ನಂಜನಗೂಡಿನ ಜ್ಯುಬಿಲಿಯೆಂಟ್ ಗೆ ಭೇಟಿ ನೀಡಿದ್ದ 9 ವಿದೇಶಿಗರ ಪತ್ತೆ- ಸುರೇಶ್ ಕುಮಾರ್ 

ಮೈಸೂರಿನ ಕೊರೋನಾ ಹಾಟ್ ಸ್ಪಾಟ್ ಆಗಿರುವ ನಂಜನಗೂಡಿಗೆ ಭೇಟಿ ನೀಡಿದ್ದ 10 ವಿದೇಶಿಗರ ಪೈಕಿ 9 ಜನರನ್ನು ಪತ್ತೆಹಚ್ಚಲಾಗಿದೆ ಎಂದು ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ
ಸುರೇಶ್ ಕುಮಾರ್
ಸುರೇಶ್ ಕುಮಾರ್

ಬೆಂಗಳೂರು: ಮೈಸೂರಿನ ಕೊರೋನಾ ಹಾಟ್ ಸ್ಪಾಟ್ ಆಗಿರುವ ನಂಜನಗೂಡಿಗೆ ಭೇಟಿ ನೀಡಿದ್ದ 10 ವಿದೇಶಿಗರ ಪೈಕಿ 9 ಜನರನ್ನು ಪತ್ತೆಹಚ್ಚಲಾಗಿದೆ ಎಂದು ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ

ನಂಜನಗೂಡಿನಲ್ಲಿ ಇಲ್ಲಿಯವರೆಗೆ 66 ಜನರಿಗೆ ಕೊರೋನಾ ಸೋಂಕು ತಗುಲಿದೆ. ನಂಜನಗೂಡಿಗೆ ಕಾಡುತ್ತಿರುವ ವೈರಸ್ ಮೂಲ ತನಿಖೆ ಮಾಡುವ ವೇಳೆ 10 ವಿದೇಶಿಗರು ಭೇಟಿ ನೀಡಿರುವುದು ತಿಳಿದುಬಂದಿದೆ. 

ತಕ್ಷಣ ಅವರನ್ನು ಪತ್ತೆಹಚ್ಚಲು ವಿದೇಶಾಂಗ ಸಚಿವಾಲಯದ ನೆರವು ಪಡೆಯಲಾಗಿತ್ತು. ಸಚಿವಾಲಯ ತನ್ನ ರಾಯಭಾರಿಗಳ ಮೂಲಕ ಚೀನಾ, ಜರ್ಮನಿ, ಜಪಾನ್ನ ಮತ್ತು ಅಮೆರಿಕದಿಂದ ಈ ವ್ಯಕ್ತಿಗಳನ್ನು ಟ್ರ್ಯಾಕ್ ಮಾಡಲು ಯತ್ನಿಸಿತ್ತು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com