ಪುಟ್ ಪಾತ್ ನಿಂದ ಸರ್ಕಾರದ ಅತಿಥಿ ಗೃಹದವರೆಗೂ ಸಾಗಿದ ವಲಸಿಗ ದಂಪತಿಯ ಕಥೆ!

ಲಾಕ್ ಡೌನ್ ಪರಿಣಾಮದಿಂದಾಗಿ ತೀವ್ರ ತೊಂದರೆ ಎದುರಿಸಿದ ವಲಸಿಗ ದಂಪತಿಯ ಕಥೆ ಸಂತೋಷದಲ್ಲಿ ಮುಕ್ತಾಯವಾಗಿದೆ. ಪುಟ್ ಪಾತ್ ನಲ್ಲಿದ್ದ ಜಾರ್ಖಂಡ್ ಮೂಲದ ದಂಪತಿಗಳನ್ನು ಪತ್ತೆ ಹಚ್ಚುವುದರ ಜೊತೆಗೆ ವೈದ್ಯಕೀಯ ನೆರವು ನೀಡಲಾಗಿದೆ. ಅಲ್ಲದೇ ಅವರಿಗೆ ಸರ್ಕಾರದ ಅತಿಥಿಗೃಹದಲ್ಲಿ ವಾಸ್ತವ್ಯಕ್ಕೆ ಅನುಕೂಲ ಮಾಡಿಕೊಡಲಾಗಿದೆ
ದೀಪಕ್ ಹಾಗೂ ಆತನ ಪತ್ನಿ ಕುಸುಮಾ
ದೀಪಕ್ ಹಾಗೂ ಆತನ ಪತ್ನಿ ಕುಸುಮಾ

ಬೆಂಗಳೂರು: ಲಾಕ್ ಡೌನ್ ಪರಿಣಾಮದಿಂದಾಗಿ ಉಳಿಯಲು ಮನೆ, ತಿನ್ನಲು ಅನ್ನವಿಲ್ಲದೆ ಪುಟ್ ಪಾತ್ ನಲ್ಲಿ  ತೀವ್ರ ತೊಂದರೆ ಎದುರಿಸಿದ ವಲಸಿಗ ದಂಪತಿಯ ಕಥೆ ಸಂತೋಷದಲ್ಲಿ ಮುಕ್ತಾಯವಾಗಿದೆ. ಪುಟ್ ಪಾತ್ ನಲ್ಲಿದ್ದ ಜಾರ್ಖಂಡ್ ಮೂಲದ ದಂಪತಿಗಳನ್ನು ಪತ್ತೆ ಹಚ್ಚುವುದರ ಜೊತೆಗೆ ವೈದ್ಯಕೀಯ ನೆರವು ನೀಡಲಾಗಿದೆ. ಅಲ್ಲದೇ ಅವರಿಗೆ ಸರ್ಕಾರದ ಅತಿಥಿಗೃಹದಲ್ಲಿ ವಾಸ್ತವ್ಯಕ್ಕೆ ಅನುಕೂಲ ಮಾಡಿಕೊಡಲಾಗಿದೆ

ದಾವಣಗೆರೆಯಲ್ಲಿ ಲಾಂಡ್ರಿಯಲ್ಲಿ ಕೆಲಸ ಮಾಡುತ್ತಿದ್ದ ದೀಪಕ್  ಮತ್ತು ಆತನ ಏಳು ತಿಂಗಳ ಗರ್ಭೀಣಿ ಕುಸುಮಾ ಈ ಜೋಡಿಯಾಗಿದ್ದಾರೆ. ಕುಸುಮಾಳನ್ನು ತವರಿಗೆ ಕಳುಹಿಸಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಿದ ದೀಪಕ್ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ತೆರಳಿದ್ದರು ಆದರೆ, ಕೊರೋನಾವೈರಸ್ ಕಾರಣ ಲಾಕ್ ಡೌನ್ ಘೋಷಣೆಯಾಗಿ ರೈಲು ಸಂಚಾರ ಸ್ಥಗಿತಗೊಂಡಿದ್ದರಿಂದ  ಕೆಟ್ಟ ಪರಿಸ್ಥಿತಿ ಎದುರಾಯಿತು

