ದುಪ್ಪಟ್ಟು ಬೆಲೆ ಮದ್ಯ ಮಾರಾಟ: ಬಸವನಗುಡಿಯಲ್ಲಿ ಮೂವರ ಬಂಧನ

ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ರಾಜ್ಯವನ್ನು ಸಂಪೂರ್ಣ ಲಾಕ್ ಡೌನ್ ಮಾಡಲಾಗಿದ್ದು, ಇದನ್ನೇ ಲಾಭವಾಗಿ ಬಳಸಿಕೊಳ್ಳಲು ಮುಂದಾಗಿರುವ ಕೆಲ ಅಂಗಡಿ ಮಾಲೀಕರು ದುಪ್ಪಟ್ಟು ಬೆಲೆಗೆ ಮದ್ಯ ಮಾರಾಟ ಮಾಡುತ್ತಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ರಾಜ್ಯವನ್ನು ಸಂಪೂರ್ಣ ಲಾಕ್ ಡೌನ್ ಮಾಡಲಾಗಿದ್ದು, ಇದನ್ನೇ ಲಾಭವಾಗಿ ಬಳಸಿಕೊಳ್ಳಲು ಮುಂದಾಗಿರುವ ಕೆಲ ಅಂಗಡಿ ಮಾಲೀಕರು ದುಪ್ಪಟ್ಟು ಬೆಲೆಗೆ ಮದ್ಯ ಮಾರಾಟ ಮಾಡುತ್ತಿದ್ದಾರೆ. 

ರಾಜ್ಯದಲ್ಲಿ ದುಪ್ಪಟ್ಟು ಬೆಲೆಗೆ ಮದ್ಯ ಮಾರಾಟ ಮಾಡಲಾಗುತ್ತಿರುವ ಅಂಗಡಿಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ಮೂವರನ್ನು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ. 

650 ಎಂಎಲ್ ಬಾಟಲ್ ಬಿಯರ್'ನ್ನು ರೂ.150-180ಕ್ಕೆ ಮಾರಾಟ ಮಾಡಲಾಗುತ್ತಿತ್ತು. ಆದರೆ, ಇದೇ ಬಿಯರ್ ಗಳನ್ನು ಇದೀಗ ರೂ.600ಕ್ಕೆ ಮಾರಾಟ ಮಾಡಲಾಗುತ್ತಿದೆ. ಇನ್ನು ವಿಸ್ಕಿ ಬಾಟಲ್ ಗಳನ್ನು ರೂ,2000 ರಿಂದ 6,000ದವರೆಗೂ ಮಾರಾಟ ಮಾಡಲಾಗುತ್ತಿದೆ. 

ನಗರದ ಕೇಂದ್ರೀಯ ಪ್ರದೇಶಗಳಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದ್ದು, ಈ ಪ್ರದೇಶಗಳಲ್ಲಿ ಇದೀಗ ಪೊಲೀಸರು ಗಸ್ತು ತಿರುಗಲು ಆರಂಭಿಸಿದ್ದಾರೆ. 

ಮಾರ್ಚ್ 24 ರಂದು ಸಿಸಿಬಿ ಪೊಲೀಸರು ಬಸವನಗುಡಿಯಲ್ಲಿರುವ ಕೆಲ ಮದ್ಯದ ಅಂಗಡಿಗಳ ಮೇಲೆ ದಾಳಿ ನಡೆಸಿದ್ದು, ಮೂವರನ್ನು ಬಂಧನಕ್ಕೊಳಪಡಿಸಿದ್ದಾರೆ. ಇನ್ನು  ಕೆಂಗೇರಿಯಲ್ಲಿ ರೂ.45,000 ಮೌಲ್ಯದ 244 ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 

ಇದೇ ರೀತಿಯ ಪ್ರಕರಣಗಳು ಆರ್'ಟಿ ನಗರದಲ್ಲೂ ನಡೆದಿದ್ದು, 300 ಬಾಟಲಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ, ಈ ಯಾವುದೇ ಪ್ರಕರಣಗಳಲ್ಲೂ ಹಣವನ್ನು ಪೊಲೀಸರು ವಶಕ್ಕೆ ಪಡೆದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಅಬಕಾರಿ ಇಲಾಖೆ ಅಧಿಕಾರಿ ವೆಂಕಟ ರಾಜಾ ಅವರು ಮಾತನಾಡಿ, ಲಾಕ್ ಡೌನ್ ವೇಳೆ ಪ್ರತೀ ಅಂಗಡಿಗಳ ಮೇಲೆ ಪ್ರತೀನಿತ್ಯ ದಾಳಿ ನಡೆಸಲಾಗುತ್ತಿದೆ. ಈ ವರೆಗೂ ಬೆಂಗಳೂರು ನಗರದಲ್ಲಿಯೇ 18 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. 8 ಮಂದಿಯನ್ನು ಬಂಧನಕ್ಕೊಳಪಡಿಸಲಾಗಿದ್ದು, 5 ಅಂಗಡಿಗಳ ಪರವಾನಗಿಯನ್ನು ರದ್ದುಗೊಳಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com