ಕೋವಿಡ್ -19: ಬೆಂಗಳೂರಿನಲ್ಲಿ ಶೇ. 50 ರಷ್ಟು ಪಿ. ಪಿ. ಇ ರಕ್ಷಾ ಕವಚಗಳ ಉತ್ಪಾದನೆ!

ದೇಶದಲ್ಲಿ ಕೋವಿಡ್-19 ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಅಗತ್ಯವಾದ ರಕ್ಷಾ ಕವಚ ಉತ್ಪಾದನಾ ಸಾಮರ್ಥ್ಯವನ್ನು ಜವಳಿ ಇಲಾಖೆ ಹೆಚ್ಚಿಸಿದ್ದು, ದಿನಕ್ಕೆ 1 ಲಕ್ಷಕ್ಕೂ ಅಧಿಕ ಕವಚಗಳನ್ನು ತಯಾರಿಸಲಾಗುತ್ತಿದೆ
ಪಿ. ಪಿ. ಇ ರಕ್ಷಾ ಕವಚ
ಪಿ. ಪಿ. ಇ ರಕ್ಷಾ ಕವಚ

ಬೆಂಗಳೂರು: ದೇಶದಲ್ಲಿ ಕೋವಿಡ್-19 ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಅಗತ್ಯವಾದ ರಕ್ಷಾ ಕವಚ ಉತ್ಪಾದನಾ ಸಾಮರ್ಥ್ಯವನ್ನು ಜವಳಿ ಇಲಾಖೆ ಹೆಚ್ಚಿಸಿದ್ದು, ದಿನಕ್ಕೆ 1 ಲಕ್ಷಕ್ಕೂ ಅಧಿಕ ಕವಚಗಳನ್ನು ತಯಾರಿಸಲಾಗುತ್ತಿದೆ

ಕೋವಿಡ್ -19 ಪ್ರಕರಣಗಳ  ವಿರುದ್ದ ಹೋರಾಟಕ್ಕೆ ಪಿ.ಪಿ.ಇ. ರಕ್ಷಾ ಕವಚಗಳ ಉತ್ಪಾದನೆಯಲ್ಲಿ ಬೆಂಗಳೂರು ಪ್ರಮುಖ ತಾಣವಾಗಿದ್ದು, ಇದುವರೆಗಿನ ಒಟ್ಟು ಉತ್ಪಾದನೆಯ ಸುಮಾರು 10 ಲಕ್ಷ  ಯೂನಿಟ್ ಗಳಲ್ಲಿ ಶೇಕಡಾ 50 ರಕ್ಷಾ ಕವಚಗಳ ಉತ್ಪಾದನೆ ಬೆಂಗಳೂರಿನಲ್ಲಿ ಆಗುತ್ತಿದೆ. ದೇಹ ರಕ್ಷಣೆಯ ಪಿ.ಪಿ.ಇ.ಗಳು ಆರೋಗ್ಯ ವೃತ್ತಿಪರರಿಗೆ ಉನ್ನತ ಮಟ್ಟದ ರಕ್ಷಣೆ ಒದಗಿಸುವ ವಿಶೇಷ ರಕ್ಷಾ ಕವಚಗಳಾಗಿವೆ.

ಇದರ ತಯಾರಿಕೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂಗೀಕರಿಸಿದ ಕಠಿಣ ತಾಂತ್ರಿಕ ಆವಶ್ಯಕತೆ ಪೂರೈಸಬೇಕಾಗಿದೆ. ಮೆ/ ಎಚ್.ಎಲ್.ಎಲ್. ಲೈಫ್ ಕೇರ್ ಲಿಮಿಟೆಡ್ ಸಂಸ್ಥೆಯು ಆಸ್ಪತ್ರೆಗಳು ಮತ್ತು ಆರೋಗ್ಯ ರಕ್ಷಣಾ ಸಂಸ್ಥೆಗಳಿಗೆ ಇವುಗಳನ್ನು ಖರೀದಿಸಲು ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಡಿಯಲ್ಲಿ ನಿಯೋಜಿತವಾದ ಏಕ ಗವಾಕ್ಷ ಸಂಸ್ಥೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com