

ಬೆಂಗಳೂರು: ಮದ್ಯಪಾನ ಮಾಡಿ ನಿರಂತರ ಮನೆಮಂದಿಗೆ ಹಲ್ಲೆ ನಡೆಸುತ್ತಿದ್ದ ವ್ಯಕ್ತಿಯನ್ನು ಆತನ ಪುತ್ರನೇ ಕೊಲೆ ಮಾಡಿರುವ ದಾರುಣ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸೋಲದೇವನಹಳ್ಳಿ ಅಚಾರ್ಯ ಕಾಲೇಜು ರಸ್ತೆಯ ಗುಟ್ಟೆ ಬಸವೇಶ್ವರ ನಗರದ ದೊಡ್ಡ ಚೌಡಪ್ಪ (50) ಕೊಲೆಯಾದವರು. ಆರೋಪಿ ಪುತ್ರ ಗಹನ್ (19) ಎಂಬಾತನನ್ನು ಬಂಧಿಸಲಾಗಿದೆ.
ಸಿಂಡಿಕೇಟ್ ಬ್ಯಾಂಕಿನಲ್ಲಿ ಜವಾನನಾಗಿದ್ದ ದೊಡ್ಡಚೌಡಪ್ಪ, ಗುಟ್ಟೆಬಸವೇಶ್ವರ ನಗರದಲ್ಲಿ ಮನೆ ಮಾಡಿಕೊಂಡಿದ್ದು ಪತ್ನಿ ಇಬ್ಬರು ಮಕ್ಕಳ ಜೊತೆ ವಾಸಿಸುತ್ತಿದ್ದರು. ಕುಡಿತದ ಚಟ ಅಂಟಿಸಿಕೊಂಡಿದ್ದ ದೊಡ್ಡಚೌಡಪ್ಪ, ಪ್ರತಿ ದಿನ ಕುಡಿದು ಬಂದು ಮನೆಯಲ್ಲಿ ಎಲ್ಲರಿಗೂ ಯದ್ವಾತದ್ವ ಹೊಡೆಯುತ್ತಿದ್ದ. ಪತ್ನಿ ತಿಪ್ಪಮ್ಮ, ಮಕ್ಕಳಾದ ರಂಜನ್ ಹಾಗೂ ಗಹನ್ ಜತೆ ಜಗಳ ಮಾಡುತ್ತಿದ್ದ ಎನ್ನಲಾಗಿದೆ.