ದಿನಕ್ಕೆ 95 ರಿಂದ 18ಕ್ಕೆ ಇಳಿದ ಸೋಂಕಿತರ ಸಂಖ್ಯೆ: ಒಂದೇ ವಾರದಿಂದ ತುಮಕೂರಿನಲ್ಲಿ ನಿಯಂತ್ರಣಕ್ಕೆ ಬರುತ್ತಿದೆಯೇ ಕೊರೋನಾ?

ಕೊರೋನಾ ಸೋಂಕಿನಿಂದ ತೀವ್ರ ಆತಂಕಕ್ಕೊಳಗಾಗಿದ್ದ ತುಮಕೂರು ಜನತೆಗೆ ಶುಕ್ರವಾರ ಆರೋಗ್ಯ ಇಲಾಖೆ ನೀಡಿದ ಕೊರೋನಾ ಕುರಿತ ವರದಿಗಳು ತುಸು ನೆಮ್ಮದಿಯನ್ನು ನೀಡಿದೆ. 
ತುಮಕೂರು ಕೋವಿಡ್ ಕೇರ್ ಸೆಂಟರ್
ತುಮಕೂರು ಕೋವಿಡ್ ಕೇರ್ ಸೆಂಟರ್

ತುಮಕೂರು: ಕೊರೋನಾ ಸೋಂಕಿನಿಂದ ತೀವ್ರ ಆತಂಕಕ್ಕೊಳಗಾಗಿದ್ದ ತುಮಕೂರು ಜನತೆಗೆ ಶುಕ್ರವಾರ ಆರೋಗ್ಯ ಇಲಾಖೆ ನೀಡಿದ ಕೊರೋನಾ ಕುರಿತ ವರದಿಗಳು ತುಸು ನೆಮ್ಮದಿಯನ್ನು ನೀಡಿದೆ. 

ಬೆಂಗಳೂರಿನಿಂದ ತೆರಳಿದ್ದ 25 ಮಂದಿ ಕೆಎಸ್ಆರ್'ಪಿ ಸಿಬ್ಬಂದಿ, ಖಾಸಗಿ ಸುದ್ದಿ ವಾಹಿನಿಯ ಕ್ಯಾಮೆರಾ ಮ್ಯಾನ್ ಸೇರಿದಂತೆ ಕಳೆದ ವಾರ 95 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಬಳಿಕ ದಿನದಿಂದ ದಿನಕ್ಕೆ ಇಳಿಕೆಯಾದ ಸೋಂಕಿತರ ಸಂಖ್ಯೆ ಇದೀಗ 95ರಿಂದ 18ಕ್ಕೆ ಬಂದು ನಿಂತಿದೆ. 

ಕಳೆದ ಶನಿವಾರ ಹಾಗೂ ಭಾನುವಾರ 25ಕ್ಕೆ ತಲುಪಿದ ಸೋಂಕಿತರ ಸಂಖ್ಯೆ ಸೋಮವಾರ 35, ಮಂಗಳವಾರ 52, ಬುಧವಾರ 32, ಗುರುವಾರ 25 ಮತ್ತು ಶುಕ್ರವಾರ 18ಕ್ಕೆ ಬಂದಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಈ ವರೆಗೂ ಸೋಂಕಿತರ ಸಂಖ್ಯೆ 630ಕ್ಕೆ ಏರಿಕೆಯಾಗಿದ್ದು, ಇದರಲ್ಲಿ ಈಗಾಗಲೇ 285 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿನ್ನೂ 345 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಇನ್ನೂ ಜಿಲ್ಲೆಯಲ್ಲಿ 18 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆಂದು ತಿಳಿದುಬಂದಿದೆ. 

ಮತ್ತೊಂದು ಭರವಸೆಗಳ ಬೆಳವಣಿಗೆಗಳೇನೆಂದರೆ, ಈಗಾಗಲೇ ಸೋಂಕಿನಿಂದ ಗುಣಮುಖರಾದ ಕೆಲ ಸೋಂಕಿತ ವ್ಯಕ್ತಿಗಳು ಕ್ಯಾಮೆರಾಗಳ ಮುಂದೆ ಬರುತ್ತಿದ್ದು, ಇತರೆ ಸೋಂಕಿತರಿಗೆ ಧೈರ್ಯ ಹಾಗೂ ನೈತಿಯ ಸ್ಥೈರ್ಯ ಹೆಚ್ಚಿಸುವ ಕಾರ್ಯಗಳನ್ನು ಮಾಡುತ್ತಿದ್ದಾರೆ. ವೃದ್ಧ ವ್ಯಕ್ತಿಯೊಬ್ಬರು ಆರೋಗ್ಯ ಸಿಬ್ಬಂದಿಗಳ ಸಂಕಷ್ಟ ಕಂಡು ಮಾಧ್ಯಮಗಳ ಮುಂದೆ ಹೇಳಿಕೊಂಡು ಭಾವುಕರಾದರು. 

ಇನ್ನು ಜಿಲ್ಲೆಯಲ್ಲಿ ಗುಣಮುಖರಾಗುತ್ತಿರುವವರ ಸಂಖ್ಯೆ ಕೂಡ 49ಕ್ಕೆ ಏರಿಕೆಯಾಗಿದ್ದು, ಬುಧವಾರ ಹಾಗೂ ಗುರುವಾರ ಎರಡೂ ದಿನಗಳಲ್ಲಿ 45 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಸೋಂಕಿತರ ಸಂಖ್ಯೆ ಕುರಿತು ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ. ಇನ್ನೂ 1 ವಾರಗಳ ಕಾಲ ಅವಲೋಕನ ನಡೆಸಿ ಅಂತಿನ ನಿರ್ಧಾರಕ್ಕೆ ಬರಬಹುದಾಗಿದೆ. ಬೆಂಗಳೂರಿನಲ್ಲಿ ಲಾಕ್ಡೌನ್ ಇರುವುದರಿಂದ ಸೋಂಕು ಕಡಿಮೆಯಾಗಿದೆಯೇ ಎಂಬುದರ ಕುರಿತಂತೆಯೂ ಪರಿಶೀಲನೆ ನಡೆಸಬೇಕಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಬಿ.ನಾಗೇಂದ್ರಪ್ಪ ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com