ಬೆಂಗಳೂರು: ಎಟಿಎಂನಲ್ಲಿದ್ದ 28 ಲಕ್ಷ ಹಣ ದರೋಡೆ ಪ್ರಕರಣ ಭೇದಿಸಿದ ಪೊಲೀಸರು, ಕುಖ್ಯಾತ 3 ಕಳ್ಳರ ಬಂಧನ

ಬ್ಯಾಂಕ್ ಎಟಿಎಂ ಮಷಿನ್ ಒಡೆದು ಹಣ ದೋಚಿದ್ದ ಮೂವರನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಕಳ್ಳರು
ಬಂಧಿತ ಕಳ್ಳರು
Updated on

ಬೆಂಗಳೂರು: ಬ್ಯಾಂಕ್ ಎಟಿಎಂ ಮಷಿನ್ ಒಡೆದು ಹಣ ದೋಚಿದ್ದ ಮೂವರನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಕೇರಳ ಮೂಲದ ಸಮರ್ ಜೋತ್ ಸಿಂಗ್(33), ಎವಿ ಜಾಫರ್(30), ಯಾಹ್ಯಾ(27) ಬಂಧಿತ ಆರೋಪಿಗಳು.

ಬಂಧಿತರಿಂದ 17,34,586  ನಗದು,  ಕಳ್ಳತನ ಹಣದಲ್ಲಿ ಖರೀದಿ ಮಾಡಿದ್ದ 1-ಸ್ಕೋಡಾ ಕಾರು, 1-ಹೊಂಡಾ ಆಕ್ಟೀವಾ ಬೈಕ್, 1-ಐ  ಫೋನ್, ಐಶಾರಾಮಿ ಬಟ್ಟೆಗಳು ಹಾಗೂ ಕೃತ್ಯಕ್ಕೆ ಉಪಯೋಗಿಸಿದ್ದ 1-ರಾಯಲ್ ಎನ್‍ಫೀಲ್ಡ್ ಮೋಟಾರ್ ಸೈಕಲ್, 1-ಹೊಂಡಾ ಆಕ್ಟೀವಾ ಬೈಕ್ ವನ್ನು ವಶಪಡಿಸಿಕೊಂಡಿದ್ದಾರೆ.

ಆಗಸ್ಟ್ 10ರ ಮಧ್ಯರಾತ್ರಿ ಜಾಲಹಳ್ಳಿ ಸಮೀಪ ಎಂಇಎಸ್ ರಸ್ತೆಯ ಕೆನರಾ ಬ್ಯಾಂಕ್ ನ ಎಟಿಎಂ ಮಿಷನ್ ಅನ್ನು ಗ್ಯಾಸ್ ಕಟ್ಟರ್ ನಿಂದ ಕತ್ತರಿಸಿ 27 ಲಕ್ಷ 82 ಸಾವಿರ ರುಪಾಯಿಯನ್ನು ಕಳ್ಳತನ ಮಾಡಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com