ಎರಡನೇ ಹಂತದ ಮೆಟ್ರೋ ರೈಲು ಯೋಜನೆ 2021 ಅಕ್ಟೋಬರ್ ವೇಳೆಗೆ ಪೂರ್ಣ: ಸಿಎಂ ಯಡಿಯೂರಪ್ಪ

ಎರಡನೇ ಹಂತದ ಮೆಟ್ರೋ ರೈಲು ಯೋಜನೆ 2021 ಅಕ್ಟೋಬರ್ ವೇಳೆಗೆ ಪೂರ್ಣವಾಗಲಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಸಿಎಂ ಬಿಎಸ್ ಯಡಿಯೂರಪ್ಪ
ಸಿಎಂ ಬಿಎಸ್ ಯಡಿಯೂರಪ್ಪ
Updated on

ಬೆಂಗಳೂರು: ಎರಡನೇ ಹಂತದ ಮೆಟ್ರೋ ರೈಲು ಯೋಜನೆ 2021 ಅಕ್ಟೋಬರ್ ವೇಳೆಗೆ ಪೂರ್ಣವಾಗಲಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಘನತ್ಯಾಜ್ಯ ವಿಭಾಗ, ಆರೋಗ್ಯ ಇಲಾಖೆ ಹಾಗೂ ಐ-ಟಿ ಇಲಾಖೆಗಳ “ಸಹಾಯ 2.0 ಅಪ್ಲಿಕೇಶನ್, ನಮ್ಮ ಬೆಂಗಳೂರು ಅಪ್ಲಿಕೇಶನ್, ಪಿ.ಒ.ಎಸ್ ದಂಡ ವಿಧಿಸುವ ಯಂತ್ರ, ಆಂಬುಲನ್ಸ್ ವಾಹನ ಹಾಗೂ ಯಾಂತ್ರಿಕ ಕಸ ಗುಡಿಸುವ ವಾಹನ” ಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು. ವಿಧಾನಸೌಧ ಆವರಣದಲ್ಲಿಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಖರೀದಿಸಿರುವ ಆರು ಆಂಬುಲೆನ್ಸ್ ವಾಹನಗಳು ಹಾಗೂ ಹದಿನೈದು ಕಸ ಗುಡಿಸುವ ಯಂತ್ರಗಳನ್ನುಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಬಳಿಕ ಮಾತನಾಡಿದ ಅವರು, ಮೆಟ್ರೋ ಕಾಮಗಾರಿಯ ಎರಡನೇ ಹಂತವನ್ನು 2021ರ ಅಕ್ಟೋಬರ್ ಅಥವಾ ಡಿಸೆಂಬರ್ ಒಳಗೆ ಪೂರ್ಣಗೊಳಿಸಲಾಗುವುದು. ಕೇಂದ್ರ ಸರ್ಕಾರ ನಗರಕ್ಕೆ ಸಬ್ ಅರ್ಬನ್ ರೈಲು ಮಂಜೂರು ಮಾಡಿದ್ದು ಇದರ ಅನುಷ್ಠಾನದಿಂದ ವಾಹನ ದಟ್ಟಣೆ ಸಮಸ್ಯೆ ನಿವಾರಣೆಯಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದರು. ಕೇಂದ್ರ ಸರ್ಕಾರ ಮಂಜೂರು ಮಾಡಿರುವ ಸಬ್ ಅರ್ಬನ್ ರೈಲು ಯೋಜನೆಯನ್ನು ಮುಂದಿನ ಮೂರು ವರ್ಷಗಳೊಳಗೆ ಪೂರ್ಣಗೊಳಿಸಲಾಗುವುದು. ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಮೆಟ್ರೋ ರೈಲು ಯೋಜನೆಯನ್ನು ಶೀಘ್ರ ಅನುಷ್ಠಾನಕ್ಕೆ ತರಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ಸಲುವಾಗಿ ಅಗತ್ಯ ಉಪಕರಣಗಳಿರುವ ಆರು ಅಂಬ್ಯುಲೆನ್ಸ್ ಗಳನ್ನು ಮೀಸಲಿರಿಸಲಾಗಿದೆ. ಪೌರ ಕಾರ್ಮಿಕರ ಹಿತದೃಷ್ಠಿಯಿಂದ ಕಸ ಗುಡಿಸುವ ಯಂತ್ರಗಳ ಬಳಕೆಗೆ ಮಹಾನಗರ ಪಾಲಿಕೆ ಮುಂದಾಗಿದೆ. ಎಲ್ಲೆಂದರಲ್ಲಿ ಕಸ ಬಿಸಾಡುವ ಸಾರ್ವಜನಿಕರ ವಿರುದ್ಧ ಕ್ರಮ ಕೈಗೊಂಡು ದಂಡ ವಿಧಿಸುವ ಸಲುವಾಗಿ ಕಮಾಂಡರ್ ಪಡೆ ರೂಪಿಸಲಾಗಿದೆ ಎಂದರು. ಸಮಾರಂಭದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್ ನೂತನವಾಗಿ ಅನಾವರಣಗೊಂಡ ತಂತ್ರಾಂಶಗಳ ಮೂಲಕ ಸಾರ್ವಜನಿಕರು ವಿಭಿನ್ನ ಇಲಾಖೆಗಳಿಗೆ ಸಂಬಧಿಸಿದ ದೂರುಗಳನ್ನು ಒಂದೇ ತಂತ್ರಾಂಶದಲ್ಲಿ ದಾಖಲಿಸಿ ಶೀಘ್ರ ಪರಿಹಾರ ಪಡೆಯಬಹುದು.

