ವಾಜುಭಾಯಿ ವಾಲಾ
ರಾಜ್ಯ
ರಾಷ್ಟ್ರಭಕ್ತಿಯನ್ನು ಪುನರ್ ವ್ಯಾಖ್ಯಾನ ಮಾಡುವ ಕಾಲ ಎದುರಾಗಿದೆ: ರಾಜ್ಯಪಾಲ ವಜೂಭಾಯಿ ವಾಲಾ
ದೇಶದಲ್ಲಿ ರಾಷ್ಟ್ರಭಕ್ತಿಯನ್ನು ಪುನರ್ ವ್ಯಾಖ್ಯಾನ ಮಾಡುವ ಕಾಲ ಎದುರಾಗಿದೆ ಎಂದು ರಾಜ್ಯಪಾಲ ವಜೂಭಾಯಿ ವಾಲಾ ಹೇಳಿದ್ದಾರೆ.
ಬೆಂಗಳೂರು: ದೇಶದಲ್ಲಿ ರಾಷ್ಟ್ರಭಕ್ತಿಯನ್ನು ಪುನರ್ ವ್ಯಾಖ್ಯಾನ ಮಾಡುವ ಕಾಲ ಎದುರಾಗಿದೆ ಎಂದು ರಾಜ್ಯಪಾಲ ವಜೂಭಾಯಿ ವಾಲಾ ಹೇಳಿದ್ದಾರೆ.
ರಾಜಭವನದಲ್ಲಿ ಧ್ವಜಾರೋಹಣ ನೆರವೇರಿಸಿ ರಾಜ್ಯದ ಜನತೆಗೆ ಸಂದೇಶ ನೀಡಿದ ಅವರು, ದೇಶದಲ್ಲಿ ಹರಿದಾಡುತ್ತಿರುವ ರಾಷ್ಟ್ರ ಭಕ್ತಿಯ ನವೋತ್ಸಾಹವನ್ನು ಗುರುತಿಸಲು ಸ್ವಾತಂತ್ರ್ಯ ದಿನೋತ್ಸವ ಉತ್ತಮ ಅವಕಾಶವಾಗಿದೆ.
ಸಂವಿಧಾನ ನೀಡಿರುವ ಮೂಲ ಭೂತ ಕರ್ವವ್ಯಗಳನ್ನು ಅತ್ಯಂತ ಪ್ರಮಾಣಿಕ ಮತ್ತು ಬದ್ಧತೆಯಿಂದ ನಿರ್ವಹಿಸಿದಾಗ ಮಾತ್ರ ಮೂಲ ಭೂತ ಹಕ್ಕುಗಳ ಫಲ ಅನುಭವಿಸಲು ಸಾಧ್ಯ ಎಂದರು.
ಕೋವಿಡ್ 19 ಸಂದರ್ಭದಲ್ಲಿ ನಮ್ಮ ಶಕ್ತಿಯನ್ನು ಪುನರುಜ್ಜೀವನಗೊಳಿಸಿ ನಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕಿದೆ. ಎಲ್ಲರೂ ಒಗ್ಗೂಡಿ ನವ ಮತ್ತು ಭಲಿಷ್ಠ ಭಾರತ ನಿರ್ಮಾಣ ಮಾಡಲು ಮುಂದಾಗಬೇಕು ಎಂದು ಕರೆ ನೀಡಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