ಪತಿಯ ವಿರುದ್ಧ ವರದಕ್ಷಿಣೆ ದೂರು ನೀಡಿದ ವಿದೇಶಿ ಪತ್ನಿ
ಬೆಂಗಳೂರು: ವಿದೇಶಿ ಮೂಲದ ವಿವಾಹಿತೆ ಮಹಿಳೆಯೋರ್ವಳು ತನ್ನ ಗಂಡನ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪಿಸಿ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದಕ್ಷಿಣ ಅಮೇರಿಕಾದ ಚಿಲಿ ದೇಶದ ಸಂತ್ರಸ್ತೆ ಕಾರ್ಲಾ ಮಾರ್ಟೂಸ್ ಬ್ರಾವೂ ಎಂಬ ಮಹಿಳೆ ತನ್ನ ಗಂಡ ವಿಕ್ರಂ ವಿರುದ್ಧ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಾರ್ಲಾ ಅವರು, ಭರತನಾಟ್ಯ, ಕಥಕ್ ಕಲಿಯಲು 2017 ರಲ್ಲಿ ಬೆಂಗಳೂರಿಗೆ ಬಂದಿದ್ದರು. ಈ ಸಂದರ್ಭದಲ್ಲಿ ಕಾರ್ಲಾ ಅವರಿಗೆ ಹೈದರಾಬಾದ್ ಮೂಲದ ವಿಕ್ರಂ ಮಾಡಾ ಜತೆಗೆ ಪ್ರೇಮಾಂಕುರವಾಗಿದ್ದು, 2018 ರ ಜುಲೈನಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದರು.
ಮದುವೆ ಬಳಿಕ ಜೆ.ಪಿ.ನಗರದ ಪುಟ್ಟೇನಹಳ್ಳಿಯಲ್ಲಿ ವಾಸವಾಗಿದ್ದರು. 2019 ರಲ್ಲಿ ಪತ್ನಿ ಕಾರ್ಲಾಳ ಚಿಲಿ ದೇಶಕ್ಕೆ ಹೋಗಿ ಬಂದಿದ್ದರು. ಆ ಬಳಿಕ ಪತ್ನಿ ಮನೆಯ ಸ್ಥಿತಿಗತಿ ಕಂಡು ಪತಿ ಹಣಕ್ಕಾಗಿ ಕಿರುಕುಳ ನೀಡಿರುವುದಲ್ಲದೇ, ಪೋನ್ ಚೆಕ್ ಮಾಡಿ ಪತಿ ಕಿರುಕುಳ ನೀಡುತ್ತಿದ್ದಾಗಿ ಕಾರ್ಲಾ ಆರೋಪಿಸಿದ್ದಾರೆ. ವಿಚ್ಛೇದನ ನೀಡಲು ಪರಸ್ಪರ ನಿರ್ಧರಿಸಿ ಮಾತನಾಡಲು ತೆರಳಿದ್ದಾಗ, ಪತಿ ವಿಕ್ರಂ ಮಾಡಾ ತನ್ನ ಮೇಲೆ ಹಲ್ಲೆ ಮಾಡಿರುವುದಾಗಿ ಕಾರ್ಲಾ ಆರೋಪಿಸಿದ್ದಾರೆ.
ಸದ್ಯ ಬಸವನಗುಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