ಟೋನಿಕ್ ಮದ್ಯದ ಮಳಿಗೆಗೆ ನೀಡಿರುವ ಪರವಾನಗಿ ಅಧಿಕೃತ: ಹೈಕೋರ್ಟ್'ಗೆ ರಾಜ್ಯ ಸರ್ಕಾರ ಮಾಹಿತಿ

ಟೋನಿಕ್ ಮದ್ಯದಜ ಮಳಿಗೆಗೆ ನೀಡಲಾಗಿರುವ ಪರವಾನಗಿ ಅಧಿಕೃತವಾಗಿದ್ದು. ಅಬಕಾರಿ ನಿಯಮಗಳನ್ನು ಯಾವುದೇ ರೀತಿಯಲ್ಲೂ ಉಲ್ಲಂಘನೆ ಮಾಡಿಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟ್'ಗೆ ಶುಕ್ರವಾರ ತಿಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಟೋನಿಕ್ ಮದ್ಯದಜ ಮಳಿಗೆಗೆ ನೀಡಲಾಗಿರುವ ಪರವಾನಗಿ ಅಧಿಕೃತವಾಗಿದ್ದು. ಅಬಕಾರಿ ನಿಯಮಗಳನ್ನು ಯಾವುದೇ ರೀತಿಯಲ್ಲೂ ಉಲ್ಲಂಘನೆ ಮಾಡಿಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟ್'ಗೆ ಶುಕ್ರವಾರ ತಿಳಿಸಿದೆ. 

ಅಬಕಾರಿ ನಿಯಮ ಉಲ್ಲಂಘಿಸಿ ನಗರದ ಎಂ.ಜಿ.ರಸ್ತೆಯಲ್ಲಿ ಮದ್ಯ ಮಾರಾಟ ಮಳಿಗೆ ತೆರೆಯಲು ಅನುಮತಿ ನೀಡಲಾಗಿದೆ ಎಂದು ವಕೀಲ ಎ.ವಿ.ಅಮರನಾಥನ್ ಎಂಬುವವರು ಸಾರ್ಜಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸಲ್ಲಿಸಿದ್ದರು. 

ಎದುರಿಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಪ್ರತಿಮೆ, ಅಕ್ಕಪಕ್ಕದಲ್ಲಿ ಕಬ್ಬನ್ ಪಾರ್ಕ್'ನ ಬಾಲಭವನ, ಚರ್ಚ್, ಉಪ ಪೊಲೀಸ್ ಅಧೀಕ್ಷಕರ ಕಚೇರಿ ಇವೆ. ಯಾವುದೇ ಧಾರ್ಮಿಕ ಮತ್ತು ಶೈಕ್ಷಣಿಕ ಸಂಸ್ಥೆ, ಆಸ್ಪತ್ರ, ಸರ್ಕಾರಿ ಕಚೇರಿ, ವಸತಿ ಪ್ರದೇಶಗಳ 100 ಮೀಟರ್ ಅಂತರದಲ್ಲಿ ಮದ್ಯದ ಮಳಿಗೆ ತೆರಯಲು ಅನುಮತಿ ನೀಡುವಂತಿಲ್ಲ. ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಯ ಮಧ್ಯಭಾಗದಿಂದ 220 ಮೀಟರ್ ಅಂತರದ ಒಳಗೆ ಇರಬಾರದು ಆದರೆ, ಕರ್ನಾಟಕ ಅಬಕಾರಿ ಪರವಾನಗಿ ನಿಯಮಾವಳಿ ಉಲ್ಲಂಘಿಸಿ ಪರವಾನಗಿ ನೀಡಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಿದ್ದರು. 

ವಿಚಾರಣೆ ವೇಳೆ ಹೈಕೋರ್ಟ್ ನೀಡಿದ ನಿರ್ದೇಶನದಂತೆ ತಹಶೀಲ್ದಾರ್ ಸರ್ವೆ ನಡೆಸಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಡಿಸಿಪಿ ಕಚೇರಿ, ಚರ್ಚೆ ಹಾಗೂ ಇತರೆ ಕಚೇರಿಗಳು ಮದ್ಯದಂಗಡಿಯಿಂದ 100 ಮೀಟರ್ ವ್ಯಾಪ್ತಿಯಿಂದ ಹೊರಗಿದೆ. ಮದ್ಯದಂಗಡಿ ಮತ್ತು ಡಿಸಿಪಿ ಕಚೇರಿ ನಡುವಿನ ಅಂತರವು 126.5 ಮೀಟರ್ ಮತ್ತು ಮದ್ಯದಂಗಡಿಯಿಂದ ಚರ್ಚ್ ನಡುವೆ 144 ಮೀಟರ್ ಅಂತರವಿದೆ ಎಂದು ತಿಳಿಸಿದರು. ಬಳಿಕ ಹೈಕೋರ್ಟ್ ವಿಭಾಗೀಯ ಪೀಠ ಅರ್ಜಿಯನ್ನು ವಜಾಗೊಳಿಸಿತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com