ಲಾಕ್ ಡೌನ್ ಇದ್ದರೂ ಟ್ರಾಫಿಕ್ ಜಾಮ್: ಬೆಂಗಳೂರಿನಲ್ಲಿ ರಸ್ತೆ ತುಂಬೆಲ್ಲಾ ವಾಹನಗಳು!

ಲಾಕ್ ಡೌನ್ ಇದ್ದರೂ ಸಿಲಿಕಾನ್ ಸಿಟಿಯಲ್ಲಿ ಮತ್ತೆ ಟ್ರಾಫಿಕ್ ಜಾಮ್ ಕಿರಿಕಿರಿ ಆರಂಭವಾಗಿದೆ. ಮೇ 3ರವರೆಗೂ ಸರ್ಕಾರ ಲಾಕ್ ಡೌನ್ ವಿಸ್ತರಿಸಿದ್ದರೂ  ಸೋಮವಾರ ಮತ್ತು ಮಂಗಳವಾರ ನಗರದಲ್ಲಿ ವಾಹನಗಳ ಸಂಚಾರ ಯಥಾ ಸ್ಥಿತಿಯಲ್ಲಿತ್ತು.
ಕೆ ಆರ್ ಮಾರುಕಟ್ಟೆ ರಸ್ತೆಯಲ್ಲಿ ವಾಹನಗಳು
ಕೆ ಆರ್ ಮಾರುಕಟ್ಟೆ ರಸ್ತೆಯಲ್ಲಿ ವಾಹನಗಳು

ಬೆಂಗಳೂರು: ಲಾಕ್ ಡೌನ್ ಇದ್ದರೂ ಸಿಲಿಕಾನ್ ಸಿಟಿಯಲ್ಲಿ ಮತ್ತೆ ಟ್ರಾಫಿಕ್ ಜಾಮ್ ಕಿರಿಕಿರಿ ಆರಂಭವಾಗಿದೆ. ಮೇ 3ರವರೆಗೂ ಸರ್ಕಾರ ಲಾಕ್ ಡೌನ್ ವಿಸ್ತರಿಸಿದ್ದರೂ  ಸೋಮವಾರ ಮತ್ತು ಮಂಗಳವಾರ ನಗರದಲ್ಲಿ ವಾಹನಗಳ ಸಂಚಾರ ಯಥಾ ಸ್ಥಿತಿಯಲ್ಲಿತ್ತು.

ಪಾಸ್ ಇಲ್ಲದಿದ್ದರೇ ವಾಹನ ಸಂಚಾರಕ್ಕೆ ಅವಕಾಶ ಇಲ್ಲ ಎಂಬ ನಿಯಮವಿದ್ದರೂ ಮಿನರ್ವ ಸರ್ಕಲ್ ಮತ್ತು ಆನಂದ್ ರಾವ್ ಸರ್ಕಲ್ ಗಳಲ್ ವಾಹನ ದಟ್ಟಣೆ ಹೆಚ್ಚಿತ್ತು. ಈ ರಸ್ತೆಗಳಲ್ಲಿ ಬ್ಯಾರಿಕೇಡ್ ಇಲ್ಲದಿದ್ದರಿಂದ  ದ್ವಿಚಕ್ರ ವಾಹನಗಳು ಮತ್ತು ಕಾರುಗಳ ಸಂಚಾರ ಹೆಚ್ಚಿತ್ತು.

ಅನೇಕ ಸರ್ಕಾರಿ ಕಚೇರಿಕಗಳು ಮಂಗಳವಾರದಿಂದ ಕೆಲಸ ಆರಂಭಿಸಿರುವುದರಿಂದ ವಾಹನಗಳ ಸಂಚಾರ ಹೆಚ್ಚಿದೆ.  ಬೆಳಗ್ಗೆ ಮತ್ತು ಸಂಜೆ ಮಾತ್ರ ವಾಹನ ಸಂಚಾರ ಹೆಚ್ಚಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಒಂದೆಡೆ ರಸ್ತೆಗಳನ್ನು ಬಂದ್ ಮಾಡಿರುವುದರಿಂದ ಈ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಿದೆ. ಏಪ್ರಿಲ್ 20ರಿಂದ ಐಟಿ ಬಿಟಿ ಕಂಪನಿಗಳು ಕೆಲಸ ನಡೆಸಬುದೆಂದು ಸರ್ಕಾರ ಆದೇಶ ನೀಡಿದ್ದರಿಂದ ವಾಹನಗಳ ಸಂಖ್ಯೆ ಹೆಚ್ಚಿದೆ

ಬೆಂಗಳೂರಿನಲ್ಲಿ ಸುಮಾರು ಒಂದೂವರೆ ಲಕ್ಷ ಮಂದಿಗೆ ಪೊಲೀಸರು ಪಾಸ್ ನೀಡಿದ್ದಾರೆ. ಅದರಲ್ಲಿ ಬ್ಯಾಂಕ್ ಉದ್ಯೋಗಿಗಳು ಸರ್ಕಾರಿ ನೌಕರರು ,ಆಸ್ಪತ್ರೆ ಸಿಬ್ಬಂದಿಗಳಾಗಿದ್ದಾರೆ ಎಂದು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com