವರು ಹುಲಿ ಸೆರೆ ಸಾಕಷ್ಟು ಸಹಾಯ ಮಾಡಿತ್ತು. ಇದಕ್ಕೆ ಅರಣ್ಯ ಇಲಾಖೆ ರೂ.2,500ನ್ನು ಗೌರವ ಧನವಾಗಿ ನೀಡಿತ್ತು. 

ಇಂತಹ ಕಾರ್ಯಾಚರಣೆಗಳಿಗೆ ಬೆಳಗಾವಿಯ ಖಾನಾಪುರ ಹಾಗೂ ಬಳ್ಳಾರಿ ಜಿಲ್ಲೆಗಳಿಗೆ ಜನರನ್ನು ಕಳುಹಿಸಲಾಗುತ್ತದೆ. ಈವರೆಗೂ ನಡೆದಿರುವ ಎಲ್ಲಾ ಕಾರ್ಯಾಚರಣೆಗಳಲ್ಲೂ ಯಶಸ್ಸು ಕಂಡಿದ್ದೇವೆ. 15 ವರ್ಷಗಳಾದರೂ ನಮಗೆ ಸರಿಯಾದ ಗುರ್ತಿಕೆ ಸಿಗುತ್ತಿಲ್ಲ. ಪ್ರಾಣವನ್ನು ಪಣಕ್ಕಿಟ್ಟು ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುತ್ತೇವೆ. ಆದರೆ, ನಮಗೆ ಸೂಕ್ತ ರೀತಿಯಲ್ಲಿ ಹಣವನ್ನು ನೀಡಲಾಗುತ್ತಿಲ್ಲ. ಪ್ರತೀ ನಿತ್ಯದ ಕಾರ್ಯಾಚರಣೆಯಲ್ಲಿ ನಮಗೆ ರೂ.350ರಷ್ಟು ದಿನಗೂಲಿ ನೀಡಲಾಗುತ್ತದೆ ಎಂದು ಹಳಲೇಗೌಡ ಅವರು ಹೇಳಿದ್ದಾರೆ. 

ಸರ್ಕಾರ ನೀಡುವ ದಿನಗೂಲಿ ಅತ್ಯಂತ ಕಡಿಮೆಯಿದೆ. ಹೀಗಾಗಿ ನಮ್ಮ ಸಮುದಾಯದವರು ಇದೀಗ ಕೃಷಿಯತ್ತ ಮುಖ ಮಾಡುತ್ತಿದ್ದಾರೆ. ಅರಣ್ಯ ಶಿಬಿರಗಳಲ್ಲಿ ಕೆಲಸ ಮಾಡುವಂತೆ ಪುತ್ರನಿಗೆ ತಿಳಿಸಿದೆ ಆದರೆ, ಕಳೆದ 15 ವರ್ಷಗಳಿಂದ ನಮ್ಮ ಉದ್ಯೋಗವನ್ನು ಕ್ರಮಬದ್ಧಗೊಳಿಸುವಲ್ಲಿ ಇಲಾಖೆ ವಿಫಲವಾಗಿರುವ ಹಿನ್ನೆಲೆಯಲ್ಲಿ ಆತ ಒಪ್ಪಲಿಲ್ಲ ಎಂದು ತಿಳಿಸಿದ್ದಾರೆ. 

ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ರಾಮು ಮಾತನಾಡಿ, ಶ್ರೀಮಂತ ಸಸ್ಯ ಹಾಗೂ ಪ್ರಾಣಿಗಳ ರಕ್ಷಣೆಗೆ ಅರಣ್ಯ ಇಲಾಖೆ ಬುಡಕಟ್ಟು ಜನಾಂಗದವರ ಸಹಾಯ ಪಡೆಯುತ್ತದೆ. ಆದರೆ, ಗೌರವದಿಂದ ಕಾಣಲು, ಯೋಗ್ಯದ ವೇತನ ನೀಡುವಲ್ಲಿ ವಿಫಲವಾಗಿದೆ. ಅರಣ್ಯಾಧಿಕಾರಿಗಳಿಗೆ ಹೋಲಿಕೆ ಮಾಡಿದರೆ, ಬುಡಕಟ್ಟು ಜನಾಂಗದವರಿಗೆ ಅರಣ್ಯದ ಬಗ್ಗೆ ಸಾಕಷ್ಟು ತಿಳುವಳಿಕೆ ಹೊಂದಿದ್ದಾರೆ. ಬುಡಕಟ್ಟು ಜನಾಂಗದವರ ಸೇವೆಗಳನ್ನು ಸರ್ಕಾರ ಕ್ರಮಬದ್ಧಗೊಳಿಸಬೇಕೆಂದು ಈ ಮೂಲಕ ಆಗ್ರಹಿಸುತ್ತೇವೆಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com