ಛಾಯಾಚಿತ್ರಗಳ ಸಮೇತ ದೂರು ದಾಖಲಿಸುವ ವಿನೂತನ ವ್ಯವಸ್ಥೆ ತಂತ್ರಾಂಶಗಳ್ಲಿದ್ದು ಬಿ.ಬಿ.ಎಂ.ಪಿ ಪ್ರಯತ್ನ ಶ್ಲಾಘನೀಯ ಎಂದರು. ಏನಿದು ಸಹಾತ 2.9 ಸಹಾಯ 2.0 ಅಪ್ಲಿಕೇಶನ್ ಇದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಬೆಂಗಳೂರು ನಗರದ ನಾಗರೀಕರು ತಮ್ಮ ಕುಂದು ಕೊರತೆಗಳನ್ನು ದಾಖಲಿಸಲು ಹಾಗೂ ಪರಿಹರಿಸಲು ಸಹಾಯ ಎನ್ನುವ ತಂತ್ರಾಂಶವನ್ನು ಉಪಯೋಗಿಸಲಾಗುತ್ತಿತ್ತು. ಸದರಿ ತಂತ್ರಾಂಶವು ಸಂಪೂರ್ಣವಾದಂತಹ ಸ್ವಯಂಚಾಲಿತ ಪದ್ದತಿಯಲ್ಲಿ ಇಲ್ಲವಾದುದರಿಂದ ಈ ನ್ಯೂನತೆಗಳನ್ನು ಸರಿಪಡಿಸಿಕೊಂಡು ಸಹಾಯ 2.0 ತಂತ್ರಾಂಶವನ್ನು ಅಭಿವೃದ್ದಿಪಡಿಸಿ ಬಿಡುಗಡೆಗೊಳಿಸಲಾಗುತ್ತಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸಂಬಂಧಿಸಿದ ವಿವಿಧ ದೂರುಗಳನ್ನು ಸಂಬಂದಪಟ್ಟ ಅಧಿಕಾರಿಗಳಿಗೆ ಸ್ವಯಂ ಚಾಲಿತವಾಗಿ ತಲುಪುವಂತೆ ಸಹಾಯ 2.0 ಮಾಡುತ್ತದೆ.ಪಾಲಿಕೆಯ ಅಧಿಕಾರಿಗಳು ನೋಂದಾಯಿತ ದೂರುಗಳನ್ನು ಪರಿಣಾಮಕಾರಿಯಾಗಿ ವಿಲೇವಾರಿ ಮಾಡಲು ಅನಕೂಲವಾಗುವಂತಹ ವ್ಯವಸ್ಥೆ ಈ ತಂತ್ರಾಂಶದಲ್ಲಿದೆ.

