ಬೆಂಗಳೂರು: ಫೆಬ್ರವರಿ 15ಕ್ಕೆ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಉದ್ಘಾಟನೆ

ಹೆಚ್ಚು ವಿಳಂಬವಾಗುತ್ತಿರುವ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ (ಬೈಯಪ್ಪನಹಳ್ಳಿ ಮೂರನೇ ಕೋಚಿಂಗ್ ಟರ್ಮಿನಲ್) ಮುಂದಿನ ವರ್ಷದ ಫೆಬ್ರವರಿ 15 ರಂದು ಉದ್ಘಾಟನೆ ಮಾಡಲು ಬೆಂಗಳೂರು ರೈಲ್ವೆ ವಿಭಾಗವು ದಿನಾಂಕವನ್ನು ನಿಗದಿಪಡಿಸಿದೆ ಎಂದು ಹಿರಿಯ ವಿಭಾಗೀಯ ಕಾರ್ಯಾಚರಣೆ ವ್ಯವಸ್ಥಾಪಕರು ತಿಳಿಸಿದ್ದಾರೆ. 
ಮೆಟ್ರೋ ರೈಲು
ಮೆಟ್ರೋ ರೈಲು
Updated on

ಬೆಂಗಳೂರು: ಹೆಚ್ಚು ವಿಳಂಬವಾಗುತ್ತಿರುವ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ (ಬೈಯಪ್ಪನಹಳ್ಳಿ ಮೂರನೇ ಕೋಚಿಂಗ್ ಟರ್ಮಿನಲ್) ಮುಂದಿನ ವರ್ಷದ ಫೆಬ್ರವರಿ 15 ರಂದು ಉದ್ಘಾಟನೆ ಮಾಡಲು ಬೆಂಗಳೂರು ರೈಲ್ವೆ ವಿಭಾಗವು ದಿನಾಂಕವನ್ನು ನಿಗದಿಪಡಿಸಿದೆ ಎಂದು ಹಿರಿಯ ವಿಭಾಗೀಯ ಕಾರ್ಯಾಚರಣೆ ವ್ಯವಸ್ಥಾಪಕರು ತಿಳಿಸಿದ್ದಾರೆ. 

ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ನೈರುತ್ಯ ರೈಲ್ವೆ ವಲಯ ಆಹ್ವಾನಿಸಿದ್ದು, ಪ್ರಧಾನ ಮಂತ್ರಿ ಕಾರ್ಯಾಲಯದಿಂದ ಇನ್ನೂ ಖಚಿತ ಸಂದೇಶ ಸಿಕ್ಕಿಲ್ಲ. ವಿಶ್ವೇಶ್ವರಯ್ಯ ಟರ್ಮಿನಲ್ ಉದ್ಘಾಟನೆ ಮತ್ತು ಸಬ್ ಅರ್ಬನ್  ಬನ್ ರೈಲು ಯೋಜನೆಗೆ ಶಂಕುಸ್ಥಾಪನೆಗೆ ಆಗಮಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ವು ಆಹ್ವಾನಿಸಿ  ನೈರುತ್ಯ ರೈಲ್ವೆ ವಲಯ ಇತ್ತೀಚ್ಚಿಗೆ ರೈಲ್ವೆ ಸಚಿವಾಲಯದ ಮೂಲಕ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಸಂದೇಶವನ್ನು ಕಳುಹಿಸಿದೆ.

ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ 15, 657 ಕೋಟಿ ಮೊತ್ತದ ಸಬ್ ಅರ್ಬನ್ ಯೋಜನೆಯನ್ನು ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು. ಆದರೆ, ಇದು ಔಪಚಾರಿಕವಾಗಿ ಇನ್ನೂ ಉದ್ಘಾಟನೆ ನಡೆದಿಲ್ಲ. ಕೋವಿಡ್-19 ನಿರ್ಬಂಧದಿಂದಾಗಿ 192 ಕೋಟಿ ಮೊತ್ತದ ವಿಶ್ವೇಶ್ವರಯ್ಯ ಟರ್ಮಿನಲ್ ಯೋಜನೆಯಲ್ಲಿ ಹೆಚ್ಚಿನ ವಿಳಂಬವಾಯಿತು.

 ಮೂರು ಪ್ಲಾಟ್‌ಫಾರ್ಮ್‌ಗಳು, ನಿಲ್ದಾಣದ ಕಟ್ಟಡ, ಟಿಕೆಟಿಂಗ್ ಪ್ರದೇಶ ಮತ್ತು ಇತರ ಪ್ರಯಾಣಿಕರ ಸೌಲಭ್ಯಗಳೊಂದಿಗೆ ಟರ್ಮಿನಲ್  ಪ್ರಾರಂಭಿಸಲು ಸಿದ್ಧಪಡಿಸಲಾಗಿದೆ  ಎಂದು ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಈ ಎರಡು ಯೋಜನೆಗಳಿಗೆ ಚಾಲನೆ ನೀಡುವ ಭರವಸೆಯಿದೆ. ನಂತರ ರೈಲ್ವೆ ಸಚಿವರು ಇದನ್ನು ನೆರವೇರಿಸಲಿದ್ದಾರೆ ಎಂದು ಮತ್ತೋರ್ವ ಅಧಿಕಾರಿ ತಿಳಿಸಿದ್ದಾರೆ. 

ಈ ಮಧ್ಯೆ ಕೆಂಪೇಗೌಡ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಹಾಲ್ಟ್ ಸ್ಟೆಷನ್ ಸಿದ್ಧವಾಗಿದ್ದೂ ಉದ್ಘಾಟನೆಯಾಗಬೇಕಿದೆ. ಕಳೆದ ವಾರವೇ ಇದು ಉದ್ಘಾಟನೆಯಾಗಬೇಕಿತ್ತು. ಗ್ರಾಮ ಪಂಚಾಯಿತಿ ಚುನಾವಣೆಯ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಇದನ್ನು ಮುಂದೂಡಲಾಗಿದೆ. ಡಿಸೆಂಬರ್ 30 ನಂತರ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದು ವಿಭಾಗೀಯ ರೈಲ್ವೆ ಮ್ಯಾನೇಜರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com