ಕೋವಿಡ್-19: ಬೆಂಗಳೂರು ದಕ್ಷಿಣದಲ್ಲಿ ಅತಿಹೆಚ್ಚಿನ ಪ್ರಕರಣಗಳು!

ಬಿಬಿಎಂಪಿ ಕೋವಿಡ್-19 ವಾರ್ ರೂಮ್ ಬುಲೆಟಿನ್ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಕೊರೋನಾವೈರಸ್  ಸೋಂಕು ದೃಢಪಟ್ಟಿರುವ ರೋಗಿಗಳ ಪೈಕಿಯಲ್ಲಿ ಬಹುತೇಕ 15 ರೋಗಿಗಳು ಬೆಂಗಳೂರು ದಕ್ಷಿಣ ವಲಯಕ್ಕೆ ಸೇರಿದವರಾಗಿದ್ದಾರೆ.
ಆಸ್ಪತ್ರೆಯೊಂದರ ಮುಂಭಾಗದಲ್ಲಿ ಮಹಿಳೆಯರು
ಆಸ್ಪತ್ರೆಯೊಂದರ ಮುಂಭಾಗದಲ್ಲಿ ಮಹಿಳೆಯರು
Updated on: 

ಬೆಂಗಳೂರು: ಬಿಬಿಎಂಪಿ ಕೋವಿಡ್-19 ವಾರ್ ರೂಮ್ ಬುಲೆಟಿನ್ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಕೊರೋನಾವೈರಸ್  ಸೋಂಕು ದೃಢಪಟ್ಟಿರುವ ರೋಗಿಗಳ ಪೈಕಿಯಲ್ಲಿ ಬಹುತೇಕ 15 ರೋಗಿಗಳು ಬೆಂಗಳೂರು ದಕ್ಷಿಣ ವಲಯಕ್ಕೆ ಸೇರಿದವರಾಗಿದ್ದಾರೆ.

ಪೂರ್ವ ವಲಯದಲ್ಲಿ 13,  ಮಹಾದೇವಪುರದಲ್ಲಿ 10, ಪಶ್ಚಿಮ ವಲಯದಲ್ಲಿ 7, ಬೊಮ್ಮನಹಳ್ಳಿಯಲ್ಲಿ 3, ಬೆಂಗಳೂರು ನಗರ ಹೊರವಲಯದಲ್ಲಿ 3, ಯಲಹಂಕದಲ್ಲಿ 2, ರಾಜರಾಜೇಶ್ವರಿ ನಗರ ವಲಯದಲ್ಲಿ 1 ಪ್ರಕರಣಗಳು ಕಂಡುಬಂದಿವೆ.

ಬೆಂಗಳೂರಿನ 20 ರೋಗಿಗಳು ವಿಕ್ಟೋರಿಯಾ ಆಸ್ಪತ್ರೆಗಳಲ್ಲಿ ದಾಖಲಾಗಿದ್ದರೆ ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ 10, ಕೆ ಸಿ  ಜನರಲ್ ಸೇರಿದಂತೆ ಇತರ ಆಸ್ಪತ್ರೆಗಳಲ್ಲಿ 6 ಮಂದಿ ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 

ಬೆಂಗಳೂರಿನಲ್ಲಿ ಪತ್ತೆಯಾಗಿರುವ 63 ಕೋವಿಡ್-19 ಸೋಂಕಿತ ಪೈಕಿಯಲ್ಲಿ 41 ಪುರುಷರು ಹಾಗೂ 23 ಮಹಿಳೆಯರು ಆಗಿದ್ದಾರೆ. ಪುರುಷರಲ್ಲಿ 20 ರಿಂದ 29 ವರ್ಷದೊಳಗಿನವರಾಗಿದಾರೆ. ಮಹಿಳೆಯರಲ್ಲಿ 60 ರಿಂದ 69 ವರ್ಷ ವಯಸ್ಸಿನವರಾಗಿದ್ದಾರೆ. 10 ಪುರುಷರು ಮತ್ತು 5 ಮಹಿಳೆಯರು ಸಂಪೂರ್ಣವಾಗಿ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಬೆಂಗಳೂರಿನ ಸೋಂಕಿತರ ಪೈಕಿ ಶೇ. 70 ರಷ್ಟು ಮಂದಿ ಪ್ರವಾಸದ ಹಿನ್ನೆಲೆ ಹೊಂದಿದವರಾಗಿದ್ದಾರೆ. ಈ ಪೈಕಿ ಶೇ. 21 ರಷ್ಟು ರೋಗಿಗಳು , ಕೋವಿಡ್ -19 ಸೋಂಕು ದೃಢಪಟ್ಟವರೊಂದಿಗೆ ಸಂಪರ್ಕದಲ್ಲಿದ್ದವರು,  ಶೇ. 6 ರಷ್ಟು ಮಂದಿ ದೆಹಲಿಯ ತಬ್ಲೀಘಿ ಜಮಾತ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದವರು ಆಗಿದ್ದಾರೆ.

ಬೆಂಗಳೂರು ನಗರದ ಕೋವಿಡ್- 19 ರೋಗಿಗಳ ಜೊತೆಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 457 ಮಂದಿ ಹಾಗೂ 4089 ದ್ವಿತೀಯ ಸಂಪರ್ಕದಲ್ಲಿದ್ದವರನ್ನು ಬಿಬಿಎಂಪಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪತ್ತೆ ಹಚ್ಚಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com