ಸಾಂದರ್ಭಿಕ ಚಿತ್ರ
ರಾಜ್ಯ
ಮದುವೆ ಸಂಭ್ರಮದಲ್ಲಿದ್ದ ಹೊಸೂರ ಕುಟುಂಬಸ್ಥರು, ನೆಂಟರ ನೆಪದಲ್ಲಿ ಬಂದು ಚಿನ್ನ ಕದ್ದ ಖದೀಮ
ನೆಂಟರ ನೆಪದಲ್ಲಿ ಮದುವೆ ಮಂಟಪಕ್ಕೆ ಬಂದು ಚಿನ್ನ ಕದ್ದ ಘಟನೆ ಬಾಗಲಕೋಟೆಲ್ಲಿ ನಡೆದಿದೆ.
ಬಾಗಲಕೋಟೆ: ನೆಂಟರ ನೆಪದಲ್ಲಿ ಮದುವೆ ಮಂಟಪಕ್ಕೆ ಬಂದು ಚಿನ್ನ ಕದ್ದ ಘಟನೆ ಬಾಗಲಕೋಟೆಲ್ಲಿ ನಡೆದಿದೆ.
ಬಾಗಲಕೋಟೆ ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಹೊಸೂರ ಬಂಧುಗಳ ಮದುವೆ ಸಮಾರಂಭದ ವೇಳೆ ರಾತ್ರಿ ಮದುವೆಯ ಕುಟುಂಬಸ್ಥರೊಂದಿಗೆ ಡಾನ್ಸ್ ಮಾಡಿದ ಖದೀಮರು ಅಂದಾಜು ೮ ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ್ದಾರೆ.
ಕುಟುಂಬಸ್ಥರು ಡ್ಯಾನ್ಸ್ ಸಂಭ್ರಮದಲ್ಲಿದ್ದಾಗ ಕೊಠಡಿಯ ಕೀಲಿ ಮುರಿದು ಬ್ಯಾಗ್ ನಲ್ಲಿದ್ದ ಚಿನ್ನ ಕದ್ದು ಪರಾರಿಯಾಗಿದ್ದಾರೆ. ಬೀಳಗಿ ತಾಲೂಕಿನ ಸೊನ್ನ ಗ್ರಾಮದ ಯುವತಿಯೊಂದಿಗೆ ಕೊಪ್ಪಳ ಮೂಲದ ವರನೊಂದಿಗೆ ನಿನ್ನೆ ಮದುವೆ ನಿಶ್ಚಿತಾರ್ಥ ನಡೆಯುತ್ತಿತ್ತು. ಇಂದು ನಡೆದ ಮದುವೆ ಸಮಾರಂಭವಿತ್ತು.
ಬಾಗಲಕೋಟೆ ನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲು ಮಾಡಿಕೊಂಡು ಆರೋಪಿಗೆ ಬಲೆ ಬೀಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