ಪಾಕ್ ಪರ ಘೋಷಣೆ ಕೂಗಿದ ಯುವತಿ ಮನೆ ಮೇಲೆ ಕಲ್ಲುತೂರಾಟ: ಪೊಲೀಸರು

ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದ ಯುವತಿ ಅಮೂಲ್ಯ ಮನೆ ಮೇಲೆ ದುಷ್ಕರ್ಮಿಗಳ ಗುಂಪೊಂದು ಕಲ್ಲು ತೂರಾಟ ನಡೆಸಿದೆ ಎಂದು ವರದಿಗಳು ತಿಳಿಸಿವೆ. 
ಅಮೂಲ್ಯ
ಅಮೂಲ್ಯ

ಬೆಂಗಳೂರು: ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದ ಯುವತಿ ಅಮೂಲ್ಯ ಮನೆ ಮೇಲೆ ದುಷ್ಕರ್ಮಿಗಳ ಗುಂಪೊಂದು ಕಲ್ಲು ತೂರಾಟ ನಡೆಸಿದೆ ಎಂದು ವರದಿಗಳು ತಿಳಿಸಿವೆ. 

ಚಿಕ್ಕಮಗಳೂರಿನಲ್ಲಿ ಅಮೂಲ್ಯ ಅವರ ಮನೆಯಿದ್ದು, ಮನೆ ಮೇಲೆ ದುಷ್ಕರ್ಮಗಿಳು ಕಲ್ಲು ತೂರಾಟ ನಡೆಸಿದ್ದಾರೆ. ಘಟನೆ ಬಳಿಕ ಅಧಿಕಾರಿಗಳು ಇದೀಗ ಅಮೂಲ್ಯ ಅವರ ಮನೆಗೆ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಿದ್ದಾರೆಂದು ತಿಳಿದುಬಂದಿದೆ. 

ಕಲ್ಲು ತೂರಾಟ ನಡೆಸಿದ ಪರಿಣಾಮ ಮನೆಯ ಕಿಟಕಿಗಳು ಧ್ವಂಸಗೊಂಡಿವೆ ಎಂದು ಹೇಳಲಾಗುತ್ತಿದೆ. ಈ ನಡುವೆ ಪಾಕಿಸ್ತಾನ ಪರ ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ಯುವತಿ ಅಮೂಲ್ಯಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ. 

ಹಿಂದು, ಮುಸ್ಲಿಂ, ಸಿಖ್, ಈಸಾಯಿ ಫೆಡರೇಷನ್ ನಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ಆಯೋಜಿಸಲಾಗಿತ್ತು. 

ಆಗಷ್ಟೇ ವೇದಿಕೆಗೆ ಬಂದಿದ್ದ ಎಐಎಂಐಎಂ ಸಂಸದ ಓವೈಸಿ, ಭಿತ್ತಿಪತ್ರ ಹಿಡಿದು ನಿಂತಿದ್ದ ಅಮೂಲ್ಯಗೆ ಮಾತನಾಡಲು ಆಹ್ವಾನ ನೀಡಲಾಗಿತ್ತು. ಮೈಕ್ ಸಿಗುತ್ತಿದ್ದಂತೆ ಪಾಕಿಸ್ತಾನ್ ಜಿಂದಾಬಾದ್ ಎಂದು ಅಮೂಲ್ಯ ಕೂಗಿದ್ದರು. ವೇದಿಕೆಯಲ್ಲಿದ್ದ ಓವೈಸಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಅಮೂಲ್ಯ ಅವರನ್ನು ಬಂಧನಕ್ಕೊಳಪಡಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com