ನಿಜಾಮುದ್ದೀನ್ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾದವರು ಕೂಡಲೇ ಮಾಹಿತಿ ನೀಡಿ:ಜನತೆಗೆ ಸರ್ಕಾರ ಮನವಿ

ರಾಷ್ಟ್ರ ರಾಜಧಾನಿ ದೆಹಲಿಯ ನಿಜಾಮುದ್ದೀನ್ ನಲ್ಲಿ ನಡೆದ ಮರ್ಕಜ್ ನಲ್ಲಿ ಭಾಗವಿಸಿದ್ದ ವಿವಿಧ ರಾಜ್ಯಗಳ ಅನೇಕರಲ್ಲಿ ಕೊರೋನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಅಲ್ಲಿ ಹಾಜರಿದ್ದ ರಾಜ್ಯದ ಜನತೆ ಸ್ವಯಂ ಪ್ರೇರಿತರಾಗಿ ಆಗಮಿಸಿ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುವಂತ ರಾಜ್ಯ ಸರ್ಕಾರ ಮನವಿ ಮಾಡಿಕೊಂಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯ ನಿಜಾಮುದ್ದೀನ್ ನಲ್ಲಿ ನಡೆದ ಮರ್ಕಜ್ ನಲ್ಲಿ ಭಾಗವಿಸಿದ್ದ ವಿವಿಧ ರಾಜ್ಯಗಳ ಅನೇಕರಲ್ಲಿ ಕೊರೋನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಅಲ್ಲಿ ಹಾಜರಿದ್ದ ರಾಜ್ಯದ ಜನತೆ ಸ್ವಯಂ ಪ್ರೇರಿತರಾಗಿ ಆಗಮಿಸಿ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುವಂತ ರಾಜ್ಯ ಸರ್ಕಾರ ಮನವಿ ಮಾಡಿಕೊಂಡಿದೆ. 

ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಮಾ.8 ರಿಂದ 28ರವರೆಗಿನ ಸಮಾವೇಶದಲ್ಲಿ ಭಾಗವಿಸಿದ್ದವರು ಎನ್ನಲಾದ 78 ಮಂದಿಯನ್ನು ಈಗಾಗಲೇ ಗುರುತಿಸಲಾಗಿದೆ. ಜೊತೆಗೆ ಇವರೊಂದಿಗೆ ಸಂಪರ್ಕ ಹೊಂದಿದ್ದವರನ್ನು ಪತ್ತೆ ಹಚ್ಚಿ ಎಲ್ಲರಿಗೂ ಕಡ್ಡಾಯವಾಗಿ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗುವುದು. ಇಂತಹವರು ಕೂಡಲೇ 080-29711171 ಸಹಾಯವಾಣಿಗೆ ಸಂಪರ್ಕಿಸುವಂತೆ ಮಂಗಳವಾರ ಮನವಿ ಮಾಡಿಕೊಂಡರು. 

ಈಗಾಗಲ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ತಂಗಿರುವ ತಬ್ಲೀಘಿ ಜಮಾತ್'ನ 50 ವಿದೇಶಿ ಸದಸ್ಯರನ್ನು ಅವರು ವಾಸವಿರುವ ಸ್ಥಳಗಳಲ್ಲೇ ಪ್ರತ್ಯೇಕವಾಗಿಡಲಾಗಿದೆ. ಈ ಪೈಕಿ 19 ಮಂದಿ ಕಿರ್ಗಿಸ್ತಾನ್, 20 ಮಂದಿ ಇಂಡೋನೇಷ್ಯಾ, 4 ಮಂದಿ ದ.ಆಫ್ರಿಕಾ, 3 ಮಂದಿ ಗ್ರಾಂಬಿಯಾ ಹಾಗೂ ಅಮೆರಿಕಾ, ಬ್ರಿಟನ್, ಫ್ರಾನ್ಸ್, ಕೀನ್ಯಾ ದೇಶದ ತಲಾ ಇಬ್ಬರು ಇದ್ದಾರೆ. 

ಕರ್ವನಾಟಕದ ಸುಮಾರು 300 ನಿವಾಸಿಗಳನ್ನು ಕ್ವಾರೆಂಟೈನ್ ಮಾಡಲಾಗುತ್ತಿದೆ. ವೈದ್ಯಕೀಯ ತಪಾಸಣೆಗೂ ಒಳಪಡಿಸಲಾಗುತ್ತದೆ ಎಂದು ಇಲಾಖೆ ಮಾಹಿತಿ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com