ಸರ್ಕಾರದಿಂದ ಸಾಲ ಕೊಡಿಸುವುದಾಗಿ ನಂಬಿಸಿ 51 ಜನರಿಗೆ ವಂಚನೆ; ವಂಚಕ ಬಂಧನ 

ಅಡ್ವೊಕೇಟ್ ಎಂದು ಹೇಳಿಕೊಂಡು ಸರ್ಕಾರದ ವಿವಿಧ ಯೋಜನೆಗಳಡಿಯಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ 51 ಜನರಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಅಡ್ವೊಕೇಟ್ ಎಂದು ಹೇಳಿಕೊಂಡು ಸರ್ಕಾರದ ವಿವಿಧ ಯೋಜನೆಗಳಡಿಯಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ 51 ಜನರಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ.


ಆರೋಪಿ ಕಾಮಾಕ್ಷಿಪಾಳ್ಯದ ರಂಗನಾಥಪುರ ನಿವಾಸಿ 35 ವರ್ಷದ ಚೇತನ್ ಎಂಬುವವನಾಗಿದ್ದು ಈತನ ವಿರುದ್ಧ ಕಾಮಾಕ್ಷಿಪಾಳ್ಯ ಪೊಲೀಸರಿಗೆ ಹೆಗ್ಗನಹಳ್ಳಿ ನಿವಾಸಿ ನೇತ್ರಾವತಿ ಎಂಬುವವರು ದೂರು ನೀಡಿದ್ದಾರೆ. ಚೇತನ್ ಕಳೆದ ಕೆಲ ತಿಂಗಳಲ್ಲಿ ಕನಿಷ್ಟವೆಂದರೂ 51 ಜನರಿಗೆ 6.22 ಲಕ್ಷ ರೂಪಾಯಿಗಳಷ್ಟು ವಂಚಿಸಿದ್ದಾನೆ. ನಾನು ಮತ್ತು ನನ್ನ 6 ಮಂದಿ ಸ್ನೇಹಿತೆಯರು ಸಾಲ ಕೊಡಿಸಲೆಂದು ಆತನಿಗೆ ಕನಿಷ್ಟವೆಂದರೂ ತಲಾ 35 ಸಾವಿರ ರೂಪಾಯಿ ನೀಡಿದ್ದೇವೆ ಎಂದಿದ್ದಾರೆ ನೇತ್ರಾವತಿ.


ನೇತ್ರಾವತಿಗೆ ಚೇತನ್ ಪರಿಚಯವಾಗಿದ್ದು ಸ್ನೇಹಿತರ ಮೂಲಕ, ಆಗ ಆತ ಅಡ್ವೊಕೇಟ್ ಎಂದು ಹೇಳಿಕೊಂಡಿದ್ದ. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಆತ ನೇತ್ರಾವಳಿ ಬಳಿ ಬಂದು ನನಗೆ ಡಿ ವಿ ಸದಾನಂದ ಗೌಡ, ವಿ ಸೋಮಣ್ಣ ಸೇರಿದಂತೆ ಹಲವು ಬಿಜೆಪಿ ನಾಯಕರ ಪರಿಚಯವಿದೆ. ಅವರ ಮೂಲಕ ತಮಗೆ ಉದ್ಯೋಗ ಯೋಜನೆಯಡಿ ಸಾಲ ಕೊಡಿಸುತ್ತೇನೆ ಎಂದಿದ್ದ.


