ಕೊರೋನಾ ವೈರಸ್ ಭೀತಿ: ಮಾಂಸಾಹಾರ ಸೇವನೆಗೆ ಜನರ ಹಿಂದೇಟು, ಚಿಕನ್ ಮಾರಾಟದಲ್ಲಿ ಭಾರೀ ಇಳಿಕೆ

ಕೊರೋನಾ ವೈರಸ್ ಭೀತಿ ಬೆಂಗಳೂರು ನಗರಕ್ಕೂ ವ್ಯಾಪಿಸಿದ್ದು, ಕೋಳಿಗಳಿಗೆ ಕೊರೋನಾ ವೈರಸ್ ಸೋಂಕು ತಗುಲಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ನಗರ ಜನತೆ ಇದೀಗ ಮಾಂಸಾಹಾರ ಸೇವನೆಗೆ ತಿಂದೇಟು ಹಾಕುತ್ತಿದ್ದಾರೆ. ಪರಿಣಾಮ ಚಿಕನ್ ಮಾರಾಟದಲ್ಲಿ ಭಾರಿ ಇಳಿಕೆ ಕಂಡು ಬಂದಿದೆ ಎಂದು ಹೇಳಲಾಗುತ್ತಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ವೈರಸ್ ಭೀತಿ ಬೆಂಗಳೂರು ನಗರಕ್ಕೂ ವ್ಯಾಪಿಸಿದ್ದು, ಕೋಳಿಗಳಿಗೆ ಕೊರೋನಾ ವೈರಸ್ ಸೋಂಕು ತಗುಲಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ನಗರ ಜನತೆ ಇದೀಗ ಮಾಂಸಾಹಾರ ಸೇವನೆಗೆ ತಿಂದೇಟು ಹಾಕುತ್ತಿದ್ದಾರೆ. ಪರಿಣಾಮ ಚಿಕನ್ ಮಾರಾಟದಲ್ಲಿ ಭಾರಿ ಇಳಿಕೆ ಕಂಡು ಬಂದಿದೆ ಎಂದು ಹೇಳಲಾಗುತ್ತಿದೆ. 

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂದೇಶಗಳು ವೈರಲ್ ಆಗುತ್ತಿದ್ದು, ಕಳೆದ ಎರಡು ವಾರಗಳಿಂದ ಚಿಕನ್ ಮಾರಾಟ ಕಡಿಮೆಯಾಗಿದೆ. ವಾಟ್ಸ್ ಅ್ಯಪ್ ಗಳಲ್ಲೂ ಈ ಸಂದೇಶ ಹರಿದಾಡುತ್ತಿದ್ದು, ಹೈ ಅಲರ್ಟ್: ಬೆಂಗಳೂರಿನಲ್ಲಿಂದೂ ಕೊರೋನಾ ಸೋಂಕಿತ ಕೋಳಿ ಪತ್ತೆಯಾಗಿದ್ದು, ದಯೆಮಾಡಿ ಈ ಸಂದೇಶವನ್ನು ಇತರರಿಗೆ ರವಾನಿಸಿ ಇತರರು ಕೋಳಿ ಮಾಂಸ ಸೇವನೆ ಮಾಡುವುದನ್ನು ತಪ್ಪಿಸಿ. ನಿಮ್ಮ ಆತ್ಮೀಯರಿಗೂ ಸಂದೇಶವನ್ನು ರವಾನಿಸಿ ಎಂದು ಹೇಳಿದ್ದಾರೆ. 

ಪುಲಕೇಶಿನಗರದ ಟೆಂಡರ್ ಚಿಕನ್ ಉದ್ಯೋಗಿಯಾಗಿರುವ ಸಲೀಮ್ ಮೊಹಮ್ಮದ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಕೋಳಿಗಳನ್ನು ಬೆಳೆಸಲು ನಾವು ಭೂಮಿಯನ್ನು ಹೊಂದಿದ್ದೇವೆ. ಅವುಗಳನ್ನೇ ನಾವು ಮಾರಾಟ ಮಾಡುತ್ತೇವೆ. ಆದರೂ ಜನರು ಕೋಳಿಗಳಿಗೆ ಕೊರೋನಾ ವೈರಸ್ ಸೋಂಕು ತಗುಲಿದೆ ಎಂದು ತಿಳಿಯುತ್ತಿದ್ದಾರೆ. ಹಲವಾರು ಜನರು ಅಂಗಡಿಗೆ ಬಂದು ಕೊರೋನಾ ವೈರಸ್ ತಗುಲಿರುವುದು ಸತ್ಯವೇ ಎಂದು ಕೇಳುತ್ತಾರೆ. ಆದರೆ, ಅದನ್ನು ನಾವು ತಿರಸ್ಕರಿಸಿ ಅಭಯ ಹೇಳಿದರೂ ಅದನ್ನು ಜನರು ಕೇಳುತ್ತಿಲ್ಲ ಎಂದು ಹೇಳಿದ್ದಾರೆ. 

