ದೋಷಪೂರಿತ ಪಿಪಿಇ ಕಿಟ್, ಎನ್-95 ಮಾಸ್ಕ್ ಕುರಿತು ತನಿಖೆ: ಡಾ. ಕೆ.ಸುಧಾಕರ್

ಕೋವಿಡ್ -19 ಸೋಂಕು ನಿಯಂತ್ರಣದಲ್ಲಿ ಮುಂಚೂಣಿ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸುತ್ತಿರುವ ವೈದ್ಯಕೀಯ ಸಮೂಹಕ್ಕೆ ದೋಷಪೂರಿತ ಪಿಪಿಇ ಕಿಟ್ ಹಾಗೂ ಎನ್ -95 ಮಾಸ್ಕ್ ವಿತರಣೆ ಮಾಡಿರುವ ಕುರಿತ ದೂರಿನ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ತಿಳಿಸಿದ್ದಾರೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್
ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್
Updated on: 

ಬೆಂಗಳೂರು: ಕೋವಿಡ್ -19 ಸೋಂಕು ನಿಯಂತ್ರಣದಲ್ಲಿ ಮುಂಚೂಣಿ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸುತ್ತಿರುವ ವೈದ್ಯಕೀಯ ಸಮೂಹಕ್ಕೆ ದೋಷಪೂರಿತ ಪಿಪಿಇ ಕಿಟ್ ಹಾಗೂ ಎನ್ -95 ಮಾಸ್ಕ್ ವಿತರಣೆ ಮಾಡಿರುವ ಕುರಿತ ದೂರಿನ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಚಿವರು, ಆರೋಪ ಸಾಬೀತಾದಲ್ಲಿ ಕಿಮ್ಸ್ ಆಡಳಿತ ಮಂಡಳಿಯನ್ನು ಹೊಣೆಗಾರರನ್ನಾಗಿ ಮಾಡಲಾಗುವುದು. ಯಾವುದೇ ಕಾರಣಕ್ಕೂ ತಪ್ಪಿತಸ್ಥರನ್ನು ಶಿಕ್ಷಿಸದೇ ಬಿಡುವುದಿಲ್ಲ ಎಂದಿದ್ದಾರೆ. ಕೋವಿಡ್ ಸೋಂಕು ವಿರುದ್ಧ ವೈದ್ಯರು ಮುಂಚೂಣಿಯಲ್ಲಿದ್ದು, ಹೋರಾಡುತ್ತಿದ್ದಾರೆ. ವೀರ ಯೋಧರ ಸುರಕ್ಷತೆಗಾಗಿ ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

'ಕೋವಿಡ್ ವಿರುದ್ಧ ನಮ್ಮ ವೈದ್ಯರು ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿರುವ ವೀರಯೋಧರು. ಅವರ ಸುರಕ್ಷತೆಗೆ ಎಲ್ಲ ಅಗತ್ಯ ಕ್ರಮಗಳನ್ನು ರಾಜ್ಯಸರ್ಕಾರ ಕೈಗೊಂಡಿದೆ. ಕಿಮ್ಸ್ ನಲ್ಲಿ ವೈದ್ಯರಿಗೆ ದೋಷಪೂರಿತ ಪಿಪಿಇ, ಎನ್95 ಮಾಸ್ಕ್ ಕುರಿತ ದೂರಿನ ಬಗ್ಗೆ ನಾನೀಗಾಗಲೇ ತನಿಖೆಗೆ ಆದೇಶಿಸಿದ್ದೇನೆ. ಆರೋಪ ಸಾಬೀತಾದಲ್ಲಿ ಆಡಳಿತ ಮಂಡಳಿ ಹೊಣೆಗಾರರಾಗುತ್ತಾರೆ' ಎಂದು ಸುಧಾಕರ್ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com