ಸಾಲಕ್ಕೆ ಅರ್ಜಿ ಹಾಕುವಂತೆ ನೇತ್ರಾವತಿ ಮನವೊಲಿಸಿ ಆರಂಭದಲ್ಲಿ ಅರ್ಜಿ ಪ್ರಕ್ರಿಯೆ ಶುಲ್ಕವೆಂದು 5 ಸಾವಿರ ರೂಪಾಯಿ ತೆಗೆದುಕೊಂಡು ನಂತರ ಬೇರೆ ಬೇರೆ ಸಾಲಕ್ಕೆ ಸಂಬಂಧಿಸಿದ ಕೆಲಸಕ್ಕೆಂದು 10 ಸಾವಿರ ರೂಪಾಯಿ ಪಡೆದುಕೊಂಡನು. ನಂತರ ಮತ್ತೆ ಸಚಿವ ಸೋಮಣ್ಣ ಬಳಿ ಕೆಲಸ ಮಾಡುತ್ತಿರುವ ಕುಮಾರ್ ಎಂಬುವವನಿಗೆ ನೀಡಲೆಂದು ಮತ್ತೆ 10 ಸಾವಿರ ರೂಪಾಯಿ ಕೇಳಿ ಪಡೆದನು. ಸಾಲ ಮಂಜೂರಾತಿ ವಿಳಂಬವಾಗುತ್ತಿತ್ತು. ಕಳೆದ ಜುಲೈಯಲ್ಲಿ ಕೊನೆಗೂ ಪಣ ಪಡೆದುಕೊಂಡವರಿಗೆಲ್ಲ ಚೆಕ್ ನೀಡಿದನು. ಚೆಕ್ ಸರ್ಕಾರೇತರ ಸಂಘಟನೆಯ ಹೆಸರಿನಲ್ಲಿದ್ದರಿಂದ ಸಂಶಯ ಬಂದು ನೇತ್ರಾವತಿ ಮತ್ತು ಇತರರು ಪ್ರಶ್ನೆ ಮಾಡಿದರು. ಆಗ ಎನ್ ಜಿಒ ಮೂಲಕವೇ ಹಣ ಬರಲಿದ್ದು ನಾನು ಹೇಳುವವರೆಗೆ ಬ್ಯಾಂಕಿಗೆ ಚೆಕ್ ಹಾಕಬೇಡಿ ಎಂದಿದ್ದಾನೆ.


ನೇತ್ರಾವತಿಯಂತೆ ಇನ್ನೂ ಕೆಲವರು ಚೇತನ್ ಗೆ ಸಾಲ ಮಂಜೂರಾತಿ ಮಾಡಿಸಿಕೊಡಲೆಂದು 7,200 ರೂಪಾಯಿ ಕೊಟ್ಟಿದ್ದರು. ಹೀಗೆ 51 ಮಂದಿಯಿಂದ ಹಣ ಪೀಕಿಸಿಕೊಂಡಿದ್ದನು.


ಈ ಮಧ್ಯೆ ನೇತ್ರಾವತಿಯ ಪತಿ ಕೃಷ್ಣ ಹೆಚ್ ಎನ್ ಚೇತನ್ ನ ಅತ್ತೆ ಮನೆಗೆ ಹೋಗಿ ಕೇಳಿದಾಗ ಆತ ಅಡ್ವೊಕೇಟ್ ಅಲ್ಲ ಎಂದು ತಿಳಿಯಿತು. ಕೃಷ್ಣ ಅವರು ನಂತರ ಸೋಮಣ್ಣ ಕಚೇರಿಗೆ ಹೋಗಿ ಅಲ್ಲಿ ಕುಮಾರ್ ಎಂಬುವವರು ಕೆಲಸ ಮಾಡುತ್ತಿದ್ದಾರೆಯೇ ಎಂದು ಕೇಳಿದಾಗ ಆ ಹೆಸರಿನವರು ಅಲ್ಲಿ ಯಾರೂ ಇರಲಿಲ್ಲ. ಕೂಡಲೇ ಚೇತನ್ ನ್ನು ಹಿಡಿದು ಸೋಮಣ್ಣ ಕಚೇರಿಗೆ ಕರೆದುಕೊಂಡು ಹೋಗಿ ಅಲ್ಲಿಂದ ಪೊಲೀಸ್ ಠಾಣೆಗೆ ಕರೆದೊಯ್ದರು.


ಪ್ರಾಥಮಿಕ ತನಿಖೆ ನಡೆಸಿ ಚೇತನ್ ನನ್ನು ಬಂಧಿಸಿದ್ದೇವೆ. ಹಲವರಿಂದ ಹಣ ಪಡೆದಿರುವುದಾಗಿ ಚೇತನ್ ತಪ್ಪೊಪ್ಪಿಕೊಂಡಿದ್ದಾನೆ. ಆತನಿಂದ ಹಣ ಪಡೆಯಲು ಪ್ರಯತ್ನಿಸುತ್ತಿದ್ದೇವೆ ಎನ್ನುತ್ತಾರೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಪೊಲೀಸರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com