ಅವರೇ ಮೇಳ ಬೆಂಗಳೂರು ಸಂಸ್ಕೃತಿ ಅವಿಭಾಜ್ಯ ಅಂಗ: ಜ.16-26 ವರೆಗೆ ಮೇಳ ಆಯೋಜನೆ

ಸಿಲಿಕಾನ್ ಸಿಟಿ ಬೆಂಗಳೂರಿನ ಸಾಂಸ್ಕೃತಿಕತೆಗೆ ವೇದಿಕೆಯಾಗಿದ್ದ ವಿವಿಪುರಂನ ಅವರೇ ಮೇಳದ ಆಯೋಜನೆ ಕುರಿತಂತೆ ಭುಗಿಲೆದ್ದಿದ್ದ ವಿವಾದಕ್ಕೆ ಬಿಬಿಎಂಪಿ ಮೇಯರ್ ತೆರೆ ಎಳೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಸಾಂಸ್ಕೃತಿಕತೆಗೆ ವೇದಿಕೆಯಾಗಿದ್ದ ವಿವಿಪುರಂನ ಅವರೇ ಮೇಳದ ಆಯೋಜನೆ ಕುರಿತಂತೆ ಭುಗಿಲೆದ್ದಿದ್ದ ವಿವಾದಕ್ಕೆ ಬಿಬಿಎಂಪಿ ಮೇಯರ್ ತೆರೆ ಎಳೆದಿದೆ.

ಹೌದು.. ಇದೇ ಜನವರಿ 16 ರಿಂದ 26ರವರೆಗೆ ಬೆಂಗಳೂರಿನ ವಿವಿಪುರಂನಲ್ಲಿ ಮೇಳೆ ಆಯೋಜನೆಗೆ ಬಿಬಿಎಂಪಿ ಅನುಮತಿ ನೀಡಿದ್ದು, ಈ ಕುರಿತಂತೆ ಸ್ವತಃ ಮೇಯರ್ ಗೌತಮ್ ಕುಮಾರ್ ಅವರು ಫೇಸ್ ಬುಕ್ ನಲ್ಲಿ ಸ್ಪಷ್ಟನೆ ನೀಡಿದ್ದಾರೆ. 

ಈ ಕುರಿತು ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಬಿಬಿಎಂಪಿ ಮೇಯರ್ ಎಂ ಗೌತಮ್ ಕುಮಾರ್ ಅವರು, 'ಅವರೆ ಮೇಳಕ್ಕೆ ಬಿಬಿಎಂಪಿ ಅನುಮತಿ ನೀಡಲಿದೆ.  ಕಡಲೆಕಾಯಿ ಪರಿಷೆ ಹಾಗೂ ಅವರೆ ಮೇಳ ಬೆಂಗಳೂರು ಸಂಸ್ಕೃತಿಯ ಅವಿಭಾಜ್ಯ ಅಂಗ. ಆದರೆ, ಅವರೆ ಮೇಳದಿಂದ ಕಸದ ಸಮಸ್ಯೆ ಆಗುತ್ತದೆ. ಅನುಮತಿ ನೀಡುವುದು ಬೇಡ ಎಂದು ಕೆಲವರು ಪಾಲಿಕೆಯಲ್ಲಿ ಚರ್ಚೆ ನಡೆಸಿದ್ದರು. ಇದಕ್ಕೆ ನಾನು ಬೆಂಬಲ ಸೂಚಿಸಿಲ್ಲ. ಅವರೆ ಮೇಳ ನಡೆಯುತ್ತದೆ' ಎಂದು ತಿಳಿಸಿದ್ದಾರೆ. 

ವಿವಿಪುರಂನಲ್ಲಿರುವ ವಾಸವಿ ಕಾಂಡಿಮೆಂಟ್ಸ್ ಪ್ರತಿ ವರ್ಷ ಈ ಮೇಳವನ್ನು ಆಯೋಜಿಸುತ್ತಿತ್ತು. ಪ್ರತಿವರ್ಷ ಡಿಸೆಂಬರ್ ಕೊನೆಯ ವಾರದಲ್ಲಿ ಅಥವಾ ಜನವರಿ ಮೊದಲ ವಾರದಲ್ಲಿ ಅವರೆ ಕಾಯಿ ಮೇಳವನ್ನು ವಾಸವಿ ಕಾಂಡಿಮೆಟ್ಸ್ ಏರ್ಪಡಿಸಿಕೊಂಡು ಬರುತ್ತದೆ. ಆದರೆ, ಈ ವರ್ಷ ಸ್ವಚ್ಛತೆಯ ಕಾರಣವೊಡ್ಡಿ ಮೇಳ ನಡೆಸಲು ಬಿಬಿಎಂಪಿ ಅನುಮತಿ ನೀಡುವುದಿಲ್ಲ ಎಂಬ ಸುದ್ದಿ ವಿವಾದಕ್ಕೆ ಕಾರಣವಾಗಿತ್ತು. ಆದರೆ ಇದೀಗ ಸ್ವತಃ ಬಿಬಿಎಂಪಿ ಮೇಯರ್ ಈ ಕುರಿತ ವಿವಾದಕ್ಕೆ ತೆರೆ ಎಳೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com