ಸುರೇಶ್ ಕುಮಾರ್
ಸುರೇಶ್ ಕುಮಾರ್

ಮೇ 3ರ ಲಾಕ್‌ಡೌನ್ ಮುಗಿದ ನಂತರ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಸುವುದು ಖಚಿತ: ಶಿಕ್ಷಣ ಸಚಿವ ಸುರೇಶ್‌ ಕುಮಾರ್

ಮೇ 3ರ ಲಾಕ್‌ಡೌನ್ ಮುಗಿದ ನಂತರ ಶಿಕ್ಷಣ ತಜ್ಞರ ಜೊತೆ ಚರ್ಚಿಸಿ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ನಡೆಸುವುದು ಕಡ್ಡಾಯ ಈ ಬಗ್ಗೆ ಪೋಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಯಾವುದೇ ಗೊಂದಲ ಬೇಡ, ವಿದ್ಯಾರ್ಥಿಗಳು ಕೊರೊನಾ ವೈರಸ್ ಹಾಳು ಮಾಡಿರುವ ಲಾಕ್‌ಡೌನ್ ಸಮಯವನ್ನು ಓದಿನತ್ತ ಚಿತ್ತ ಹರಿಸಿ ಹೆಚ್ಚು ಅಂಕ ಗಳಿಸುವತ್ತ ಕಾರ್ಯಪ್ರವೃತ್ತರಾಗಬೇಕೆಂದು ಪ್ರಾಥಮಿಕ ಹಾಗೂ ಪ್ರೌಢಶಿಕ್

ಚಾಮರಾಜನಗರ: ಮೇ 3ರ ಲಾಕ್‌ಡೌನ್ ಮುಗಿದ ನಂತರ ಶಿಕ್ಷಣ ತಜ್ಞರ ಜೊತೆ ಚರ್ಚಿಸಿ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ನಡೆಸುವುದು ಕಡ್ಡಾಯ ಈ ಬಗ್ಗೆ ಪೋಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಯಾವುದೇ ಗೊಂದಲ ಬೇಡ, ವಿದ್ಯಾರ್ಥಿಗಳು ಕೊರೊನಾ ವೈರಸ್ ಹಾಳು ಮಾಡಿರುವ ಲಾಕ್‌ಡೌನ್ ಸಮಯವನ್ನು ಓದಿನತ್ತ ಚಿತ್ತ ಹರಿಸಿ ಹೆಚ್ಚು ಅಂಕ ಗಳಿಸುವತ್ತ ಕಾರ್ಯಪ್ರವೃತ್ತರಾಗಬೇಕೆಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್‌ಕುಮಾರ್ ಹೇಳಿದ್ದಾರೆ. 

ಗಡಿ ಜಿಲ್ಲೆ ಚಾಮರಾಜನಗರ ತಾಲ್ಲೂಕಿನ ಸಂತೇಮರಹಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್.ಎಸ್.ಎಲ್.ಸಿ ಪರೀಕ್ಷೆಯು ಮೇ 3ರ ಲಾಕ್‌ಡೌನ್ ಮುಗಿದ ನಂತರ ನಡೆಯುವುದು ಕಡ್ಡಾಯ. ಶಿಕ್ಷಣ ತಜ್ಞರ ಜೊತೆ ಚರ್ಚಿಸಿ ಪ್ರತಿ ವಿಷಯಗಳು ನಡೆಯುವ ದಿನಾಂಕ ಹಾಗೂ ಸಮಯವನ್ನು ತಿಳಿಸಲಾಗುವುದು. ಸುಮ್ಮನೆ ಪೋಷಕರು ಹಾಗೂ ವಿದ್ಯಾರ್ಥಿಗಳು ಅನಗತ್ಯ ವದಂತಿಗಳಿಗೆ ಕಿವಿಗೊಡದೆ ಓದಿನಲ್ಲಿ ತಲ್ಲೀನರಾಗಬೇಕೆಂದು ಮನವಿ ಮಾಡಿದ್ದಾರೆ. 

