

ಬೆಂಗಳೂರು: ಒಂದು ವಿಶೇಷ ಘಟನೆಯಲ್ಲಿ ಐದು ತಿಂಗಳ ಮಗು ಕಿಯಾನ್ ಮೇಧಿ ಕುಮಾರ್ ಬೆಂಗಳೂರಿನ ಪ್ರಮುಖ ಉದ್ಯಾನ ಕಬ್ಬನ್ ಪಾರ್ಕ್ ಒಳಗೆ ವಾಹನ ಸಂಚಾರ ನಿಷೇಧಿಸುವಂತೆ ಕರ್ನಾಟಕ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾನೆ. ನ್ಯಾಯಾಧೀಶರು ಮಗುವಿನ ಅರ್ಜಿಯನ್ನು ಕಂಡು ಅಚ್ಚರಿಪಟ್ಟಿದ್ದಾರೆ. ಸಂಚಾರ ಮುಕ್ತ ಕಬ್ಬನ್ ಉದ್ಯಾನವನಕ್ಕಾಗಿ ಪ್ರಚಾರ ಮಾಡುತ್ತಿರುವ ಎಲ್ಲರಿಗೆ ಈ ಅರ್ಜಿ ಸ್ಪೂರ್ತಿ ನೀಡಿದೆ ಎಂದು ಹೇಳಲಾಗಿದೆ.
ಅರ್ಜಿದಾರ ಕಿಯಾನ್ ನನ್ನು ಅವನ ತಂದೆ ಮಾನವ ಸಂಪನ್ಮೂಲ ಕ್ಶ್ಜೇತ್ರದಲ್ಲಿ ವೃತ್ತಿಪರರಾಗಿರುವ ರಾಕೇಶ್ ಪ್ರಬಲ್ ಕುಮಾರ್, ಪ್ರತಿನಿಧಿಸಿದ್ದಾರೆ. ಕುಮಾರ್ ಕೊನ್ನಾಟ್ ರಸ್ತೆಯ ನಿವಾಸಿಯಾಗಿದ್ದು , ಪ್ರತಿದಿನ ಕಬ್ಬನ್ ಪಾರ್ಕ್‌ಗೆ ಭೇಟಿ ನೀಡುತ್ತಾರೆ. ಅಲ್ಲದೆ ವಾರಕ್ಕೊಮ್ಮೆ ಕಿಯಾನ್ ನನ್ನು ಸಹ ಕರೆದುತರುತ್ತಾರೆ. ನ್ಯಾಯಾಧೀಶರು ಅರ್ಜಿದಾರ ಕಿಯಾನ್ ಬಗ್ಗೆ ಸಂತಸಗೊಂಡು ಕಿಯಾನ್ ಕಬ್ಬನ್ ಪಾರ್ಕ್‌ಗೆ ಭೇಟಿ ನೀಡಿದ್ದಾನೆಯೆ ಎಂದು ಸಹ ಆಶ್ಚರ್ಯಪಟ್ಟರು. ಅವರು ಪ್ರತಿ ವಾರ ಕಿಯಾನ್ ಕಬ್ಬನ್ ಪಾರ್ಕ್ ಗೆ ಭೇಟಿನೀಡುತ್ತಾನೆ ಎಂದು ತಿಳಿದಾಗ ನ್ಯಾಯಾಧೀಶರು ಸಂತಸಪಟ್ಟಿದ್ದಾರೆ ಎಂದು ರಾಕೇಶ್ ಪತ್ರಿಕೆಗೆ ಹೇಳಿದ್ದಾರೆ.
"ಕಿಯಾನ್ ಭವಿಷ್ಯದ ಪೀಳಿಗೆಯನ್ನು, ಯಾರುಗಾಗಿ ನಾವು ಉದ್ಯಾನವನ್ನು ಉಳಿಸಬೇಕಿದೆಯೋ ಅವರನ್ನು ಅರ್ಜಿದಾರನಾಗಿ ಪ್ರತಿನಿಧಿಸುತ್ತಾನೆ,ಬೆಂಗಳೂರಿನ ಮಾಲಿನ್ಯ ಮಟ್ಟವು ಹೆಚ್ಚುತ್ತಿದೆ, ಮತ್ತು ಉದ್ಯಾನವನವು ಅವನೂ ಸೇರಿ ಎಲ್ಲಾ ಮಕಳಿಗಾಗಿ ಇದೆ. ಅವನಿಗೆ ಉದ್ಯಾನಕ್ಕೆ ಭೇಟಿ ನೀಡಲು ಇಷ್ಟವಿದೆ. ಅದನ್ನು ಅವನಿಗಾಗಿ ಉಳಿಸಬೇಕಾಗಿದೆ, ”ಎಂದು ಅವರು ಹೇಳಿದರು.
