ಬೆಂಗಳೂರು: ಒಂದೇ ರೈಲು, ಪ್ರತ್ಯೇಕ ಕಡೆ ರೈಲಿಗೆ ಸಿಲುಕಿ ಇಬ್ಬರ ಸಾವು

ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಚಲಿಸುತ್ತಿದ್ದ  ರೈಲಿಗೆ ಸಿಕ್ಕಿ ಇಬ್ಬರು ಮೃತಪಟ್ಟಿರುವ ದಾರುಣ ಘಟನೆ ಚಿಕ್ಕಬಳ್ಳಾಪುರದ ಪಟ್ರೇನಹಳ್ಳಿ ಗ್ರಾಮದ ಬಳಿ ಹಾಗೂ ನಾಗಾರ್ಜುನ  ಇಂಜಿನಿಯರಿಂಗ್ ಕಾಲೇಜು ಬಳಿ ನಡೆದ ನಡೆದಿದೆ.
ರೈಲ್ವೆ ಹಳಿ
ರೈಲ್ವೆ ಹಳಿ
Updated on: 

ಬೆಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಚಲಿಸುತ್ತಿದ್ದ  ರೈಲಿಗೆ ಸಿಕ್ಕಿ ಇಬ್ಬರು ಮೃತಪಟ್ಟಿರುವ ದಾರುಣ ಘಟನೆ ಚಿಕ್ಕಬಳ್ಳಾಪುರದ ಪಟ್ರೇನಹಳ್ಳಿ ಗ್ರಾಮದ ಬಳಿ ಹಾಗೂ ನಾಗಾರ್ಜುನ  ಇಂಜಿನಿಯರಿಂಗ್ ಕಾಲೇಜು ಬಳಿ ನಡೆದ ನಡೆದಿದೆ.

ಕೆಆರ್‌ಪುರಂನಿಂದ  ಚಿಕ್ಕಬಳ್ಳಾಪುರ ಮಾರ್ಗ ಕೋಲಾರಕ್ಕೆ ಪ್ರಯಾಣಿಸುವ ರೈಲಿಗೆ ನಾಗಾರ್ಜುನ ಇಂಜಿನಿಯರಿಂಗ್  ಕಾಲೇಜು ಬಳಿ ಹುರುಳುಗುರ್ಚಿ ನವೀನ್ ಕುಮಾರ್ (24) ಎಂಬ ವ್ಯಕ್ತಿ ರೈಲಿಗೆ ಸಿಕ್ಕಿ  ಮೃತಪಟ್ಟಿರುತ್ತಾನೆ.

ತದ ನಂತರ ಅದೇ ರೈಲಿಗೆ ಪಟ್ರೇನಹಳ್ಳಿ ಗ್ರಾಮದ ಬಳಿ ಸುಮಾರು 40  ವರ್ಷದ ವಯಸ್ಸಿನ ಅಪರಿಚಿತ ಮಹಿಳೆ ಸಿಕ್ಕಿ ಮೃತಪಟ್ಟಿರುತ್ತಾಳೆ. ಈ ಬಗ್ಗೆ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರು ಭೇಟಿ ನೀಡಿ ಪ್ರಕರಣ  ದಾಖಲಿಸಿಕೊಂಡಿರುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com