ಕೆಎಸ್ಆರ್ ರೈಲ್ವೇ ನಿಲ್ದಾಣದಲ್ಲಿ ಲಗೇಜ್ ಸೋಂಕು ನಿವಾರಕ ಯಂತ್ರ

ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಈ ಸಮಯದಲ್ಲಿ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಲಗೇಜುಗಳನ್ನು ಸೋಂಕು ಮುಕ್ತಗೊಳಿಸುವ ಯುವಿ ಬ್ಯಾಗೇಜ್ ಬಾತ್ ಯಂತ್ರವನ್ನು ಅಳವಡಿಸಲಾಗಿದೆ. 
ಲಗೇಜ್ ಸೋಂಕು ನಿವಾರಕ ಯಂತ್ರ
ಲಗೇಜ್ ಸೋಂಕು ನಿವಾರಕ ಯಂತ್ರ

ಬೆಂಗಳೂರು: ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಈ ಸಮಯದಲ್ಲಿ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಲಗೇಜುಗಳನ್ನು ಸೋಂಕು ಮುಕ್ತಗೊಳಿಸುವ ಯುವಿ ಬ್ಯಾಗೇಜ್ ಬಾತ್ ಯಂತ್ರವನ್ನು ಅಳವಡಿಸಲಾಗಿದೆ. 

ರೈಲು ನಿಲ್ದಾಣದ ಎರಡನೇ ಪ್ರವೇಶ ದ್ವಾರದ ಬಳಿ ಈ ಯಂತ್ರವನ್ನು ಅಳವಡಿಸಲಾಗಿದೆ. ಬೆಂಗಳೂರು ವಿಭಾಗೀಯ ರೈಲ್ವೇ ಆಡಳಿತ ವಿಭಾಗದ ಹೆಚ್ಚುವರಿ ವ್ಯವಸ್ಥಾಪಕಿ ಕಲ್ಯಾಣಿ ಸೇತುರಾಮನ್ ಹಾಗೂ ವಾಣಿಜ್ಯ ವಿಭಾಗದ ವ್ಯವಸ್ಥಾಪಕ ಡಾ.ಎ.ಎನ್,ಕೃಷ್ಣ ರೆಟ್ಟಿಯವರು ಸೋಮವಾರ ಈ ಸೋಂಕು ನಿವಾರಕ ಯಂತ್ರಕ್ಕೆ ಚಾಲನೆ ನೀಡಿದರು. 

ಪ್ರಯಾಣಿಕರು ರೈಲು ನಿಲ್ದಾಣ ಪ್ರವೇಶಕ್ಕೂ ಮುನ್ನ ಈ ಸೋಂಕು ನಿವಾರಕ ಸುರಂಗಾಕೃತಿಯ ಯಂತ್ರದಲ್ಲಿ ತಮ್ಮ ಲಗೇಜ್ ಗಳನ್ನು ಹಾಕಬೇಕು. ಈ ವೇಳೆ ಯಂತ್ರದಲ್ಲಿ ಅಲ್ಟ್ರಾ ವಯಲೇಟ್ ಕಿರಣಗಳು ಲಗೇಜ್ ಗಳ ಮೇಲಿನ ವೈರಸ್, ಬ್ಯಾಕ್ಟಿರಿಯಾ ಸೇರಿದಂತೆ ಎಲ್ಲ ರೀತಿಯ ಸೋಂಕುಗಳನ್ನು ನಿವಾರಿಸುತ್ತದೆ. 

ಬಳಿಕ ಸಿಬ್ಬಂದಿ ಸೋಂಕು ಮುಕ್ತ ಎಂಬ ಚೀಟಿಯನ್ನು ಆ ಲಗೇಜ್ ಮೇಲೆ ಅಂಟಿಸಿ, ಪ್ರಯಾಣಿಕರಿಗೆ ಹಿಂದುರಿಸಲಿದ್ದಾರೆ. ಉಚಿತ ಸೇವೆ ನೀಡಲಾಗುತ್ತಿದೆ. ಬಳಿಕ ದರ ನಿಗಪಡಿಸಲು ತೀರ್ಮಾನಿಸಲಾಗಿದೆ. ಚೆನ್ನೈ ಮೂಲಕ ಆಪ್ಟಿಮರ್ ಬಯೋ ಮತ್ತು ಐಟಿ ಸೆಲ್ಯೂಷನ್ ಈ ಯಂತ್ರವನ್ನು ಅಭಿವದ್ಧಿಪಡಿಸಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com