

ಬಾಗಲಕೋಟೆ: ನಾಡಿನ ಆರಾಧ್ಯ ದೈವ ಬಾದಾಮಿ ಬನಶಂಕರಿ ದೇವಿ ರಥೋತ್ಸವ ಶುಕ್ರವಾರ ಸಂಜೆ ಲಕ್ಷಾಂತರ ಭಕ್ತ ಸಮೂಹದ ಮಧ್ಯೆ ನೆರವೇರಿತು.
ಪ್ರತಿವರ್ಷ ಬನದ ಹುಣ್ಣಿಮೆಯಂದು ಈ ಜಾತ್ರೆ ನಡೆಯುತ್ತದೆ. ಇಂದು ಬನದ ಹುಣ್ಣಿಮೆ ಹಿನ್ನೆಲೆಯಲ್ಲಿ ಅದ್ದೂರಿಯಾಗಿ ದೇವಿಯ ರಥೋತ್ಸವ ನಡೆಯಿತು. ಲಕ್ಷಾಂತರ ಭಕ್ತರು ರಥೋತ್ಸವವನ್ನ ಕಣ್ತುಂಬಿಕೊಂಡರು.
ಬಾದಾಮಿ ಕ್ಷೇತ್ರದ ಶಾಸಕರೂ ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಹಂಪಿ ಹೇಮಕೂಟ ಗಾಯತ್ರಿ ಪೀಠದ ಜಗದ್ಗುರು ಶ್ರೀ ದಯಾನಂದಪುರಿ ಸ್ವಾಮೀಜಿ, ಮಾಜಿ ಸಚಿವ ಬಿ..ಬಿ. ಚಿಮ್ಮನಕಟ್ಟಿ, ಮಾಜಿ ಶಾಸಕರಾದ ಎಂ.ಡಿ. ಲಕ್ಷ್ಮಿನಾರಾಯಣ, ಎಸ್.ಜಿ. ನಂಜಯ್ಯನಮಠ ಸೇರಿದಂತೆ ಅನೇಕರು ರಥೋತ್ಸವದಲ್ಲಿ ಭಾಗವಹಿಸಿ ದೇವಿಯ ದರ್ಶನ ಪಡೆದುಕೊಂಡರು.