ಹೆನ್ನಾಗರ ಕೆರೆ
ಹೆನ್ನಾಗರ ಕೆರೆ

ಬೆಂಗಳೂರು: ಹೆನ್ನಾಗರ ಕೆರೆ ಒತ್ತುವರಿ, ರಾಜಕೀಯ ಪುಡಾರಿ ವಿರುದ್ಧ ದೂರು ದಾಖಲು

ಕೆರೆ ಒತ್ತುವರಿ ಹಾಗೂ ತ್ಯಾಜ್ಯ ವಸ್ತುಗಳನ್ನು ಸುರಿಯುವ ರಾಜಕೀಯ ಪುಡಾರಿಗಳಿಂದ  ಕಳೆದ ಎರಡು ವರ್ಷಗಳಿಂದ ಜಿಗಣಿ- ಬೊಮ್ಮ ಸಂದ್ರ ರಸ್ತೆ ಬಳಿಯ ಹೆನ್ನಾಗರ ಕೆರೆ ಸುತ್ತಮುತ್ತಲಿನ ನಿವಾಸಿಗಳು ಭಯದಲ್ಲಿ ಬದುಕುವಂತಾಗಿದೆ.

ಬೆಂಗಳೂರು: ಕೆರೆ ಒತ್ತುವರಿ ಹಾಗೂ ತ್ಯಾಜ್ಯ ವಸ್ತುಗಳನ್ನು ಸುರಿಯುವ ರಾಜಕೀಯ ಪುಡಾರಿಗಳಿಂದ  ಕಳೆದ ಎರಡು ವರ್ಷಗಳಿಂದ ಜಿಗಣಿ- ಬೊಮ್ಮ ಸಂದ್ರ ರಸ್ತೆ ಬಳಿಯ ಹೆನ್ನಾಗರ ಕೆರೆ ಸುತ್ತಮುತ್ತಲಿನ ನಿವಾಸಿಗಳು ಭಯದಲ್ಲಿ ಬದುಕುವಂತಾಗಿದೆ.

ಇದರಿಂದ ರೋಸಿಹೋಗಿ ಇದೇ ಪ್ರದೇಶದಲ್ಲಿ ವಾಸಿಸುತ್ತಿರುವ ಸಾಪ್ಟ್ ವೇರ್ ಉದ್ಯೋಗಿ ತುಷಾರ್ ಚಂದ್ರ ರಾಜಕೀಯ ಪುಡಾರಿ ಶಿವರಾಜ್ ವಿರುದ್ಧ ದೂರು ದಾಖಲಿಸಿದ್ದಾರೆ.

ಈ ಬಗ್ಗೆ ದಿನ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ತುಷಾರ್ ಚಂದ್ರ, ಪ್ರತಿದಿನ ಕಟ್ಟಡದ ಅವಶೇಷಗಳನ್ನು ಲಾರಿಗಳಲ್ಲಿ ತಂದು ಕೆರೆಗೆ ಸುರಿಯಲಾಗುತ್ತದೆ. ಅಲ್ಲದೇ  ಸುತ್ತಮುತ್ತಲಿನ ಅಪಾರ್ಟ್ ಮೆಂಟ್ ಸಂಕೀರ್ಣಗಳಿಂದ ಘನ ತ್ಯಾಜ್ಯ ವಸ್ತುಗಳನ್ನು ಕೆರೆಗೆ ಸುರಿದು ಬೆಂಕಿ ಹಚ್ಚಲಾಗುತ್ತದೆ. ಈ ಕೆರೆ ತ್ಯಾಜ್ಯ ವಸ್ತುಗಳ ಸಂಗ್ರಹವಾಗಿ ಬದಲಾಗಿದ್ದು, ಇದನ್ನು ನಾವೆಲ್ಲರೂ ರಕ್ಷಿಸಬೇಕಾಗಿದೆ ಎನ್ನುತ್ತಾರೆ.

ಇಂತಹ ಕೃತ್ಯಗಳನ್ನು ತಡೆಯಲು ಮುಂದಾದಾಗ ರಾಜಕೀಯ ಪುಡಾರಿ ಶಿವರಾಜ್ ಹಾಗೂ ಆತನ ಬೆಂಬಲಿಗರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ಧ್ವನಿ ಎತ್ತದಂತೆ ಜನರು ಹೇಳುತ್ತಿದ್ದರೂ ನಾನು ಮುಂದುವರೆದು ಪೊಲೀಸರಿಗೆ ದೂರು ದಾಖಲಿಸಿರುವುದಾಗಿ ತಿಳಿಸಿದರು.

ಶಾಸಕ ಕೃಷ್ಣಪ್ಪ ಹಾಗೂ ಕಾಂಗ್ರೆಸ್ ಸಂಸದರೊಬ್ಬರ ಹೆಸರು ಹೇಳಿಕೊಂಡು ಶಿವರಾಜ್ ಜನರನ್ನು ಬೆದರಿಸುತ್ತಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ.

ಶಿವರಾಜ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಬೆಂಗಳೂರು ದಕ್ಷಿಣ ಶಾಸಕ ಎಂ. ಕೃಷ್ಣಪ್ಪ ಹೇಳಿದ್ದಾರೆ. ಈ ಹೆಸರಿನವರೂ ನನ್ನಗೆ ಗೊತ್ತೆ ಇಲ್ಲ. ಅವರನ್ನು ಬಂಧಿಸಿ ವಾಹನಗಳನ್ನು ವಶಕ್ಕೆ ಪಡೆಯುವಂತೆ ಪೊಲೀಸರಿಗೆ ಹೇಳುತ್ತೇನೆ. ಕೆರೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಕೆರೆ ಅಭಿವೃದ್ಧಿ ಅಧಿಕಾರಿಗಳು ಹಾಗೂ ಪಂಚಾಯತ್ ಸಿಬ್ಬಂದಿಯೊಂದಿಗೆ ಕೆರೆ ಬಳಿಗೆ ಭೇಟಿ ನೀಡಿ ಪರಿಶೀಲಿಸುವುದಾಗಿ ಅವರು ತಿಳಿಸಿದರು.

Related Stories

No stories found.

Advertisement

X
Kannada Prabha
www.kannadaprabha.com