ಬೆಂಗಳೂರು: ಜಿಂಕೆಗೆ ಬೈಕ್ ಡಿಕ್ಕಿ; ಸ್ಥಳದಲ್ಲೇ ಸವಾರ-ಜಿಂಕೆ ದುರ್ಮರಣ

ಜಿಂಕೆಗೆ ಬೈಕ್​ ಡಿಕ್ಕಿಯಾಗಿ ಸವಾರ ಮತ್ತು ಜಿಂಕೆ ಎರಡು ಸಾವಿಗೀಡಾಗಿರುವ ಘಟನೆ ನೆಲಮಂಗಲ ತಾಲೂಕಿನ ಅಪ್ಪಗೊಂಡನಹಳ್ಳಿ ಬಳಿ  ನಡೆದಿದೆ.
ಮೃತ ಯುವ ಹರೀಶ್
ಮೃತ ಯುವ ಹರೀಶ್
Updated on

ಬೆಂಗಳೂರು: ಜಿಂಕೆಗೆ ಬೈಕ್​ ಡಿಕ್ಕಿಯಾಗಿ ಸವಾರ ಮತ್ತು ಜಿಂಕೆ ಎರಡು ಸಾವಿಗೀಡಾಗಿರುವ ಘಟನೆ ನೆಲಮಂಗಲ ತಾಲೂಕಿನ ಅಪ್ಪಗೊಂಡನಹಳ್ಳಿ ಬಳಿ  ನಡೆದಿದೆ.

ಹರೀಶ್ (21ವರ್ಷ) ಮೃತ ಬೈಕ್ ಸವಾರ. ಹರೀಶ್​ ಸಹೋದರಿ ಇಂದಿರಾ ದಾಬಸ್ ಪೇಟೆ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಎಂದಿನಂತೆ ಬೆಳಗ್ಗೆ 5:30ರ ಸುಮಾರಿಗೆ ಅಕ್ಕನನ್ನು ಬಸ್​ಗೆ ಡ್ರಾಪ್ ಮಾಡಿ ಮನೆಗೆ ಹಿಂದಿರುಗುವಾಗ ಅಪಘಾತ ಸಂಭವಿಸಿದೆ.

ಅಡ್ಡಬಂದ ಜಿಂಕೆಗೆ ಡಿಕ್ಕಿಯಾದ ಪರಿಣಾಮ ಹರೀಶ್​ ಮೃತಪಟ್ಟಿದ್ದು, ಗಾಯಗೊಂಡ ಜಿಂಕೆಯೂ ಸಾವಿಗೀಡಾಗಿದೆ.  ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com