ಚಿಕನ್ ಮಾರಾಟ ಅಂಗಡಿಯ ಮಾಲೀಕ ಜುಬೈರ್ ಅಹ್ಮದ್ ಅವರು ಮಾತನಾಡಿ, ಕಳೆದ 20 ದಿನಗಳಿಂದ ವ್ಯಾಪಾರದ ಮೇಲೆ ಗಂಭೀರ ಪರಿಣಾಮ ಬೀರಿದೆ. ಪ್ರತೀನಿತ್ಯ ನಾವು 80-100 ಕೆಜಿ ಮಾಂಸವನ್ನು ಮಾರಾಟ ಮಾಡುತ್ತಿದ್ದೆವು. ಆದರೆ, ಇದೀಗ 50-60 ಕೆಜಿಯಷ್ಟೇ ಮಾರಾಟವಾಗುತ್ತಿದೆ. ಬೆಲೆ ಕೂಡ ಕೆಜಿಗೆ ರೂ.160-180 ಇದ್ದ ಬೆಲೆ ರೂ.100ಕ್ಕೆ ಇಳಿದಿದೆ. 

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂದೇಶ ಜನರನ್ನು ಆತಂತಕ್ಕೀಡು ಮಾಡಿದೆ. ಈ ಹಿಂದೆ ಕೋಳಿ ಮಾಂಸವನ್ನು ತೆಗೆದುಕೊಂಡು ಹೋಗುತ್ತಿದ್ದವರೆಲ್ಲಾ ಇದೀಗ ಕುರಿ ಮಾಂಸವನ್ನು ಖರೀದಿ ಮಾಡುತ್ತಿದ್ದಾರೆ. ಇದೀಗ ಕುರಿ ಮಾಂಸ ಕೆಜಿಗೆ ರೂ.600-700ಕ್ಕೆ ಮಾರಾಟವಾಗುತ್ತಿದೆ. ಕಳೆದೊಂದು ವಾರದಿಂದ ಕೇವಲ 20 ಕೆಜಿ ಮಾಂಸವಷ್ಟೇ ಮಾರಾಟವಾಗಿದೆ ಎಂದು ಮತ್ತೊಬ್ಬ ಮಾಂಸ ಮಾರಾಟಗಾರ ಹೇಳಿದ್ದಾರೆ. 

ಈ ನಡುವೆ ಭೀತಿಗೊಳಗಾಗದಂತೆ ವೈದ್ಯರು ಜನರಿಗೆ ಅಭಯ ನೀಡಿದ್ದು, ಸ್ಥಳೀಯ ಪ್ರಾಣಿಗಳ ಮೂಲಕ ವೈರಸ್ ಹರಡುವುದು ದೂರದ ಕಲ್ಪನೆಯಾಗಿದೆ. ಕುರಿ, ಮೇಕೆ, ಕೋಳಿ ಅಥವಾ ಹಂದಿಗಳಂತಹ ಪ್ರಾಣಿಗಳು ವೈರಸ್ ಗೆ ಕಾರಣವಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿವ್ವ, ಈ ಬಗ್ಗೆ ಸ್ಥಳೀಯರ ಚಿಂತಿತರಾಗಬೇಕಿಲ್ಲ. ಆದರೆ, ಮಾಂಸವನ್ನು ಆರೋಗ್ಯಕರವಾಗಿ ಬೇಯಿಸುವುದು ಮುಖ್ಯವಾಗುತ್ತದೆ. ಶೇಖರಿಸಿಟ್ಟ ಮಾಂಸವೇ ಅಥವಾ ಅಲ್ಲವೇ ಎಂಬುದನ್ನು ಜನರು ಖಚಿತಪಡಿಸಿಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com