ಮಂಗಳೂರು:ಲಿಫ್ಟ್ ಒಳಗಡೆ ಉಗಿಯುವುದು, ಸೀನುವುದು ಮಾಡ್ತಿದ್ದ ವಿಯಟ್ನಾಂ ಪ್ರಜೆಗಳ ವಿರುದ್ಧ ದೂರು

ಮನೆಯಲ್ಲಿ ಪ್ರತ್ಯೇಕಿಸಿರುವ ಇಬ್ಬರು ವಿದೇಶಿ ನಾಗರಿಕರು ಅಪಾರ್ಟ್ ಮೆಂಟ್ ಲಿಫ್ಟ್ ಒಳಗಡೆ ಸೀನುವುದು, ಉಗುಳುವುದು ಮಾಡುತ್ತಿದ್ದರಿಂದ ಅವರ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಂಗಳೂರು: ಮನೆಯಲ್ಲಿ ಪ್ರತ್ಯೇಕಿಸಿರುವ ಇಬ್ಬರು ವಿದೇಶಿ ನಾಗರಿಕರು ಅಪಾರ್ಟ್ ಮೆಂಟ್ ಲಿಫ್ಟ್ ಒಳಗಡೆ ಸೀನುವುದು, ಉಗುಳುವುದು ಮಾಡುತ್ತಿದ್ದರಿಂದ ಅವರ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಡಿಕೆ ವ್ಯಾಪಾರದ ಹಿನ್ನೆಲೆಯಲ್ಲಿ ಮಾರ್ಚ್ ತಿಂಗಳಲ್ಲಿ ಮಂಗಳೂರಿಗೆ ಆಗಮಿಸಿದ ಇಬ್ಬರು ಮಹಿಳೆಯರು ಸೇರಿದಂತೆ ಐವರು ವಿಯಟ್ನಾಂ ನಾಗರಿಕರು ಲಾಕ್ ಡೌನ್ ನಿಂದಾಗಿ ಇಲ್ಲಿಯೇ ಉಳಿದಿದ್ದು, ಅವರ ಅಪಾರ್ಟ್ ಮೆಂಟ್ ನಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ.

14 ದಿನಗಳ ಕ್ವಾರಂಟೈನ್ ಅವಧಿ ಮುಗಿದ ಬಳಿಕ ವಿದೇಶಿ ನಾಗರಿಕರು ಅನುಚಿತ ವರ್ತನೆ ಆರಂಭಿಸಿದ್ದಾಗಿ ಅಪಾರ್ಟ್ ಮಾಲೀಕರ ಸಂಘ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. 

ಲಿಫ್ಟ್ ಒಳಗಡೆ ಸೀನುವುದು, ಉಗುಳುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮತ್ತೆರಡು ವಾರಗಳ ಕಾಲ ಕ್ವಾರಂಟೈನ್ ಗಾಗಿ ಎಲ್ಲ ಐದು ಮಂದಿಯನ್ನು ಇಎಸ್ ಐ ಆಸ್ಪತ್ರೆಗೆ ಸ್ಥಳಾಂತರಿಸಿದ ಬಳಿಕ  ಕದ್ರಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪ್ರಾಥಮಿಕ ತನಿಖೆಯನ್ನು ಆರಂಭಿಸಿದ್ದಾರೆ. 

ಐದು ಮಂದಿ ವಿದೇಶಿಯರ ಪೈಕಿ ಇಬ್ಬರ ವಿರುದ್ಧ ಐಪಿಸಿ ಸೆಕ್ಷನ್ 269 ಹಾಗೂ 270ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com