ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ತುಮಕೂರು: ಆತ್ಮಹತ್ಯೆಗೆ ಶರಣಾದ ಎಸ್ಎಸ್ಎಲ್'ಸಿ ವಿದ್ಯಾರ್ಥಿನಿ

ಎಸ್ಎಸ್ಎಲ್'ಸಿ ಪರೀಕ್ಷೆ ಹತ್ತಿರ ಬರುತ್ತಿದ್ದು, ವಿದ್ಯಾರ್ಥಿಗಳಲ್ಲಿ ಆತಂಕ ಹೆಚ್ಚಾಗತೊಡಗಿದೆ. ಈ ನಡುವೆ ಪರೀಕ್ಷೆ ಎದುರಿಸಲು ಭೀತಿಗೊಳಗಾಗಿರುವ 10ನೇ ತರಗತಿಯ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಧುಗಿರಿಯಲ್ಲಿ ನಡೆದಿದೆ. 

ತುಮಕೂರು: ಎಸ್ಎಸ್ಎಲ್'ಸಿ ಪರೀಕ್ಷೆ ಹತ್ತಿರ ಬರುತ್ತಿದ್ದು, ವಿದ್ಯಾರ್ಥಿಗಳಲ್ಲಿ ಆತಂಕ ಹೆಚ್ಚಾಗತೊಡಗಿದೆ. ಈ ನಡುವೆ ಪರೀಕ್ಷೆ ಎದುರಿಸಲು ಭೀತಿಗೊಳಗಾಗಿರುವ 10ನೇ ತರಗತಿಯ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಧುಗಿರಿಯಲ್ಲಿ ನಡೆದಿದೆ. 

ವರ್ಷಿತಾ (15) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ ಎಂದು ಹೇಳಲಾಗುತ್ತಿದೆ. ಅಯ್ಯಪ್ಪಸ್ವಾಮಿ ಎಕ್ಸ್ ಟೆನ್ಷನ್ ಬಳಿಯಿರುವ ನಿವಾದಲ್ಲಿ ಕಳೆದ ಮಂಗಳವಾರ ರಾತ್ರಿ 7 ಗಂಟೆ ಸುಮಾರಿಗೆ ವಿದ್ಯಾರ್ಥಿನಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆಂದು ವರದಿಗಳು ತಿಳಿಸಿವೆ. 

ಇತ್ತೀಚೆಗಷ್ಟೇ ಎಸ್ಸೆಸ್ಸೆಲ್ಸಿ ಪೂರ್ವಸಿದ್ಧತಾ ಪರೀಕ್ಷೆಯ ಗಣಿತ ಹಾಗೂ ಇಂಗ್ಲೀಷ್ ವಿಷಯಗಳ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿದ್ದವು. ಸೋರಿಕೆಯಾಗಿದ್ದ ಈ ಪ್ರಶ್ನೆ ಪತ್ರಿಗೆಗಳನ್ನು ವರ್ಷಿತಾ ವಾಟ್ಸ್ ಅಪ್ ಮೂಲಕ ನನ್ನ ಸ್ನೇಹಿತರಿಗೆ ಕಳುಹಿಸಿದ್ದಾನೆ. ಈ ವಿಚಾರ ತಿಳಿದ ಪೋಷಕರು ವರ್ಷಿತಾಗೆ ಬೈದಿದ್ದಾರೆ. 

ವರ್ಷಿತಾ ವಿದ್ಯಾಭ್ಯಾಸದಲ್ಲಿ ಉತ್ತಮವಾಗಿರಲಿಲ್ಲ. ಚೇತನ್ ಇಂಗ್ಲೀಷ್ ಶಾಲೆಯಲ್ಲಿ ಓದುತ್ತಿದ್ದು, ಇತ್ತೀಚೆಗಷ್ಟೇ ಶಾಲಾ ಆಡಳಿತ ಮಂಡಳಿ ವರ್ಷಿತಾ ಪೋಷಕರಿಗೆ ದೂರು ನೀಡಿದ್ದರು. ಅಲ್ಲದೆ, ಸಲಹೆಗಳನ್ನೂ ನೀಡಿದ್ದರು. ಈ ವಿಚಾರಕ್ಕೆ ವರ್ಷಿತಾ ಪೋಷಕರು ಮಗಳಿಗೆ ಬೈದಿದ್ದು, ಇದರಿಂದ ನೊಂದು ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇದೀಗ ತನಿಖೆ ಆರಂಭಿಸಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com