ಸಾರ್ವಜನಿಕರಿಂದ ದೂರು ದಾಖಲಾದ ತಕ್ಷಣದಿಂದಲೇ ಅಧಿಕಾರಿಗಳು ತಮ್ಮ ಮೋಬೈಲ್‍ನಲ್ಲಿ ದೂರಿನ ವಿವರಗಳನ್ನು ವೀಕ್ಷಿಸಬಹುದಾಗಿದೆ. ಹಾಗೂ ದೂರನ್ನು ಪರಿಹರಿಸಿದ ಛಾಯಾಚಿವನ್ನು ಸಾರ್ವಜನಿಕರಿಗೆ ತಲುಪಿಸುವಂತಹ ಅವಕಾಶವನ್ನು ಇಲ್ಲಿ ಕಲ್ಪಿಸಲಾಗಿರುತ್ತದೆ. ಅಧಿಕಾರಿಗಳಿಗೆ ದೂರಿನ ನಿರ್ದಿಷ್ಟ ಸ್ಥಳವನ್ನು ಗೂಗಲ್ ನಕ್ಷೆಯ ಮೂಲಕ ಗುರುತಿಸಲು ಅವಕಾಶವನ್ನು ಕಲ್ಪಿಸಲಾಗಿದೆ ಮತ್ತು ಅಧಿಕಾರಿಗಳಿಗೆ ದೂರುಗಳನ್ನು ಪರಿಹರಿಸಲು ನಿರ್ದಿಷ್ಟ ಸಮಯವನ್ನು ನಿಗದಿಪಡಿಸಲಾಗಿದ್ದು ಸಮಯ ಮೀರಿದ ದೂರುಗಳನ್ನು ಮೇಲಾಧಿಕಾರಿಗಳಿಗೆ ಸ್ವಯಂ ಚಾಲಿತವಾಗಿ ತಲುಪುವಂತಹ ವ್ಯವಸ್ಥೆಯನ್ನು ಕಲ್ಪಿಕೊಡಲಾಗಿದೆ.

ನಮ್ಮ ಬೆಂಗಳೂರು ಅಪ್ಲಿಕೇಶನ್
ಬೆಂಗಳೂರು ನಾಗರೀಕರು ವಿವಿಧ ಇಲಾಖೆಗಳಿಗೆ ಸಲ್ಲಿಸಬೇಕಾದ ದೂರಗಳನ್ನು ಒಂದೇ ತಂತ್ರಾಂಶದ ಮೂಲಕ ದಾಖಲಿಸಲು “ನಮ್ಮ ಬೆಂಗಳೂರು” ಎನ್ನುವ ತಂತ್ರಾಂಶವನ್ನು ಪಾಲಿಕೆ ವತಿಯಿಂದ ಸಿದ್ದಪಡಿಸಲಾಗಿದ್ದು, ಇದರಲ್ಲಿ, ಪ್ರಸ್ತುತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ, ಬೆಸ್ಕಾಮ್, ಬಿಡಬ್ಲ್ಯೂಎಸ್‍ಎಸ್‍ಬಿ, ಬಿಎಮ್‍ಆರ್‍ಸಿಎಲ್, ಬಿಡಿಎ, ಬಿಎಮ್‍ಆರ್‍ಡಿಎ ಹಾಗೂ ಬಿಎಂಟಿಸಿ ಇಲಾಖೆಗಳ ದೂರು ದಾಖಾಲಾತಿ ತಂತಾ ್ರಂಶಗಳನ್ನು, ಈ “ನಮ್ಮ ಬೆಂಗಳೂರು” ತಂತ್ರಾಂಶಕ್ಕೆ ಸಮಿಕರಣಗೊಳಿಸಲಾಗಿರುತ್ತದೆ. ಈ ತಂತ್ರಾಂಶವು ಸಾರ್ವಜನಿಕರಿಗೆ ವಿವಿಧ ದೂರುಗಳನ್ನು ದಾಖಲಿಸಲು ಒಂದೆ ವೇದಿಕೆಯನ್ನು ಕಲ್ಪಿಸಿಕೊಡುತ್ತದೆ ಹಾಗೂ ಸಾರ್ವಜನಿಕರು ಈ ತಂತ್ರಾಂಶದಲ್ಲಿ ಲಿಖಿತ, ಛಾಯಾಚಿತ್ರ ಹಾಗೂ ವಿಡಿಯೋ ಮೂಲಕ ದೂರಿನ ವಿವರಗಳನ್ನು ದಾಖಲಿಸುವುದಲ್ಲದೆ ಅದರ ಸಂಪೂರ್ಣ ಸ್ಥಿತಿಗತಿಗಳನ್ನು ಅವಲೋಕಿಸಬಹುದಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com