ಇದೇ ರೀತಿಯ ಘಟನೆಯಲ್ಲಿ, ಹಿಂದೆ ಕೆಲ ಮಕ್ಕಳು 2015 ರಲ್ಲಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅಲ್ಲಿ ಅವರು ತಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವ ಪಟಕಿಗಳನ್ನು ನಿಷೇಧಿಸುವಂತೆ ಕೋರ್ಟ್ ಗೆ ಒತ್ತಾಯಿಸಿದ್ದರು,
ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಶನ್‌ನ ಸದಸ್ಯರು ಹೇಳಿದಂತೆ “ಕಳೆದ ಒಂದೆರಡು ವರ್ಷಗಳಲ್ಲಿ ಅನೇಕ ಅಭಿಯಾನಗಳು ನಡೆದಿವೆ, ಕಬ್ಬನ್ ಪಾರ್ಕ್ ಒಳಗೆ ವಾಹನಗಳ ಪ್ರವೇಶವನ್ನು ನಿಲ್ಲಿಸುವಂತೆ ಸರ್ಕಾರವನ್ನು ಕೋರಿದೆ. ಈ ಯುವ ಅರ್ಜಿದಾರ ನಗರದ ಹಸಿರನ್ನು ಉಳಿಸುವ ಭರವಸೆಯ ಕಿರಣ ಮಾತ್ರ. ಮಕ್ಕಳನ್ನು ಬೆಳೆಸುವಲ್ಲಿ ಉದ್ಯಾನವನವು ಹೇಗೆ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ತೋರಿಸಲು ಇದು ತುಂಬಾ ಮುಖ್ಯವಾಗಿದೆ. ನಾವು ಮಕ್ಕಳಾಗಿದ್ದಾಗ ನಾವು ಈ ಕಬನ್ ಪಾರ್ಕ್ ನೊಂದಿಗೆ ಹ್ಪ್ಂದಿದ್ದ ಸಂಬಂಧವನ್ನು ಇದು ನಮಗೆ ತಿಳಿಯಪಡಿಸುತ್ತದೆ. ಬೆಂಗಳೂರಿನ ನಟ್ಟ ನಡುವೆ ಇರುವ ಕಬ್ಬನ್ ಪಾರ್ಕ್ ಹಸಿರಾಗಿರುವುದು ನಗರಕ್ಕೆ ನಿರ್ಣಾಯಕವಾಗಿದೆ. ”
ಕಿಯಾನ್ ತಂದೆ ದೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿದ್ದು ಉದ್ಯಾನವನದಲ್ಲಿ ವಾಹನ ಸಂಚಾರವನ್ನು ನಿಷೇಧಿಸಲು ನಿರ್ದೇಶನಗಳನ್ನು ಕೋದ್ದಾರೆ. ಇದು ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದರು. ಈ ಅರ್ಜಿಯನ್ನು ನವೆಂಬರ್ 9 ರಂದು ಸಲ್ಲಿಸಿದ್ದು ಡಿಸೆಂಬರ್ 23 ರಂದು ವಿಚಾರಣೆಗೆ ಬಂದಿದೆ. ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಬಿ.ವಿ. ನಾಗರಾತ್ನ ಮತ್ತು ನ್ಯಾಯಮೂರ್ತಿ ನಟರಾಜ್ ರಂಗಸ್ವಾಮಿ ಅವರ ವಿಭಾಗೀಯ ಪೀಠವು ತೋಟಗಾರಿಕೆ ಇಲಾಖೆಯ ಕಾರ್ಯದರ್ಶಿ, ಹೆಚ್ಚುವರಿ ಪೊಲೀಸ್ ಆಯುಕ್ತರಿಗೆ (ಸಂಚಾರ) ನೋಟಿಸ್ ನೀಡಿತು. ,
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ನಗರ ಭೂ ಸಾರಿಗೆ ಇಲಾಖೆಯ ನಿರ್ದೇಶನಾಲಯ ಲಾಕ್ ಆಗಿರುವ ಕಾರಣ ಕಬ್ಬನ್ ಪಾರ್ಕ್ ಅನ್ನು ಮಾರ್ಚ್ 25 ರಿಂದ ಮೇ 20 ರವರೆಗೆ ಮುಚ್ಚಲಾಯಿತು. ಅದರ ನಂತರ, ನಿಗದಿತ ಸಮಯದಲ್ಲಿ ವಾಕರ್ಸ್,ಜಾಗರ್ಸ್ ಹಾಗೂ ಸೈಕ್ಲಿಸ್ಟ್‌ಗಳಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.