ವೈಕುಂಠ ಏಕಾದಶಿ: ಭಕ್ತರಿಗೆ ಕೋಟೆ ವೆಂಕಟರಮಣನ ದರ್ಶನ ಇಲ್ಲ

ಕೋವಿಡ್-19 ಸೋಂಕು ನಿಯಂತ್ರಣ ಉದ್ದೇಶದಿಂದ ಇದೇ 25 ರಂದು ವೈಕುಂಠ ಏಕಾದಶಿ ದಿನದಂದು ಬೆಂಗಳೂರು ನಗರ ಕೋಟೆ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಪ್ರವೇಶ ನಿಷೇಧಿಸಲಾಗಿದೆ.
ವೆಂಕಟರಮಣಸ್ವಾಮಿ ದೇವಸ್ಥಾನ
ವೆಂಕಟರಮಣಸ್ವಾಮಿ ದೇವಸ್ಥಾನ
Updated on: 

ಬೆಂಗಳೂರು: ಕೋವಿಡ್-19 ಸೋಂಕು ನಿಯಂತ್ರಣ ಉದ್ದೇಶದಿಂದ ಇದೇ 25 ರಂದು ವೈಕುಂಠ ಏಕಾದಶಿ ದಿನದಂದು ಬೆಂಗಳೂರು ನಗರ ಕೋಟೆ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಪ್ರವೇಶ ನಿಷೇಧಿಸಲಾಗಿದೆ.

ಭಕ್ತಾದಿಗಳಿಗೆ ದೇವರ ದರ್ಶನ ಹಾಗೂ ವೈಕುಂಠ ದ್ವಾರ ಪ್ರವೇಶ ಇರುವುದಿಲ್ಲ ಎಂದು ಹಿಂದೂ ಧಾರ್ಮಿಕ ಇಲಾಖೆಯ ಪ್ರಕಟಣೆ ತಿಳಿಸಿದೆ.

ಬೆಂಗಳೂರು ನಗರ ಜಿಲ್ಲಾಧಿಕಾರಿ ಅವರ ಆದೇಶದಂತೆ ಈ ತೀರ್ಮಾನ ಕೈಗೊಳ್ಳಲಾಗಿದೆ. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com