ಸಂಗ್ರಹ ಚಿತ್ರ
ರಾಜ್ಯ
ಬೆಂಗಳೂರು: ಎದೆಗೆ ಚಾಕುವಿನಿಂದ ಚುಚ್ಚಿ ವ್ಯಕ್ತಿ ಕೊಲೆ
ವ್ಯಕ್ತಿಯ ಎದೆಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ಡಿಜೆ ಹಳ್ಳಿಯ ಕಾವಲ್ ಭೈರಸಂದ್ರದಲ್ಲಿ ನಡೆದಿದೆ.
ಬೆಂಗಳೂರು: ವ್ಯಕ್ತಿಯ ಎದೆಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ಡಿಜೆ ಹಳ್ಳಿಯ ಕಾವಲ್ ಭೈರಸಂದ್ರದಲ್ಲಿ ನಡೆದಿದೆ.
ಇರ್ಫಾನ್ ಕೊಲೆಯಾದ ವ್ಯಕ್ತಿ. ಕಾವಲ್ ಭೈರಸಂದ್ರದ ಇರ್ಫಾನ್ನ ಹೆಂಡತಿಯನ್ನು ತೌಸೀಫ್ ಎಂಬಾತ ಎರಡನೇ ಮದುವೆಯಾಗಿದ್ದನು. ತನ್ನ ಹೆಂಡತಿಯನ್ನು ಆಕರ್ಷಿಸಿ ತನ್ನತ್ತ ಸೆಳೆದುಕೊಂಡಿದ್ದಕ್ಕೆ ಕೋಪಗೊಂಡಿದ್ದ ಇರ್ಫಾನ್ ಆಗಾಗ ತೌಸೀಫ್ ಜೊತೆಗೆ ಜಗಳವಾಡುತ್ತಿದ್ದನು.
ಇದೇ ವಿಷಯಕ್ಕೆ ಬುಧವಾರ ಮತ್ತೆ ಜಗಳ ನಡೆದಿದ್ದು, ತನ್ನ ಹೆಂಡತಿಯನ್ನು ಮದುವೆಯಾಗಿರುವ ತೌಸೀಫ್ ಜೊತೆಗೆ ಇರ್ಫಾನ್ ಹೊಡೆದಾಟ ನಡೆಸಿದ್ದ. ಅದೇ ಕೋಪದಲ್ಲಿ ತೌಸೀಫ್, ಇರ್ಫಾನ್ನ ಎದೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