ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ರೂ.619 ಕೋಟಿ ಸಿಸಿಟಿವಿ ಟೆಂಡರ್ ವಿವಾದ: ನಿಂಬಾಳ್ಕರ್-ರೂಪಾ ಜಟಾಪಟಿ

ಬೆಂಗಳೂರಿನ ಸುರಕ್ಷತೆ ಸಲುವಾಗಿ ಸಿಸಿಟಿವಿ ಅಳವಡಿಸುವ ರೂ.619 ಕೋಟಿ ಮೊತ್ತದ ಗುತ್ತಿಗೆ ವಿಚಾರದಲ್ಲಿ ಒಂದು ಕಂಪನಿಯ ಪರವಾಗಿ ಆ ಯೋಜನೆಯ ಟೆಂಡರ್ ವಿಚಾರವಾದಿ ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಹಾಗೂ ಗೃಹ ಇಲಾಖೆ ಕಾರ್ಯದರ್ಶಿ ಡಿ.ರೂಪಾ ಮಧ್ಯೆ ಜಟಾಪಟಿ ಶುರುವಾಗಿದೆ. 

ಬೆಂಗಳೂರು: ಬೆಂಗಳೂರಿನ ಸುರಕ್ಷತೆ ಸಲುವಾಗಿ ಸಿಸಿಟಿವಿ ಅಳವಡಿಸುವ ರೂ.619 ಕೋಟಿ ಮೊತ್ತದ ಗುತ್ತಿಗೆ ವಿಚಾರದಲ್ಲಿ ಒಂದು ಕಂಪನಿಯ ಪರವಾಗಿ ಆ ಯೋಜನೆಯ ಟೆಂಡರ್ ವಿಚಾರವಾದಿ ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಹಾಗೂ ಗೃಹ ಇಲಾಖೆ ಕಾರ್ಯದರ್ಶಿ ಡಿ.ರೂಪಾ ಮಧ್ಯೆ ಜಟಾಪಟಿ ಶುರುವಾಗಿದೆ. 

‘ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಟೆಂಡರ್ ಪ್ರಕ್ರಿಯೆಯಲ್ಲಿ ಡಿ. ರೂಪಾ  ಹಸ್ತಕ್ಷೇಪ ಮಾಡುತ್ತಿದ್ದಾರೆ’ ಎಂದು ಆರೋಪಿಸಿ ಹೇಮಂತ್‌ ನಿಂಬಾಳ್ಕರ್, ಮುಖ್ಯ ಕಾರ್ಯದರ್ಶಿ ಅವರಿಗೆ ಡಿ. 7ರಂದು ಪತ್ರ ಬರೆದಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಡಿ. ರೂಪಾ ಅವರು, ‘ಸರ್ಕಾರದ ಹಣ ಉಳಿಸಲು ಯತ್ನಿಸಿದ್ದಕ್ಕೆ ದುಷ್ಟರ ಕೂಟ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದೆ. ಜನರ ಹಿತಾಸಕ್ತಿ ಹಾಗೂ ಅವರಿಗಾಗಿ ನಾನು ಕೆಲಸ ಮಾಡುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಯೋಜನೆ ಸಂಬಂಧ ಈ ಅಂಡ್ ವೈ ಕಂಪನಿಗೆ ದಾಖಲೆಗಳ ಸಿದ್ಧಪಡಿಸಲು ಎರಡನೇ ಬಾರಿಗೆ ಗುತ್ತಿಗೆ ನೀಡಲಾಯಿತು. ನಾನು ಗೃಹ ಕಾರ್ಯದರ್ಶಿ ಆಗಿರುವ ಕಾರಣ ಆ ಗುತ್ತಿಗೆ ಸಂಬಂಧಿಸಿದ ಕಡತ ನನ್ನ ಪರಿಶೀಲನೆಗೆ ಬಂದಿತು. ನಾನು ಯಾರ ಮೇಲೂ ಒತ್ತಡ ತಂಡು ಕಡತ ತರಿಸಿಕೊಂಡಿಲ್ಲ. 

ಆಗ ನಾನು ಆ ಕಂಪನಿ ಅಧಿಕಾರಿಗೆ ಕರೆ ಮಾಡಿ ವಿವರ ಕೇಳಿದ್ದು ನಿಜ. ಇಲ್ಲಿ ಚರ್ಚೆ ಆಗಬೇಕಿರುವುದು ಯಾಕೆ ಮೊದಲ ಬಾರಿಗೆ ಟೆಂಡರ್ ರದ್ದುಪಡಿಸಲಾಯಿತು. ಮತ್ತು ಆ ಟೆಂಡರ್ ಕಮಿಟಿ ಅಧ್ಯಕ್ಷರಾದ ನಿಂಬಾಳ್ಕರ್ ಯಾಕೆ ನ್ಯಾಯ ಸಮ್ಮತವಲ್ಲದ ಕೆಲಸ ಮಾಡಿದ್ದಾರೆನ್ನುವುದು. ಕೂಡಲೇ ನಿಂಬಾಳ್ಕರ್ ನ್ನು ಆ ಹುದ್ದೆಯಿಂದ ತೆಗೆದು ಹಾಕಬೇಕು. ಸರ್ಕಾರದ ಹಣ ಉಳಿಸಲೆತ್ನಿಸಿದ್ದಕ್ಕೆ ನನ್ನ ವಿರುದ್ಧ ಆ ದುಷ್ಟಕೂಟ ಅಪಪ್ರಚಾರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ತಮ್ಮ  ವಿರುದ್ಧ ಕೇಳಿ ಬಂದಿರುವ ಆರೋಪ ಹಾಗೂ ಸಮಜಾಯಿಶಿ ನೀಡುವುದರ ಜೊತೆಗೆ, ನಿಂಬಾಳ್ಕರ್ ಯಾವ ಕಾರಣಕ್ಕೆ ತಮ್ಮ ಮೇಲ್ ಕ್ಷುಲ್ಲಕ ಆರೋಪ ಮಾಡಿದ್ದಾರೆಂಬುದನ್ನು ವಿವರಿಸಿ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದಾರೆ. 

ಪತ್ರದಲ್ಲಿ ನಿಂಬಾಳ್ಕರ್ ವಿರುದ್ಧ ರೂಪಾ ಅವರು ಗಂಭೀರ ಆರೋಪಗಳನ್ನು ಮಾಡಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. 

ಈ ಸಂಬಂಧ ಗೃಹ ಕಾರ್ಯದರ್ಶಿ ಡಿ.ರೂಪಾ ಅವರು. ಖಾಸಗಿ ಕಂಪನಿಯಿಂದ ಟೆಂಡರ್ ಮಾಹಿತಿ ಕೋರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. 

ನಗರ ಪೊಲೀಸ್ ಆಯುಕ್ತರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಲಾಗಿದ್ದು, ಕೂಲಂಕಷ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ನೀಡುವಂತೆ ಸೂಚಿಸಲಾಗಿದೆ. 

ಐಪಿಎಸ್ ಅಧಿಕಾರಿಯೂ ಆಗಿರುವ ರೂಪಾ ವಿರುದ್ಧ ಟೆಂಡರ್ ಪ್ರಾಧಿಕಾರಿಯೂ ಆಗಿರುವ ಬೆಂಗಳೂರು ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ತನಿಖೆಗೆ ಮುಂದಾಗಿದೆ. 

Related Stories

No stories found.

Advertisement

X
Kannada Prabha
www.kannadaprabha.com