ರಾಜ್ಯ

ಕೊರೋನಾ ವೈರಸ್ ತಡೆಗೆ ಮೈಸೂರು ಜನತೆ ಹೊಸ ಉಪಾಯ: ಏನು ಗೊತ್ತೆ?

ಕೊರೋನಾ ವೈರಸ್ ತಡೆಗೆ ಮೈಸೂರು ಜನತೆ ಹೊಸ ಉಪಾಯ: ಏನು ಗೊತ್ತೆ?
ಕೊರೋನಾ ಕಾಯಿ
Published On :

ಮೈಸೂರು: ಕೊರೋನಾ ವೈರಾಣು ವ್ಯಾಪಕವಾಗಿ ಹರುಡುತ್ತಲೇ ಮೈಸೂರಿನ ರಮ್ಮನಹಳ್ಳಿಯ ಜನತೆ ಹೊಸ ಆಚರಣೆಯೊಂದಕ್ಕೆ ಮೊರೆ ಹೋಗಿದ್ದಾರೆ.

ಬೇಲಿ ಮುಳ್ಳಿನಕಾಯಿಗೆ ಬಾರಿ ಡಿಮ್ಯಾಂಡ್‌ ಆರಂಭವಾಗಿದ್ದು, ಕೊರೋನಾ ವೈರಾಣುವಿನ ಮಾದರಿಯನ್ನೇ ಹೋಲುವ ಈ ಕಾಯಿಯನ್ನು ತಂದು ಮನೆಗೆ ಕಟ್ಟಿಪೂಜಿಸಲಾಗುತ್ತಿದೆ.

ಮುಳ್ಳು ಮುತ್ತಿಗೆ ಗಿಡ ಅಥವಾ ಊಜಿ ಗಿಡ ಎಂತಲೂ ಗ್ರಾಮಾಂತರ ಪ್ರದೇಶದಲ್ಲಿ ಕರೆಯುವ ಈ ಗಿಡದ ಕಾಯಿಯನ್ನು ಈ ಹಿಂದೆ ಮಕ್ಕಳು ಆಟವಾಡುವಾಗ ಬಲ್ಪ… ನಂತೆ ಬಳಸುತ್ತಿದ್ದರು. 

ಅದರ ಹೂವನ್ನು ಬ್ಯಾಟರಿ ಎಂದು ತಿಳಿದು ಆಟವಾಡುತ್ತಿದ್ದರು. ಆದರೆ ದುರಾದೃಷ್ಟವಶಾತ್‌ ಈಗ ಆ ಗಿಡಕ್ಕೆ ಬೇಡಿಕೆ ಹೆಚ್ಚಿದೆ. ತಾಲೂಕಿನ ರಮ್ಮನಹಳ್ಳಿ, ಸುತ್ತಮುತ್ತಲ ಪ್ರದೇಶದಲ್ಲಿ ಬೇಲಿ ಕಾಯಿಗಾಗಿ ಜನ ಹುಡುಕಾಟ ಆರಂಭಿಸಿದ್ದಾರೆ.

ಮನೆ ಮುಂದೆ ಒಂದು ಕಾಯಿ, ಜೊತೆಗೆ ಮಾವು, ಬೇವಿನ ಸೊಪ್ಪನ್ನು ತೋರಣವನ್ನಾಗಿಸಿ  ಕಟ್ಟಿಕುಂಕುಮವಿಟ್ಟು ಗಂಧದ ಕಟ್ಟಿಹಚ್ಚಿ ಪೂಜಿಸುತ್ತಿದ್ದಾರೆ.

ಹೀಗೆ ಪೂಜಿಸಿದರೆ ಕೊರೋನಾ ಬರುವುದಿಲ್ಲ ಎಂಬ ಸುದ್ದಿಯನ್ನು ಯಾರೋ ಹಬ್ಬಿಸಿದ್ದರಿಂದ ಸಾರ್ವಜನಿಕರು ಆ ಕಾಯಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ರಮ್ಮನಹಳ್ಳಿ ಸುತ್ತಮುತ್ತ ಅನೇಕ ಮನೆಗಳ ಮುಂದೆ ಅದನ್ನು ಕಟ್ಟಿಪೂಜಿಸಲಾಗುತ್ತಿದೆ ದೇಶದ್ಯಾಂತ ಕೊರೋನಾ ಓಡಿಸಲು ಸರ್ಕಾರಗಳು ವಿವಿಧ ಕ್ರಮಗಳನ್ನು ಜಾರಿಗೆ ತರುತ್ತಿದ್ದರೇ ಮೈಸೂರಿನ ಜನತೆ ಮೌಡ್ಯಕ್ಕೆ ಮೊರೆ ೋಗಿರುವುದು ವಿಪರ್ಯಾಸ. 
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.