2022ರ ವೇಳೆಗೆ ಎಲ್ಲರಿಗೂ ಮಾನಸಿಕ ಆರೋಗ್ಯ ಸೇವೆ ಕೇಂದ್ರ ಸರ್ಕಾರದ ಗುರಿ- ಡಾ. ಹರ್ಷವರ್ಧನ್

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯ ( ನಿಮ್ಹಾನ್ಸ್ )  24 ಘಟಿಕೋತ್ಸವ ಸಮಾರಂಭದಲ್ಲಿ ವಿವಿಧ ವಿಭಾಗದಲ್ಲಿ ಸ್ನಾತಕೋತ್ತರ, ಹಾಗೂ ಸ್ನಾತಕ ಪದವಿಗಳನ್ನು ಪ್ರದಾನ ಮಾಡಲಾಯಿತು. ಒಟ್ಟಾರೇ 176 ವಿದ್ಯಾರ್ಥಿಗಳು ಪದವಿ  ಪ್ರಮಾಣ ಪತ್ರಗಳನ್ನು ಪಡೆದುಕೊಂಡರು.
ಘಟಿಕೋತ್ಸವ
ಘಟಿಕೋತ್ಸವ

ಬೆಂಗಳೂರು: ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯ ( ನಿಮ್ಹಾನ್ಸ್ )  24 ಘಟಿಕೋತ್ಸವ ಸಮಾರಂಭದಲ್ಲಿ ವಿವಿಧ ವಿಭಾಗದಲ್ಲಿ ಸ್ನಾತಕೋತ್ತರ, ಹಾಗೂ ಸ್ನಾತಕ ಪದವಿಗಳನ್ನು ಪ್ರದಾನ ಮಾಡಲಾಯಿತು. ಒಟ್ಟಾರೇ 176 ವಿದ್ಯಾರ್ಥಿಗಳು ಪದವಿ  ಪ್ರಮಾಣ ಪತ್ರಗಳನ್ನು ಪಡೆದುಕೊಂಡರು.

ನಿಮ್ಹಾನ್ಸ್ ಅಧ್ಯಕ್ಷ  ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್,ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರಗಳನ್ನು ಪ್ರದಾನ ಮಾಡಿದರು.

ಕಲಬುರಗಿಯ ಇಎಸ್ ಐ ಆಸ್ಪತ್ರೆಯಲ್ಲಿ ನಿಮ್ಹಾನ್ಸ್ ಘಟಕ ತೆರೆಯಲು ಯೋಚಿಸಲಾಗಿದೆ. ಬೆಂಗಳೂರಿನ ಉತ್ತರದಲ್ಲಿ ಟ್ರೂಮಾ ಕೇರ್ ಯೂನಿಟ್ ( ಆಘಾತ ಆರೈಕೆ ಘಟಕ) ತೆರೆಯಲಾಗುವುದು ಜೊತೆಗೆ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು, ಇದಕ್ಕಾಗಿ 30 ಎಕರೆ ಜಮೀನು ಭೂ ಸ್ವಾಧೀನಪಡಿಸಿಕೊಳ್ಳಲಾಗಿದೆ. 10ಕ್ಕೂ ಹೆಚ್ಚು ಎಕರೆ ಜಮೀನಿನ ಅಗತ್ಯವಿದೆ ಎಂದು ನಿಮ್ಹಾನ್ಸ್ ಸಂಸ್ಥೆಯ ನಿರ್ದೇಶಕ ಡಾ. ಬಿ.ಎನ್. ಗಂಗಾಧರ್ ತಿಳಿಸಿದರು. 

 2022 ರೊಳಗೆ ದೇಶದ ಎಲ್ಲ ಜನರಿಗೂ ಮಾನಸಿಕ ಆರೋಗ್ಯ ಸೇವೆ ಒದಗಿಸುವುದು ಕೇಂದ್ರ ಸರ್ಕಾರದ ಗುರಿಯಾಗಿದೆ  ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಮತ್ತು ಬಲಪಡಿಸಲು ನಿಮ್ಹಾನ್ಸ್ ದೇಶದ ಇತರ ಮಾನಸಿಕ ಆರೋಗ್ಯ ಆಸ್ಪತ್ರೆಗಳನ್ನು ಮುನ್ನಡೆಸಲಿದೆ ಎಂದು ಡಾ.ಹರ್ಷ ವರ್ಧನ್ ಘೋಷಿಸಿದರು.

ಆರೋಗ್ಯ ಸೇವೆಯ ಅಗತ್ಯದ ಹಿನ್ನೆಲೆಯಲ್ಲಿ ಬಾಗಲಕೋಟೆ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಹಾವೇರಿ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗಿದೆ. ನಿಮ್ಹಾನ್ಸ್ ಗೆ ಅಗತ್ಯವಿರುವ ಜಮೀನು ಸ್ವಾಧೀನಕ್ಕೆ ಸಹಕಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com