ಸಾರ್ವಜನಿಕರ ನೂರೆಂಟು ಸಮಸ್ಯೆಗಳಿಗೆ 112 ಪರಿಹಾರ!

ದರೋಡೆ, ಡಕಾಯಿತಿ, ಅಕ್ಕ- ಪಕ್ಕದ ಮನೆಯವರ ಜೊತೆಗೆ ಜಗಳ ಮತ್ತಿತರ ತುರ್ತು ಸಂದರ್ಭಗಳಲ್ಲಿ ಇನ್ನು ಮುಂದೆ 100 ಸಹಾಯವಾಣಿ ಮೊರೆ ಹೋಗುವಂತಿಲ್ಲ. ಬದಲಿಗೆ 112 ದೂರವಾಣಿ ಸಂಖ್ಯೆಗೆ ಕರೆ ಮಾಡಬೇಕಾಗುತ್ತದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸಾರ್ವಜನಿಕರ ನೂರೆಂಟು ಸಮಸ್ಯೆಗಳಿಗೆ ಇನ್ನು ಮುಂದೆ 112 ಪರಿಹಾರ! ಹೌದು. ಸರಗಳ್ಳತನ, ಮನೆಗಳ್ಳತನದಂತಹ ಕಳ್ಳತನ ಪ್ರಕರಣಗಳು, ದರೋಡೆ, ಡಕಾಯಿತಿ, ಅಕ್ಕ- ಪಕ್ಕದ ಮನೆಯವರ ಜೊತೆಗೆ ಜಗಳ ಮತ್ತಿತರ ತುರ್ತು ಸಂದರ್ಭಗಳಲ್ಲಿ ಇನ್ನು ಮುಂದೆ 100 ಸಹಾಯವಾಣಿ ಮೊರೆ ಹೋಗುವಂತಿಲ್ಲ. ಬದಲಿಗೆ 112 ದೂರವಾಣಿ ಸಂಖ್ಯೆಗೆ ಕರೆ ಮಾಡಬೇಕಾಗುತ್ತದೆ. 

ಸಾರ್ವಜನಿಕ ಸ್ಥಳಗಳಲ್ಲಿ ರೌಡಿಗಳ ಹೊಡೆದಾಟ ಕದನಗಳು ನಡೆದಾಗ, ಎಲ್ಲಾದರೂ ಆತ್ಮಹತ್ಯೆ ಅಥವಾ ಕೊಲೆ ಪ್ರಕರಣಗಳು ಘಟಿಸಿದಾಗಲೂ  112 ದೂರವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕ ಅಗತ್ಯ ನೆರವು ಪಡೆದುಕೊಳ್ಳಬಹುದಾಗಿದೆ. 

ಅದೇ ರೀತಿ , ಅಗ್ನಿ ಅವಘಡಗಳು ಸಂಭವಿಸಿದಾಗ 101, ಅಪಘಾತಗಳಾದಾಗ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು 108 ಸಂಖ್ಯೆಗೆ ಡಯಲ್ ಮಾಡುವ ಅವಶ್ಯಕತೆಯೂ ಇಲ್ಲ. ಇವೆಲ್ಲಕ್ಕೂ  ಒಂದೇ ಪರಿಹಾರ ದೂರವಾಣಿ ಸಂಖ್ಯೆ 112.

ಈ 112 ದೂರವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com