ಸಂಸದ ಅನಂತ ಕುಮಾರ್ ಹೆಗಡೆ ವಿರುದ್ಧ ಖಲೀಸ್ತಾನ ಕೆಂಗಣ್ಣು

ಖಲೀಸ್ತಾನ ಉಗ್ರರ ಕೆಂಗಣ್ಣು ಇದೀಗ ಸಂಸದ ಅನಂತ ಕುಮಾರ್ ಹೆಗಡೆ ಮೇಲೆ ಬಿದ್ದಿದೆ. ಇದಕ್ಕೆ ಕಾರಣ ಇತ್ತೀಚೆಗೆ ಅವರು ಮಾಡಿದ್ದ ಟ್ವೀಟ್ ಕಾರಣ ಎನ್ನಲಾಗಿದೆ.
ಅನಂತ್ ಕುಮಾರ್ ಹೆಗ್ಡೆ
ಅನಂತ್ ಕುಮಾರ್ ಹೆಗ್ಡೆ

ಕಾರವಾರ: ಖಲೀಸ್ತಾನ ಉಗ್ರರ ಕೆಂಗಣ್ಣು ಇದೀಗ ಸಂಸದ ಅನಂತ ಕುಮಾರ್ ಹೆಗಡೆ ಮೇಲೆ ಬಿದ್ದಿದೆ. ಇದಕ್ಕೆ ಕಾರಣ ಇತ್ತೀಚೆಗೆ ಅವರು ಮಾಡಿದ್ದ ಟ್ವೀಟ್ ಕಾರಣ ಎನ್ನಲಾಗಿದೆ.

ಈ ಸಂಬಂಧ ನಿನ್ನೆ ಶಿರಸಿಯ ಮಾರುಕಟ್ಟೆ ಠಾಣೆಯಲ್ಲಿ ದೂರು ದಾಖಲಿಸಿರುವ ಸಂಸದ ಅನಂತಕುಮಾರ ಹೆಗಡೆ ರಾಷ್ಟ್ರೀಯ ಏಕಾಗ್ರತೆ ಹಾಗೂ ಅಸ್ತಿತ್ವಕ್ಕೆ ಭಂಗ ತರುವಂತಹ ಚಟುವಟಿಕೆಯಲ್ಲಿ ತೊಡಗಿರುವ ಖಲೀಸ್ಥಾನ ಚಳುವಳಿಗಾರರನ್ನು ದೇಶದ್ರೋಹದ ಆರೋಪದ ಅಡಿಯಲ್ಲಿ ಶಿಕ್ಷಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ಹಿಂದೆ ಸಂಸದ ಹೆಗಡೆ ಖಲೀಸ್ಥಾನದ ಕುರಿತು ಟ್ವಿಟ್ಟರ್ ಮೂಲಕ ಖಲೀಸ್ಥಾನ ಚಳುವಳಿಗಾರರ ವಿರುದ್ಧ ಜಾಹಿರಾತನ್ನು ಪ್ರಕಟಿಸಿದ್ದರು. ಈ ಕಾರಣಕ್ಕೆ ಚಳುವಳಿಗಾರರು ದೂರವಾಣಿ ಮೂಲಕ ಕೆಲ ದಿನಗಳ ಹಿಂದೆ ಸಂಪರ್ಕಿಸಲು ಪ್ರಯತ್ನಿಸಿದ್ದರು. ಆದರೆ ಹೆಗಡೆ ಪ್ರತಿಕ್ರಿಯಿಸಿರಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com