ರಾಜ್ಯದ 19 ಮಂದಿ ಪೊಲೀಸ್‌ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ

ಗಣರಾಜ್ಯೋತ್ಸವ ಅಂಗವಾಗಿ ನೀಡುವ ರಾಷ್ಟ್ರಪತಿಗಳ ಪದಕಕ್ಕೆ ರಾಜ್ಯದ 19 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಜನರಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಗಣರಾಜ್ಯೋತ್ಸವ ಅಂಗವಾಗಿ ನೀಡುವ ರಾಷ್ಟ್ರಪತಿಗಳ ಪದಕಕ್ಕೆ ರಾಜ್ಯದ 19 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಜನರಾಗಿದ್ದಾರೆ.

ಬಿಎಂಟಿಎಫ್‌ನ ಎಸ್‌ಪಿ  ಓಬಳೇಶ್ ನಂಜಪ್ಪ ಬೇಕಲ, ಕಮಾಂಡೆಂಟ್ ಮಹದೇವ ಪ್ರಸಾದ್ ಕಂಬಳಿ ಮಾದಪ್ಪ, ಮಾರತ್‌ಹಳ್ಳಿ  ಎಸಿಪಿ ಪಂಪಾಪತಿ ಮುದಲಾಪುರ್, ವಿಜಯನಗರ ಎಸಿಪಿ ಧರ್ಮಪ್ಪ, ಸಿಐಡಿಯ ಡಿವೈಎಸ್‌ಪಿ  ಚಂದ್ರಶೇಖರ ಶಿರಗಲೆ, ಲೋಕಾಯುಕ್ತದ ಡಿವೈಎಸ್‌ಪಿಗಳಾದ ಶಂಕರ್ ಮಲ್ಲಿಕಾರ್ಜುನಪ್ಪ,  ಸಿದ್ದರಾಜು, ಕರಿಯಪ್ಪ ಅಮ್ಮದ ಗಣಪತಿ ಅವರು ರಾಷ್ಟ್ರಪತಿ ಪದಕಕ್ಕೆ ಪಾತ್ರರಾಗಿದ್ದಾರೆ.

ಕಲಬುರಗಿಯ  ಡಿವೈಎಸ್‌ಪಿ ಸಂಗಪ್ಪ ಹುಲ್ಲೂರು, ರಾಮನಗರದ ಡಿವೈಎಸ್‌ಪಿ ಲಕ್ಷ್ಮಿ ನಾರಾಯಣ, ಸಿಐಡಿಯ  ಪೊಲೀಸ್ ಇನ್ಸ್‌ಪೆಕ್ಟರ್ ಶಂಕರಪ್ಪ ಗೋವಿಂದಯ್ಯ, ಉಡುಪಿ ಎಸಿಬಿಯ ಇನ್ಸ್‌ಪೆಕ್ಟರ್ ಸತೀಶ್  ಸುಬ್ಬಣ್ಣ, ಹುಬ್ಬಳ್ಳಿ-ಧಾರವಾಡ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಬಾಬುಸಿಂಗ್ ಹನುಮಂತ್  ಸಿಂಗ್ ಕಿತ್ತೂರು, ಬಸವನಗುಡಿ ಸಂಚಾರ ಪೊಲೀಸ್ ಠಾಣೆಯ ಎಎಸ್‌ಐ ಶಿವಯ್ಯ ಸುಕುಮಾರ್,  ಡಿ.ಆರ್. ಮೈಸೂರಿನ ಎಆರ್‌ಎಸ್‌ಐ ರಾಜ್‌ಕುಮಾರ್, ಬೆಂಗಳೂರು ಗುಪ್ತದಳದ ಮುಖ್ಯಪೇದೆಗಳಾದ  ಶಿವಕುಮಾರ್, ನಂಜುಂಡಯ್ಯ ಚಂದ್ರಯ್ಯ. ಎಸ್‌ಸಿಆರ್‌ಬಿಯ ರಂಗನಾಥ್ ರಂಗಶ್ಯಾಮಯ್ಯ ಅವರಿಗೆ  ರಾಷ್ಟ್ರಪತಿ ಪದಕ ನೀಡಲಾಗಿದೆ.

ಕಾರ್ಗಿಲ್ ಹಿರೋಗಳಿಗೂ ಪದಕ!
ಇದೇ ವೇಳೆ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ತಮ್ಮ ಅಪ್ರತಿಮ ಶೌರ್ಯ ಸಾಹಸ ಪ್ರದರ್ಶಿಸಿದ್ದ ಲೆಫ್ಟಿನೆಂಟ್ ಜನರಲ್ ವೈಕೆ ಜೋಷಿ, 15 ಕಾರ್ಪೋರೇಷನ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಕೆಜೆಎಸ್ ಡಿಲ್ಲಾನ್, 3 ಕಾರ್ಪೋರೇಷನ್ ಲೆಫ್ಟಿನೆಂಟ್ ಜನರಲ್ ರಾಜೀವ್ ಸಿರೋಹಿ ಮತ್ತು 16 ಕಾರ್ಪೋರೇಷವ್ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಪರಮ್ ಜೀತ್ ಸಿಂಗ್ ಅವರಿಗೆ ಉತ್ತಮ ಯುದ್ಧ ಸೇವಾ ಪದಕ ಘೋಷಣೆ ಮಾಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com