ಏನು ಮಾಡಬೇಕೆಂದು ತೋಚದಂತಾದ ಈ ದಂಪತಿ, ಅಂತಿಮವಾಗಿ ಅತ್ತಿಬೆಲೆಯಲ್ಲಿರುವ ಕುಸುಮಾ ಸಂಬಂಧಿಕರ ಮನೆಗೆ ತೆರಳಿದ್ದಾರೆ. ಸಂಬಂಧಿಕರು ಕೆಲ ದಿನಗಳ ಕಾಲ ವಾಸ್ತವ್ಯಕ್ಕೆ ಅವಕಾಶ ನೀಡಿದ್ದಾರೆ. ಆದರೆ, ಲಾಕ್ ಡೌನ್ ನಿಂದಾಗಿ ಸಂಕಷ್ಟದಲ್ಲಿದ್ದ ಸಂಬಂಧಿಕರು ಕೂಡಾ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ದೀಪಕ್ ಮತ್ತು ಕುಸುಮಾರಿಗೆ ತಿಳಿಸಿದ್ದಾರೆ. ಇದರಿಂದಾಗಿ ಏಲ್ಲಿಗೆ ಹೋಗುವುದು ಎಂಬುದು ತಿಳಿಯದೆ ಅತ್ತಿಬೆಲೆಯ ಜೈನ್ ದೇವಾಲಯದ ಬಳಿ ಪುಟ್ ಪಾತ್ ನಲ್ಲಿದ್ದರು. ಈ ದಂಪತಿಯನ್ನು ಗಮನಿಸಿದ ಕೆಲವರು ಪೋನ್ ನಂಬರ್ ನೊಂದಿಗೆ ಟ್ವೀಟ್ ಮಾಡಿದ್ದು, ಆಡಳಿತ ಸಂಸ್ಥೆಗಳು ಹಾಗೂ ಸಾರ್ವಜನಿಕರು ಸಹಾಯ ಮಾಡಲು ಮುಂದೆ ಬಂದಿದ್ದಾರೆ.

ಭಾಷೆ ಅರ್ಥವಾಗದೆ ಭಯಭೀತಿಗೊಂಡು ಪೋನ್ ಸ್ವೀಚ್ ಮಾಡಿ ಹತ್ತಿರದ ಕಟ್ಟಡವೊಂದರಲ್ಲಿ ಬಚ್ಚಿಟ್ಟದರು. ವಾರ್ತಾ ಇಲಾಖೆ ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳು ಅವರನ್ನು ಪತ್ತೆ ಹಚ್ಚಲು ತೆರಳಿದರೂ ಅವರು ಸಿಕ್ಕಿರಲಿಲ್ಲ. ಮಾರನೇ ದಿನ ದೀಪಕ್ ಪೋನ್ ಆನ್ ಮಾಡಿದ್ದಾರೆ. ನಂತರ ಮೊಬೈಲ್ ಟವರ್ ಮೂಲಕ ಅವರಿರುವ ಪ್ರದೇಶವನ್ನು ಪತ್ತೆ ಹಚ್ಚಲಾಯಿತು ಎಂದು ಕೊರೋನಾ ಯೋಧ ವಿಜಯ್ ಗ್ರೋವರ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.

ದಂಪತಿಯನ್ನು ಮೊದಲಿಗೆ ವಾರ್ತಾ ಇಲಾಖೆಗೆ ಕರೆದೊಯ್ಯಲಾಯಿತು. ಕುಸಮಾಳನ್ನು ತಪಾಸಣೆ ಮಾಡಲು ಇಎಸ್ ಐನಿಂದ ವೈದ್ಯರೊಬ್ಬರನ್ನು ಕರೆಯಲಾಯಿತು ನಂತರ ಅವರು ಉಳಿದುಕೊಳ್ಳಲು ಸರ್ಕಾರದ ಅತಿಥಿ ಗೃಹದಲ್ಲಿ ಅವಕಾಶ ನೀಡಲಾಯಿತು. ಲಾಕ್ ಡೌನ್ ಮುಗಿಯುವವರೆಗೂ ಅಲ್ಲಿಯೇ ಉಳಿಯಲು ಅವಕಾಶ ಮಾಡಿಕೊಡಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com