ಚಿಕ್ಕೋಡಿ: ಯೋಧನ ಕೈಗೆ ಕೋಳ, ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ; 5 ದಿನಗಳ ನಂತರ ಸಿಕ್ತು ಜಾಮೀನು!

ಇತ್ತೀಚೆಗೆ ಯಕ್ಸಂಬಾದಲ್ಲಿ ಇಬ್ಬರು ಪೋಲೀಸ್ ಪೇದೆಗಳ ಜೊತೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಹಲ್ಲೆ ಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಸಿ ಆ ಪಿ ಎಫ್ ಯೋಧನಿಗೆ ಜಾಮೀನು ಮಂಜೂರು ಆಗಿದೆ.
ಸಚಿನ್ ಸಾವಂತ್
ಸಚಿನ್ ಸಾವಂತ್

ಚಿಕ್ಕೋಡಿ: ಇತ್ತೀಚೆಗೆ ಯಕ್ಸಂಬಾದಲ್ಲಿ ಇಬ್ಬರು ಪೋಲೀಸ್ ಪೇದೆಗಳ ಜೊತೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಹಲ್ಲೆ ಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಸಿ ಆ ಪಿ ಎಫ್ ಯೋಧನಿಗೆ ಜಾಮೀನು ಮಂಜೂರು ಆಗಿದೆ.

ಚಿಕ್ಕೋಡಿ 1ನೇ ಜೆಎಂಎಫ್‌ಸಿ ನ್ಯಾಯಾಲಯದಿಂದ ಷರತ್ತು ಬದ್ದ ಜಾಮೀನು ಮಂಜೂರಾಗಿ ಇವತ್ತೆ ಯೋಧ ಜೈಲಿನಿಂದ ಬಿಡುಗಡೆಯಾಗಲಿದ್ದಾನೆ. ಯೋಧನ ಪರ ವಕೀಲ ಬಿ ಡಿ ಪಾಟೀಲ ಮಾತನಾಡಿ, ಷರತ್ತು ಬದ್ದ ಜಾಮೀನು ಅರ್ಜಿ ಮಂಜೂರಾಗಿದೆ. ಹಿಂಡಲಗಾ ಜೈಲಿಗೆ ಕಳುಹಿಸಿ ಕೊಡ್ತಾರೆ ಅಲ್ಲಿಂದ ಅವರು ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದರು.

ಘಟನೆ‌ ಹಿನ್ನೆಲೆ: ಏ.23 ಎಂದು ಪೊಲೀಸರು ಹಾಗೂ ಯೋಧನ ನಡುವೆ ಗಲಾಟೆ ನಡೆದಿತ್ತು. ಮಾಸ್ಕ್ ಹಾಕದ ವಿಚಾರಕ್ಕೆ ಪೇದೆ – ಸಿಆರ್‌ಪಿಎಫ್ ಯೋಧನ ಮಧ್ಯೆ ಗಲಾಟೆ ನಡೆದಿತ್ತು ಕರ್ತವ್ಯನಿರತ ಪೇದೆ ಮೇಲೆ ಹಲ್ಲೆ ಆರೋಪದಡಿ ಸಿಆರ್‌ಪಿಎಫ್ ಯೋಧನ ಬಂಧನವಾಗಿತ್ತು. ಏಪ್ರಿಲ್ 23ರಂದು ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದಲ್ಲಿ ನಡೆದಿದ್ದ ಘಟನೆ ಯೋಧನ ಕೈಗೆ ಕೋಳ ಹಾಕಿದ್ದ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಬೆಳಗಾವಿ ಜಿಲ್ಲೆ ಸದಲಗಾ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.

ಜಾಮೀನು ಆದೇಶದೊಂದಿಗೆ ವಕೀಲರು ಚಿಕ್ಕೋಡಿಯಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ಪ್ರಯಾಣ ಬೆಳೆಸಿದ್ದು ಯೋಧನ ಬಿಡುಗಡೆಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com