ಈ ನಿಟ್ಟಿನಲ್ಲಿ ಶಿಕ್ಷಣ ತಜ್ಞರಜೊತೆ ಚರ್ಚಿಸಿ, ಸರ್ಕಾರಿ ಸ್ವಾಮ್ಯದ ದೂರದರ್ಶನದ ಚಂದನ ವಾಹಿನಿಯಲ್ಲಿ ಮೇ 29ರಿಂದ ಎಸ್.ಎಸ್.ಎಲ್.ಸಿ ಪಠ್ಯಪುಸ್ತಕಗಳ ಪಾಠಗಳು ಪರಿಣಿತ ಶಿಕ್ಷಕರಿಂದ ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂತೆ ಪುನರ್‌ಮನನ ತರಗತಿಗಳು ನಡೆಯುತ್ತವೆ. ಪುನರ್‌ಮನನದ ತರಗತಿಗಳು ಮುಗಿದ ನಂತರ ವಿದ್ಯಾರ್ಥಿಗಳಿಗೆ ಮಾದರಿ ಪ್ರಶ್ನೆ ಪತ್ರಿಕೆಗೆ ಉತ್ತರಿಸುವಂತೆ ಸಿದ್ದಗೊಳಿಸಲಾಗುತ್ತದೆ. 

ಇದು ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸಲು ನೆರವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ದೂರದರ್ಶನದ ಚಂದನ ವಾಹಿನಿಯಲ್ಲಿ ಏಪ್ರಿಲ್ 29 ರಿಂದ ಬಿತ್ತರವಾಗುವ ಎಸ್.ಎಸ್.ಎಲ್.ಸಿ ಪರೀಕ್ಷೆಯ ಪುನರ್‌ಮನನ ತರಗತಿಗಳನ್ನು ತಪ್ಪದೇ ವೀಕ್ಷಿಸಬೇಕೆಂದು ಮನವಿ ಮಾಡಿದ ಅವರು ನಂತರ ಈ ಪುನರ್‌ಮನನ ತರಗತಿಗಳ ವಿಡಿಯೋ ತುಣಕುಗಳನ್ನು ಹಾಗೂ ದ್ವನಿಮುದ್ರಿಕೆಯನ್ನು ಆಕಾಶವಾಣಿಯ ಯೂಟ್ಯೂಬ್‌ನಲ್ಲಿ ಬಿತ್ತರಿಸುವುದರ ಜೊತೆಗೆ ಶಿಕ್ಷಣ ಇಲಾಖೆಯು ಸಿದ್ದಪಡಿಸಿರುವ ಯೂಟ್ಯೂಬ್ ಚಾನಲ್‌ನಲ್ಲಿ ಬಿತ್ತರಿಸಲಾಗುವುದೆಂದರು. 

ಕೋವಿಡ್‌ನ ಈ ಸಮಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಕಡ್ಡಾಯವಾಗಿ ಪೋಷಕರು ಶುಲ್ಕ ಪಾವತಿಸುವಂತೆ ಒತ್ತಡ ಹೇರಬಾರದು ಪೋಷಕರು ಸ್ವಯಂ ಪ್ರೇರಿತವಾಗಿ ಶುಲ್ಕ ನೀಡಿದರೆ ಪಾವತಿಸಿಕೊಳ್ಳಬಹುದು ಇದನ್ನು ಶಿಕ್ಷಕರ ವೇತನಕ್ಕೆ ಬಳಸಿಕೊಳ್ಳಬೇಕು. ಅದು ಬಿಟ್ಟು ಶಿಕ್ಷಣ ಇಲಾಖೆಯು ಸೂಚಿಸಿರುವ ನಿಬಂಧಗಳನ್ನು ಗಾಳಿಗೆ ತೂರಿ ಶುಲ್ಕ ವಸೂಲಿ ಮಾಡಿದರೆ ಅಂತಹ ಶಿಕ್ಷಣ ಸಂಸ್ಥೆಗಳ ವಿರುದ್ದ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ವರದಿ: ಗೂಳಿಪುರ ನಂದೀಶ. ಎಂ.

Related Stories

No stories found.

Advertisement

X
Kannada Prabha
www.kannadaprabha.com