ಹುಲಿ ಆಯ್ತು ಇದೀಗ ಕಾಡಾನೆ ಭೀತಿ: ದಾಳಿಗೆ 2 ರೈತರ ಸ್ಥಿತಿ ಗಂಭೀರ

ನರಹಂತಕ ಹುಲಿ ಸೆರೆ ಬಳಿಕ ಬಂಡೀಪುರದಲ್ಲಿ ಕಾಡಾನೆ ದಾಳಿ ಭೀತಿ ಎದುರಾಗಿದೆ. ಪುಂಡಾನೆಯೊಂದು ಮಂಗಳವಾರ ನಡೆಸಿದ ದಾಳಇಗೆ ಇಬ್ಬರು ರೈತರು ಗಂಭೀರವಾಗಿ ಗಾಯಗೊಂಡಿದ್ದು, ಜಾನುವಾರವೊಂದು ಮೃತಪಟ್ಟಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಾಮರಾಜನಗರ: ನರಹಂತಕ ಹುಲಿ ಸೆರೆ ಬಳಿಕ ಬಂಡೀಪುರದಲ್ಲಿ ಕಾಡಾನೆ ದಾಳಿ ಭೀತಿ ಎದುರಾಗಿದೆ. ಪುಂಡಾನೆಯೊಂದು ಮಂಗಳವಾರ ನಡೆಸಿದ ದಾಳಇಗೆ ಇಬ್ಬರು ರೈತರು ಗಂಭೀರವಾಗಿ ಗಾಯಗೊಂಡಿದ್ದು, ಜಾನುವಾರವೊಂದು ಮೃತಪಟ್ಟಿದೆ. 

ತಮಿಳುನಾಡಿನಿಂದ ಕರ್ನಾಟಕಕ್ಕೆ ಬಂದಿರುವ ಪುಂಡಾನೆಯೊಂದು ದಾಂಧಲೆ ನಡೆಸಿದ್ದು, ಇಬ್ಬರು ರೈತರು ಗಂಭೀರವಾಗಿ ಗಾಯಗೊಳ್ಳುವಂತೆ ಮಾಡಿದೆ. ಬಂಡೀಪುರ ಅಭಯಾರಣ್ಯಕ್ಕೆ ತಮಿಳುನಾಡಿನಿಂದ ಕಾಲರ್ ಐಡಿ ಹಾಕಿರುವ ಆನೆ ದಾಂಧನೆ ನಡೆಸಿದೆ. 

ಪ್ರಸ್ತು ಗಾಯಗೊಂಡಿರುವ ರೈತರು ಸಾವುಬದುಕಿನ ನಡುವೆ ಹೋರಾಟ ನಡೆಸಿದ್ದಾರೆ. ಆನೆ ದಾಳಿಗೆ ಜಾನುವಾರುಗಳೂ ಕೂಡ ಬಲಿಯಾಗಿವೆ. 

ಬಂಡೀಪುರ ಅಭಯಾರಣ್ಯಕ್ಕೆ ಹೊಂದಿಕೊಂಡಂತಿರುವ ತಮಿಳುನಾಡಿನ ಮದುಮಲೈ ಅರಣ್ಯದಿಂದ ಕಾಲರ್ ಐಡಿ ಹಾಕಿಕೊಂಡಿರುವ ಆನೆಯು ಹಾದಿ ತಪ್ಪಿ ಕರ್ನಾಟಕದ ಬಂಡೀಪುರದ ಅರಣ್ಯದಂಚಿನ ಶಿವಪುರ ಗ್ರಾಮಕ್ಕೆ ಬಂದಿದ್ದು, ಗ್ರಾಮದ ಹೊರವಲಯದಲ್ಲಿರುವ ಜಮೀನಿನಲ್ಲಿ ಸಿದ್ದಯ್ಯ ಎಂಬುವವನರ ಮೇಲೆ ದಾಳಿ ನಡೆಸಿದೆ. ಪರಿಣಾಮ ಸಿದ್ದಯ್ಯ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಿದ್ದಪ್ಪ ಅವರ ಜಾನುವಾರು ಕೂಡ ಸಾವನ್ನಪ್ಪಿದೆ. 

ಬಳಿಕ ಶಿವಪುರದಿಂದ ಹಂಗಳದತ್ತ ಬಂದ ಪುಂಡಾನೆ ಹಂಗಳದ ಕೆರೆ ಹಾಗೂ ಕಾಡಂಚಿನ ಗ್ರಾಮದ ಜಮೀನಿನಲ್ಲಿ ಸ್ವಾಮಿ ಎಂಬವವರ ಮೇಲೆ ದಾಳಿ ನಡೆಸಿದೆ. ಗಾಯಗೊಂಡಿರುವನ ಇಬ್ಬರೂ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಸ್ಥಳಾಂತರಿಸಲಾಗಿದೆ ಎಂದು ವರದಿಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com