ಕೊರೋನಾಗೆ ಮಾತ್ರವಲ್ಲ ಕುಸಿಯುತ್ತಿರುವ ಕರ್ನಾಟಕದ ಆರ್ಥಿಕತೆಗೂ ಬೇಕಿದೆ ಲಸಿಕೆ!

ಕೊರೋನಾ ವೈರಸ್ ನಿಂದಾಗಿ ಈಗಾಗಲೇ ಕರ್ನಾಟಕದಲ್ಲಿ ಆರ್ಥಿಕ ಕುಸಿತ ಆರಂಭವಾಗಿದೆ. ಲಾಕ್ ಡೌನ್ ನಿಂದಾಗಿ ಮತ್ತಷ್ಟು ಆರ್ಥಿಕ ಬೆಳವಣಿಗೆ ಕುಂಠಿತವಾಗುವ ಸಾಧ್ಯತೆಯಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು: ಕೊರೋನಾ ವೈರಸ್ ನಿಂದಾಗಿ ಈಗಾಗಲೇ ಕರ್ನಾಟಕದಲ್ಲಿ ಆರ್ಥಿಕ ಕುಸಿತ ಆರಂಭವಾಗಿದೆ. ಲಾಕ್ ಡೌನ್ ನಿಂದಾಗಿ ಮತ್ತಷ್ಟು ಆರ್ಥಿಕ ಬೆಳವಣಿಗೆ ಕುಂಠಿತವಾಗುವ ಸಾಧ್ಯತೆಯಿದೆ.

ಕಳೆದ ವಾರ ಕೇಂದ್ರ ಸರ್ಕಾರ ರಾಜ್ಯ ವಿಪತ್ತು ಪ್ರತಿಕ್ರಿಯೆ ತಗ್ಗಿಸುವ ನಿಧಿ ಅಡಿಯಲ್ಲಿ  ಮೊದಲ ಕಂತಿನ ಹಣ ಬಿಡುಗಡೆ ಮಾಡಿದೆ.

11,067 ಕೋಟಿ ಹಣವನ್ನು 27 ರಾಜ್ಯಗಳಿಗೆ ಹಂಚಿಕೆ ಮಾಡಿದೆ. 15ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ಕರ್ನಾಟಕಕ್ಕೆ ಕೋವಿದ್ ಪರಿಹಾರಕ್ಕಾಗಿ 395.5 ಕೋಟಿ ರು ಹಣ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಟ್ವೀಟ್ ಮಾಡಿದ್ದಾರೆ.

ದೇಶದ ಇತರೆ ರಾಜ್ಯಗಳಂತೆ ಕರ್ನಾಟಕ ಕೂಡ ಕೋವಿದ್ ಸಮಸ್ೆ ಬಗೆ ರಿಸಲು ಹಣಕಾಸಿನ ಸಮಸ್ಯೆಯಿಂದ  ಹೆಣಗಾಡುತ್ತಿದೆ. ವೈದ್ಯಕೀಯ ಸವಲತ್ತುಗಳನ್ನು ಅಪಾರ ಪ್ರಮಾಣದಲ್ಲಿ ಖರೀದಿಸುವ ಅವಶ್ಯಕತೆಯಿರುವುದರಿಂದ ಮತ್ತಷ್ಟು ಹಣಕಾಸಿನ ಮುಗ್ಗಟ್ಟು ಎದುರಾಗುವ ಸಾಧ್ಯತೆಯಿದೆ.

ರಾಜ್ಯದ ಆದಾಯ ಯಾವತ್ತೂ ಇಷ್ಟು ಪ್ರಮಾಣದಲ್ಲಿ ಕಡಿಮೆಯಾಗಿರಲಿಲ್ಲ, ಕೊರೋನಾದಿಂದಾ ಆರ್ಥಿಕ ಸ್ಥಿತಿ ತೀರಾ ಹದಗೆಡುತ್ತಿದೆ. ಕೇಂದ್ರ ಸರ್ಕಾರ ನೀಡಿರುವ ಅನುದಾನದ ಹಣ ರಾಜ್ಯಕ್ಕೆ ಸಾಕಾಗುತ್ತಿಲ್ಲ.

ರಾಜ್ಯಕ್ಕೆ ಯಾವುದೇ ಹೊಸ ಆದಾಯವಿಲ್ಲ ಆದರೆ ರಾಜ್ಯವು ಈ ಹಿಂದೆ ಹಂಚಿಕೆ ಮಾಡಿದ್ದನ್ನು ಇತರ ಕ್ಷೇತ್ರಗಳಿಗೆ ಬಳಸಿಕೊಳ್ಳಬಹುದಾಗಿದೆ. ಬೇರೆ ಕ್ಷೇತ್ರಗಳ ಹಣ ಬಳಕೆಯನ್ನು ಮುಂದೂಡಬಹುದಾಗಿದೆ ಎಂದು ಆರ್ಥಿಕ ತಜ್ಞ ಆರ್ ಎಸ್ ದೇಶಪಾಂಡೆ ತಿಳಿಸಿದ್ದಾರೆ.

ತೆರಿಗೆ ಹಂಚಿಕೆಯಿಂದ ಕಡಿಮೆಯಾದ ಪಾಲನ್ನು ಪರಿಗಣಿಸಿ, 14 ನೇ ಹಣಕಾಸು ಆಯೋಗವು 5,495 ಕೋಟಿ ರೂ.ಗಳ ವಿಶೇಷ ಅನುದಾನ ನೀಡುವಂತೆ ಸೂಚಿಸಿದೆ, ಆದರೆ ಇದುವರೆಗೂ ಅನುದಾನ ಬಿಡುಗಡೆಗೆ ಅನುಮತಿ ದೊರೆತಿಲ್ಲ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com