ಗಲಭೆಕೋರರು ನನ್ನ ಕ್ಷೇತ್ರಕ್ಕೆ ಸೇರಿದವರಾಗಿರಲಿಲ್ಲ: ಶಾಸಕ ಅಖಂಡ ಶ್ರೀನಿವಾಸ ಮೂರ್ತಿ

ಮಂಗಳವಾರ ರಾತ್ರಿ ಏಕಾಏಕಿ 3-4 ಸಾವಿರ ಜನರು ಮನೆಯ ಮೇಲೆ ದಾಳಿ ನಡೆಸಿ, ನನ್ನ ಹಾಗೂ ತಮ್ಮನ ಮನೆಯನ್ನು ಸುಟ್ಟು ಹಾಕಿದ್ದಾರೆ. ಒಡವೆ, ಹಣ ಎತ್ತಿಕೊಂಡು ಹೋಗಿದ್ದಾರೆ. ಇವರಾರು ನನ್ನ ಕ್ಷೇತ್ರದ ಜನರಲಾಗಿರಲಿಲ್ಲ. ರಾಡ್ ಹಾಗೂ ಪೆಟ್ರೋಲ್ ನ್ನು ಹಿಡಿದು ಹೊರಗಿನಿಂದ ಬಂದಿದ್ದರು.
ಗಲಭೆ ವೇಳೆ ಸ್ಥಳದಲ್ಲಿದ್ದ ವಾಹನಗಳಿಗೆ ಬೆಂಕಿ ಹಚ್ಚಿರುವ ದುಷ್ಕರ್ಮಿಗಳು
ಗಲಭೆ ವೇಳೆ ಸ್ಥಳದಲ್ಲಿದ್ದ ವಾಹನಗಳಿಗೆ ಬೆಂಕಿ ಹಚ್ಚಿರುವ ದುಷ್ಕರ್ಮಿಗಳು
Updated on

ಬೆಂಗಳೂರು: ಮಂಗಳವಾರ ರಾತ್ರಿ ಏಕಾಏಕಿ 3-4 ಸಾವಿರ ಜನರು ಮನೆಯ ಮೇಲೆ ದಾಳಿ ನಡೆಸಿ, ನನ್ನ ಹಾಗೂ ತಮ್ಮನ ಮನೆಯನ್ನು ಸುಟ್ಟು ಹಾಕಿದ್ದಾರೆ. ಒಡವೆ, ಹಣ ಎತ್ತಿಕೊಂಡು ಹೋಗಿದ್ದಾರೆ. ಇವರಾರು ನನ್ನ ಕ್ಷೇತ್ರದ ಜನರಲಾಗಿರಲಿಲ್ಲ. ರಾಡ್ ಹಾಗೂ ಪೆಟ್ರೋಲ್ ನ್ನು ಹಿಡಿದು ಹೊರಗಿನಿಂದ ಬಂದಿದ್ದರು. ಇದು ಪೂರ್ವ ನಿಯೋಜಿತ ಕೃತ್ಯವಾಗಿದೆ. ಪೊಲೀಸರಿಗೆ ಕರೆ ಮಾಡಲೂ ಕೂಡ ನಮಗೆ ಕಾಲಾವಕಾಶ ನೀಡಲಿಲ್ಲ ಎಂದು ಪುಲಿಕೇಶಿ ನಗರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರು ಹೇಳಿದ್ದಾರೆ. 

ಘಟನೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಗಲಭೆಗೆ ರಾಜಕೀಯ ಕಾರಣಗಳನ್ನು ನಾನು ನೀಡುವುದಿಲ್ಲ. ಅಣ್ಣನ ಮಗನೊಂದಿಗೆ ಮಾತನಾಡಿ ಹಲವು ವರ್ಷಗಳೇ ಕಳೆದಿವೆ ಎಂದು ಹೇಳಿದ್ದಾರೆ. 

ಘಟನೆ ಬಳಿಕ ಶ್ರೀನಿವಾಸ ಮೂರ್ತಿಯವರೊಂದಿಗೆ ಅವರ ಅಣ್ಣನ ಮಗನ ನವೀನ್ ಅವರ ಫೋಟೋಗಳು ಹಾಗೂ ನಾಮಫಲಕಗಳು ಕಾವಲ್ ಬೈರಸಂದ್ರದಲ್ಲಿ ರಾರಾಜಿಸಲು ಆರಂಭಿಸಿವೆ. ನವೀನ್ ಅವರು 25 ವರ್ಷದ ಯುವಕನಾಗಿದ್ದು, ನಿರುದ್ಯೋಗಿಯಾಗಿದ್ದಾರೆ. ಎರಡು ತಿಂಗಳ ಹಿಂದಷ್ಟೇ ನವೀನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com