ಬೆಂಗಳೂರು: ಹಣಕಾಸಿನ ವಿವಾದದಿಂದ 24 ವರ್ಷದ ಯುವಕನ ಹತ್ಯೆ, ರೂಂಮೇಟ್ ಬಂಧನ

ಹಣಕಾಸಿನ ವಿವಾದದ ಕಾರಣದಿಂದಾಗಿ 24 ವರ್ಷದ ಯುವಕನೊಬ್ಬನನ್ನು ಆತನ ರೂಮೇಟ್ ಹತ್ಯೆ ಮಾಡಿರುವ ಘಟನೆ ವಿಜಯನಗರದಲ್ಲಿ ಸೋಮವಾರ ರಾತ್ರಿ ನಡೆದಿದೆ. ಆರೋಪಿಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಹಣಕಾಸಿನ ವಿವಾದದ ಕಾರಣದಿಂದಾಗಿ 24 ವರ್ಷದ ಯುವಕನೊಬ್ಬನನ್ನು ಆತನ ರೂಮೇಟ್ ಹತ್ಯೆ ಮಾಡಿರುವ ಘಟನೆ ವಿಜಯನಗರದಲ್ಲಿ ಸೋಮವಾರ ರಾತ್ರಿ ನಡೆದಿದೆ. ಆರೋಪಿಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

24 ವರ್ಷದ ಇರ್ಪಾನ್ ಮೃತಪಟ್ಟ ಯುವಕನಾಗಿದ್ದಾನೆ. ಇರ್ಪಾನ್ ಮತ್ತು ಆತನ ರೂಮೇಟ್ ನವೀನ್ ನಡುವೆ ಹಣಕಾಸಿನ ವಿವಾದಕ್ಕೆ ಸಂಬಂಧಿಸಿದಂತೆ ಜಗಳ ನಡೆದಿದೆ. ಇದು ವಿಕೋಪಕ್ಕೆ ತಿರುಗಿ ನವೀನ್,  ಇರ್ಪಾನ್ ನನ್ನು ಹತ್ಯೆ ಮಾಡಿರುವುದಾಗಿ  ಪಶ್ಚಿಮ ವಲಯ ಡಿಸಿಪಿ ಸಂಜೀವ್ ಎಂ. ಪಾಟೀಲ್ ತಿಳಿಸಿದ್ದಾರೆ.

ಆರೋಪಿ ನವೀನ್ ನನ್ನು ಕಳೆದ ಮಧ್ಯರಾತ್ರಿ ಬಂಧಿಸಲಾಗಿದೆ. ಮಾರಾಟ ಮಾಡಲಾದ ಮೊಬೈಲ್  ಫೋನಿನ ಹಣದ ವಿಚಾರಕ್ಕೆ ಸಂಬಂಧಿಸಿದಂತೆ  ಇಬ್ಬರ ನಡುವೆ ವಿವಾದ ಉಂಟಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com