ಮಂಗಳೂರು ವಿದ್ಯಾರ್ಥಿನಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್! ಸೋದರನ ಗಾಂಜಾ ಗೀಳಿಗೆ ತಂಗಿ ಬಲಿ

ಸುಮಾರು 18 ದಿನಗಳ ಹಿಂದೆ ಕೊಣಾಜೆಯಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಶವವು ಪತ್ತೆಯಾಗಿದ್ದು ಆಕೆಯ ಸೋದರನೇ ತಂಗಿಯನ್ನು ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಿರುವ ಆಘಾತಕಾರಿ ಅಂಶ ಬಯಲಾಗಿದೆ.

Published: 27th October 2019 03:55 PM  |   Last Updated: 27th October 2019 03:55 PM   |  A+A-


ಫಿಯೋನಾ ಸ್ವೇಡಲ್ ಕುಟಿನ್ಹ

Posted By : Raghavendra Adiga
Source : Online Desk

ಮಂಗಳೂರು: ಸುಮಾರು 18 ದಿನಗಳ ಹಿಂದೆ ಕೊಣಾಜೆಯಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಶವವು ಪತ್ತೆಯಾಗಿದ್ದು ಆಕೆಯ ಸೋದರನೇ ತಂಗಿಯನ್ನು ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಿರುವ ಆಘಾತಕಾರಿ ಅಂಶ ಬಯಲಾಗಿದೆ.

ಮಂಗಳೂರು ನಗರದ ಹೊರವಲಯದ ಮುಡಿಪು ಎಂಬಲ್ಲಿ ನಡೆದಿರುವ ಪ್ರಕರಣದಲ್ಲಿ ಫಿಯೋನಾ ಸ್ವೇಡಲ್ ಕುಟಿನ್ಹ (16) ಹತ್ಯೆಯಾಗಿರುವ ದುರ್ದೈವಿ ವಿದ್ಯಾರ್ಥಿನಿ. ಈಕೆಯನ್ನು ಅವಳ ಸೋದರ  ಸ್ಯಾಮ್ಸನ್ ಕುಟಿನ್ಹನೇ ಕೊಂದಿರುವುದಾಗಿ ವಿಚಾರಣೆಯಿಂದ ತಿಳಿದುಬಂದಿದೆ.

ಘಟನೆ ವಿವರ

ಫಿಯೋನಾ ಸ್ವೇಡಲ್ ಕುಟಿನ್ಹ ಮಂಗಳೂರು ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಆಕೆ ಅಕ್ಟೋಬರ್ 8ರಿಂದ ಇದ್ದಕ್ಕಿದ್ದಂತೆ ಕಾಣೆಯಾಗಿದ್ದಾಳೆ. ಈ ಸಂಬಂಧ ಆಕೆಯ ತಂದೆ ಪಜೀರ್‌ ಗ್ರಾಮದ ಫ್ರಾನ್ಸಿಸ್ ಕುಟಿನ್ಹ  ಕೊಣಾಜೆ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಪೋಲೀಸರು ತನಿಖೆಗೆ ಪ್ರಾರಂಭಿಸಿದಾಗ ಮೃತ ವಿದ್ಯಾರ್ಥಿಇನಿಯ ಮೊಬೈಲ್ ನಿಂದ ಕರೆ ಮಾಡಿದ್ದ ಲೊಕೇಷನ್ ಆಕೆಯ ಮನೆ ಸಮೀಪದಲ್ಲೇ ಇದ್ದದ್ದು ತಿಳಿದಿದೆ.ಇದರ ಹಿನ್ನೆಲೆ ಕುಟುಂಬ ಸದಸ್ಯರನ್ನು ತೀವ್ರ ವಿಚಾರಣೆ ನಡೆಸಿದಾಗ ಆಕೆಯ ಹಿರಿಯ ಸೋದರ ಸ್ಯಾಮ್ಸನ್ ಹತ್ಯೆ ಮಾಡಿರುವುದು ಗೊತ್ತಾಗಿದೆ.

ಗಾಂಜಾ ಚಟಕ್ಕೆ ಬಲಿಯಾದ ಯುವತಿ!

ಮೃತ ಫಿಯೋನಾ ಸ್ವೇಡಲ್ ಸೋದರ ಸ್ಯಾಮ್ಸನ್ ಗಾಂಜಾ ಚಟ ಹತ್ತಿಸಿಕೊಂಡಿದ್ದ. ತನ್ನ ಸೋದರನ ಚಟದ ಕುರಿತಂತೆ ಅರಿವಿದ್ದ ಸ್ವೇಡಲ್ ಆತನೊಡನೆ ಜಗಳಕ್ಕಿಳಿದಿದ್ದಾಳೆ. ಹಲವು ಬಾರಿ ಅಣ್ಣ-ತಂಗಿಯರ ನಡುವೆ ವಾಗ್ವಾದ ನಡೆದಿದೆ. ಹತ್ಯೆಯಾದ ದಿನ ಸಹ ಇಬ್ಬರ ನಡುವೆ ಜಗಳ ಏರ್ಪಟ್ಟಿದೆ.ಈ ವೇಳೆ ಕ್ರೋಧದಿಂದ ಉನ್ಮತ್ತನಾದ ಸ್ಯಾಮ್ಸನ್ ತಂಗಿಯ ತಲೆಗೆ ಸುತ್ತಿಗೆಯಿಂದ ಬಲವಾಗಿ ಚಚ್ಚಿ ಕೊಂದು ಹಾಕಿದ್ದಾನೆ. ಬಳಿಕ ಆಕೆಯ ದೇಹವನ್ನು ಮುಡಿಪುವಿನ ಗುಡ್ಡದಲ್ಲಿ ಎಸೆಯಲಾಗಿದೆ.

ವಿಚಾರಣೆಯ ವೇಳೆ ತಪ್ಪೊಪ್ಪಿಕೊಂಡಿರುವ ಆರೋಪಿ ವಿದ್ಯಾರ್ಥಿನಿಯ ಶವ ಎಸೆದಿದ್ದ ಸ್ಥಳಕ್ಕೆ ಕರೆದೊಯ್ದು ತೋರಿಸಿದ್ದಾನೆ. ಐದೀಗ ಯುವತಿಯ ಶವ ಅಸ್ಥಿಪಂಜರದ ರೂಪದಲ್ಲಿ ಪತ್ತೆಯಾಗಿದೆ.ಆರೋಪಿ ಸ್ಯಾಮ್ಸನ್ ಈಗ ಪೋಲೀಸರ ಅತಿಥಿಯಾಗಿದ್ದಾನೆ.

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp