ಅಪಾರ್ಟ್'ಮೆಂಟ್'ಗಳನ್ನು ಸೀಲ್ಡೌನ್ ಮಾಡುವುದಿಲ್ಲ: ಬಿಬಿಎಂಪಿ ಸ್ಪಷ್ಟನೆ

ಬೊಮ್ಮನಹಳ್ಲಿ ಅಪಾರ್ಟ್'ಮೆಂಟ್ ಕಾಂಪ್ಲೆಕ್ಸ್ ವೊಂದನ್ನು ಸೀಲ್ಡೌನ್ ಮಾಡಿದ ಹಿನ್ನೆಲೆಯಲ್ಲಿ ಸುತ್ತಮುತ್ತಲಿರುವ ಇತರೆ ಅಪಾರ್ಟ್'ಮೆಂಟ್ ಗಳ ನಿವಾಸಿಗಳು ಆತಂಕಕ್ಕೊಳಗಾಗಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಿಬಿಎಂಪಿ ಅಪಾರ್ಟ್'ಮೆಂಟ್ ಗಳನ್ನು ಸೀಲ್ಡೌನ್ ಮಾಡುವುದಿಲ್ಲ ಎಂದು ಹೇಳಿದೆ. 
ಸೀಲ್ಡೌನ್ ಮಾಡಿರುವ ಅಪಾರ್ಟ್'ಮೆಂಟ್ ಬಳಿ ಇರುವ ಆಶಾ ಕಾರ್ಯಕರ್ತೆಯರು
ಸೀಲ್ಡೌನ್ ಮಾಡಿರುವ ಅಪಾರ್ಟ್'ಮೆಂಟ್ ಬಳಿ ಇರುವ ಆಶಾ ಕಾರ್ಯಕರ್ತೆಯರು

ಬೆಂಗಳೂರು; ಬೊಮ್ಮನಹಳ್ಲಿ ಅಪಾರ್ಟ್'ಮೆಂಟ್ ಕಾಂಪ್ಲೆಕ್ಸ್ ವೊಂದನ್ನು ಸೀಲ್ಡೌನ್ ಮಾಡಿದ ಹಿನ್ನೆಲೆಯಲ್ಲಿ ಸುತ್ತಮುತ್ತಲಿರುವ ಇತರೆ ಅಪಾರ್ಟ್'ಮೆಂಟ್ ಗಳ ನಿವಾಸಿಗಳು ಆತಂಕಕ್ಕೊಳಗಾಗಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಿಬಿಎಂಪಿ ಅಪಾರ್ಟ್'ಮೆಂಟ್ ಗಳನ್ನು ಸೀಲ್ಡೌನ್ ಮಾಡುವುದಿಲ್ಲ ಎಂದು ಹೇಳಿದೆ. 

ಈ ಕುರಿತು ಮಾಹಿತಿ ನೀಡಿರುವ ಬಿಬಿಎಂಪಿ ವಿಶೇಷ ಆಯುಕ್ತ ರಾಜೇಂದ್ರ ಚೋಳನ್ ಅವರು, ಬ್ರಿಟನ್ ನಿಂದ ಬಂದಿದ್ದವರಿಗೆ ಕೊರೋನಾ ಪಾಸಿಟಿವ್ ಬಂದಿದ್ದ ಹಿನ್ನೆಲೆಯಲ್ಲಿ ಸಂಪರ್ಕದಲ್ಲಿದ್ದ 33 ಮಂದಿ ಮನವಿ ಮಾಡಿಕೊಂಡಿದ್ದರು. ಹೀಗಾಗಿ ಅಪಾರ್ಟ್'ಮೆಂಟ್'ನ್ನು ಸೀಲ್ಡೌನ್ ಮಾಡಲಾಗಿತ್ತು. ಇದರಂತೆ ಇನ್ನುಳಿದ ಯಾವುದೇ ಅಪಾರ್ಟ್'ಮೆಂಟ್'ಗಳನ್ನು ಸೀಲ್ಡೌನ್ ಮಾಡುವುದಿಲ್ಲ ಎಂದು ಹೇಳಿದ್ದಾರೆ. 

ಜನರು ಭೀತಿಗೊಳಗಾಗಬಾರದು. ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದ 33 ಮಂದಿಯನ್ನು ಸಾಂಸ್ಥಿಕ ಕ್ವಾರಂಟೌನ್ಗೊಳಪಡಿಸಲು ನಿರ್ಧರಿಸಿತ್ತು. ಆದರೆ, ಸಾಕಷ್ಟು ಜನರಿದ್ದರಿಂದ ಹಾಗೂ ಅವರಲ್ಲಿ ಬಹುತೇಕ ಜನರು ಹೋಟೆಲ್ ಗಳಲ್ಲಿ ಕ್ವಾರಂಟೈನ್'ಗೊಳಗಾಗಲು ನಿರಾಕರಿಸಿದ್ದರು. ನಮಗೆ ಬೇರೆ ದಾರಿ ಇಲ್ಲದೆ ಅಪಾರ್ಟ್'ಮೆಂಟ್'ಗಳನ್ನು ಸೀಲ್ಡೌನ್ ಮಾಡಬೇಕಾಯಿತು. ಇತರೆ ಯಾರಿಗೆ ಕೊರೋನಾ ಪಾಸಿಟಿವ್ ಬಂದರೂ ಕೂಡ ಅಪಾರ್ಟ್'ಮೆಂಟ್'ಗಳನ್ನು ಸೀಲ್ಡೌನ್ ಮಾಡುವುದಿಲ್ಲ. ಸೋಂಕಿತರನ್ನೇ ಸಾಂಸ್ಥಿಕ ಕ್ವಾರೈಂಟೈನ್'ಗೊಳಪಡಿಸಲಾಗುತ್ತದೆ ಹಾಗೂ ಇದನ್ನು ಕಡ್ಡಾಯ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. 

ಈಗಾಗಲೇ ಎಲ್ಲಾ ವಿಭಾಗದಲ್ಲೂ ಮತ್ತೆ ಹೋಟೆಲ್ ಹಾಗೂ ಇತರೆ ಪ್ರದೇಶಗಳಲ್ಲಿ ಕೊರೋನಾ ಆರೈಕೆ ಕೇಂದ್ರಗಳನ್ನು ಆರಂಭಿಸಲು ಬಿಬಿಎಂಪಿ ಕಾರ್ಯ ಆರಂಭಿಸಿದೆ. ಸೀಲ್ಡೌನ್ ಮಾಡಿರುವ ಅಪಾರ್ಟ್'ಮೆಂಟ್ ಬಳಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು, ಅಲ್ಲಿನ ಚಲನವಲನಗಳ ಮೇಲೆ ತಂಡವೊಂದು ಗಮನ ಇಡಲಿದೆ ಎಂದಿದ್ದಾರೆ. 

ಕೊರೋನಾ ಪಾಸಿಟಿವ್ ಬಂದವರ ಮನೆಗಳ ಬಳಿ ಪೋಸ್ಟರ್ ಹಾಗೂ ಬ್ಯಾರಿಕೇಡ್ ಹಾಕುವಂತಹ ಹಿಂದಿನ ನಿರ್ಧಾರಗಳನ್ನು ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com