ಕೋವಿಡ್ ಗೆ ಬಿಬಿಎಂಪಿಯ ಮತ್ತೋರ್ವ ಸಿಬ್ಬಂದಿ ಸಾವು

ಬಿಬಿಎಂಪಿಯ ಪುಲಿಕೇಶಿನಗರ ಉಪವಿಭಾಗ ಕಚೇರಿಯ ಅಟೆಂಡರ್‌ ಒಬ್ಬರು ಕೋವಿಡ್‌ ಸೋಂಕಿನ ಚಿಕಿತ್ಸೆಗೆ ವೆಂಟಿಲೇಟರ್‌ ಸಿಗದೆ ಮೃತಪಟ್ಟಿದ್ದಾರೆ. 36 ವರ್ಷದ ರಘುವೇಲು ಮೃತಪಟ್ಟ ದುರ್ದೈವಿ. 
ರಘುವೇಲು
ರಘುವೇಲು
Updated on

ಬೆಂಗಳೂರು: ಬಿಬಿಎಂಪಿಯ ಪುಲಿಕೇಶಿನಗರ ಉಪವಿಭಾಗ ಕಚೇರಿಯ ಅಟೆಂಡರ್‌ ಒಬ್ಬರು ಕೋವಿಡ್‌ ಸೋಂಕಿನ ಚಿಕಿತ್ಸೆಗೆ ವೆಂಟಿಲೇಟರ್‌ ಸಿಗದೆ ಮೃತಪಟ್ಟಿದ್ದಾರೆ. 36 ವರ್ಷದ ರಘುವೇಲು ಮೃತಪಟ್ಟ ದುರ್ದೈವಿ. 

ರಘುವೇಲುಗೆ ಶುಕ್ರವಾರ ಜ್ವರ ಕಾಣಿಸಿಕೊಂಡಿದ್ದು, ಕೋವಿಡ್‌ ಪರೀಕ್ಷೆ ಮಾಡಿಸಿದಾಗ ಸೋಂಕು ದೃಢಪಟ್ಟಿತ್ತು. ಶನಿವಾರ ಬೆಳಿಗ್ಗೆ 
ಅವರನ್ನು ಸಿ.ವಿ.ರಾಮನ್‌ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಶನಿವಾರ ಮಧ್ಯಾಹ್ನದ ವೇಳೆ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು.ಅಲ್ಲಿ ವೆಂಟಿಲೇಟರ್ ವ್ಯವಸ್ಥೆ ಇಲ್ಲದ್ದರಿಂದ ಬೇರೆ ಹಲವು ಆಸ್ಪತ್ರೆಗಳಲ್ಲಿ ವಿಚಾರಿಸಿ, ಕೊನೆಯಲ್ಲಿ ದೇವನಹಳ್ಳಿಯ ಆಕಾಶ್‌ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ ಇರುವುದಾಗಿ ತಿಳಿದು  ಅಲ್ಲಿಗೆ ಸಾಗಿಸುವಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು ಎಂದು  ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com