ಡಿಸಿಪಿ ಇಶಾ ಪಂತ್ ವರ್ಗಾವಣೆ ದಿಢೀರ್ ರದ್ದು

ಸಿಐಡಿ ಎಸ್ ಪಿ ಆಗಿ ವರ್ಗಗೊಂಡಿದ್ದ  ಡಿಸಿಪಿ  ಇಶಾ ಪಂತ್ ಅವರ ವರ್ಗಾವಣೆ ರದ್ದು ಮಾಡಿ ರಾಜ್ಯ ಸರ್ಕಾರ ಶನಿವಾರ ಏಕಾಏಕಿ ಆದೇಶ ಹೊರಡಿಸಿದೆ.
ಡಿಸಿಪಿ ಇಶಾ ಪಂತ್
ಡಿಸಿಪಿ ಇಶಾ ಪಂತ್

ಬೆಂಗಳೂರು: ಸಿಐಡಿ ಎಸ್ ಪಿ ಆಗಿ ವರ್ಗಗೊಂಡಿದ್ದ  ಡಿಸಿಪಿ ಇಶಾ ಪಂತ್ ಅವರ ವರ್ಗಾವಣೆ ರದ್ದು ಮಾಡಿ ರಾಜ್ಯ ಸರ್ಕಾರ ಶನಿವಾರ ಏಕಾಏಕಿ ಆದೇಶ ಹೊರಡಿಸಿದೆ.

ಕಳೆದ 3 ದಿನಗಳ ಹಿಂದಷ್ಟೇ ಆಗ್ನೇಯ ವಿಭಾಗದ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇಶಾ ಪಂತ್ ಅವರನ್ನು, ಸಿಐಡಿ ಎಸ್ ಪಿ ಆಗಿ ರಾಜ್ಯ ಸರ್ಕಾರ ವರ್ಗಾವಣೆ ಮಾಡಿತ್ತು. ಆದರೆ, ಇಂದು ಅದನ್ನು ರದ್ದುಗೊಳಿಸಿದೆ.


ಆದ್ದರಿಂದ ಇಶಾ ಪಂತ್ ಅವರು ಆಗ್ನೇಯ ವಿಭಾಗದ ಡಿಸಿಪಿಯಾಗಿಯೇ ಮುಂದುವರಿಯಲಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com